ಮದ್ಯಪ್ರಿಯರಿಗೆ ಶಾಕ್ | ಇಂದಿನಿಂದ 3 ದಿನ ಎಣ್ಣೆ ಸಿಗಲ್ಲ!!!

0 7

ಸರ್ಕಾರದ ಇ- ಇಂಡೆಂಟ್ ಪದ್ಧತಿಗೆ ಮದ್ಯದಂಗಡಿ ಮಾಲೀಕರು ವಿರೋಧಿಸಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಮದ್ಯದಂಗಡಿ ಮಾಲೀಕರು ಮೂರು ದಿನ ಮದ್ಯ ಖರೀದಿಸದಿರಲು ನಿರ್ಧರಿಸಿದ್ದಾರೆ. ಸರ್ಕಾರದ ಇ ಇಂಡೆಎಂಟ್ ವಿರುದ್ಧ ಮದ್ಯದಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಜಿಲ್ಲಾವಾರು ವಿಭಾಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಒಂದೊಂದು ದಿನ ಮದ್ಯ ಮಾರಾಟವನ್ನು ನಿಲ್ಲಿಸಲಾಗಿತ್ತು.

ರಾಜ್ಯ ಪಾನೀಯ ನಿಗಮ ಆರಂಭಿಸಿರುವ ಹೊಸ ಇ-ಇಂಡೆಂಟ್ ವ್ಯವಸ್ಥೆ ಇದಾಗಿದ್ದು, ಬಾರ್, ವೈನ್ಸ್ ಮಾಲೀಕರು ಆನ್‌ಲೈನ್ ಮೂಲಕ ಮದ್ಯ ಖರೀದಿಸಬೇಕಾಗಿದೆ.

ಇಂದಿನಿಂದ(ಮಂಗಳವಾರ) 3 ದಿನ ಬೆಂಗಳೂರು ನಗರ, ಗ್ರಾಮಾಂತರದಲ್ಲಿ KSBLನಿಂದ ಮದ್ಯ ಖರೀದಿಸದಿರಲು ಮದ್ಯದಂಗಡಿ ಮಾಲೀಕರು ನಿರ್ಧಾರಕ್ಕೆ ಬಂದಿದ್ದಾರೆ.

ಹಾಗಾಗಿ ಮದ್ಯ ಪ್ರಿಯರಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದ್ದು, ಸರ್ಕಾರದ ಇ-ಇಂಡೆಂಟ್ ವಿರುದ್ಧ ಮದ್ಯದಂಗಡಿ ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ವಿರುದ್ಧ ವೈನ್ ಮರ್ಚೆಂಟ್ಸ್ ಅಸೋಸಿಯೇನ್‌ಗಳ ಒಕ್ಕೂಟ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೇ 16 ರಿಂದ ವಿವಿಧ ಜಿಲ್ಲೆಗಳಲ್ಲಿ ಒಂದೊಂದು ದಿನದಂತೆ ಮದ್ಯ ಖರೀದಿಗೆ ಬ್ರೇಕ್ ಹಾಕಲಾಗಿದ್ದು ಕೆಎಸ್ಬಿಎಲ್‌ಗಳಿಂದ ಎಣ್ಣೆ ಖರೀದಿ ಮಾಡದಿರಲು ಎಣ್ಣೆ ಅಂಗಡಿ ಮಾಲೀಕರು ತೀರ್ಮಾನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಖರೀದಿಸಲು ಎಣ್ಣೆ ಸಿಗಲ್ಲ ಎನ್ನಲಾಗಿದೆ. ಸ್ಟಾಕ್ ಇಟ್ಟಿಕೊಂಡಿರೋ ಅಂಗಡಿಗಳು ಮದ್ಯ ಮಾರಾಟ ಮಾಡಲಿವೆ. ಮೂರು ದಿನಗಳ ಕಾಲ ಮದ್ಯ ಖರೀದಿ ನಿಂತ್ರೆ, ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ ಉಂಟಾಗಲಿದೆ. ಜೊತೆಗೆ ಮದ್ಯ ಪ್ರಿಯರಿಗೂ ಎಣ್ಣೆ ಸಿಗದೆ ಪರದಾಡುವಂತಾಗುತ್ತೆ.

Leave A Reply