ಸಂಕಷ್ಟಕ್ಕೆ ಸಿಲುಕಿದ ಕಾಮಿಡಿಯನ್ ಭಾರತಿ ಸಿಂಗ್ | ಭಾರತಿ ಸಿಂಗ್ ವಿರುದ್ಧ ಎಫ್ ಐ ಆರ್ !!!

ಹಿಂದಿ ಕಿರುತೆರೆಯ ಜನಪ್ರಿಯ ಕಾಮಿಡಿಯನ್ ಭಾರತಿ ಸಿಂಗ್, ಎಲ್ಲರಿಗೂ ಚಿರಪರಿಚಿತ. ಆಕೆಯ ಕಾಮಿಡಿ ಟೈಮಿಂಗ್ ಎಲ್ಲವೂ ಸೂಪರ್. ಇತ್ತೀಚೆಗಷ್ಟೇ ತನ್ನ ಬಾಣಂತನ ಮುಗಿಸುವ ಮೊದಲೇ, ಕೆಲಸಕ್ಕೆ ಬಂದ ಭಾರತಿ ಭಾರೀ ಟ್ರೋಲ್ ಗೊಳಗಾಗಿದ್ದರು. ಈಗ ತಾವೇ ಆಡಿದ ಒಂದು ಮಾತಿನಿಂದ ಅವರು ಸಂಕಷ್ಟಕ್ಕೊಳಗಾಗಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಹಿಂದಿ ಕಿರುತೆರೆಯ ಜನಪ್ರಿಯ ನಿರೂಪಕಿ ಕಮ್ ಕಾಮಿಡಿಯನ್ ಭಾರತಿ ಸಿಂಗ್ ತಾವು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತಿ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.


Ad Widget

ಸಿಖ್ ಸಮುದಾಯದವರ ಮೀಸೆ ಮತ್ತು ಗಡ್ಡದ ಬಗ್ಗೆ ಭಾರತಿ ಸಿಂಗ್ ಈ ಹಿಂದೆ ಅವರೇ ಹೇಳಿದ ಹಳೇ ಜೋಕ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಖ್ ಸಮುದಾಯದವರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜಲಂಧರ್‌ನ ಅದಮ್‌ಪುರ್ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಭಾರತಿ ಸಿಂಗ್ ವಿರುದ್ಧ ರವಿದಾಸ್ ಟೈಗರ್ ಫೋರ್ಸ್ ಮುಖ್ಯಸ್ಥ ಜಸ್ಸಿ ತಲ್ಲನ್ ದೂರು ಕೊಟ್ಟಿದ್ದಾರೆ. ಸಿಖ್ ಸಮುದಾಯದವರ ಮೀಸೆ ಮತ್ತು ಗಡ್ಡದ ಬಗ್ಗೆ ಭಾರತಿ ಸಿಂಗ್ ಅಪಹಾಸ್ಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸೆಕ್ಷನ್ 295-A ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

“ಯಾರನ್ನೂ ನೋಯಿಸುವ ಉದ್ದೇಶದಿಂದ ನಾನು ಹಾಗೆ ಮಾತನಾಡಿಲ್ಲ. ನನ್ನನ್ನು ತಪ್ಪಾಗಿ ಭಾವಿಸಬೇಡಿ”ಎಂದು ಭಾರತಿ ಸಿಂಗ್ ಸ್ಪಷ್ಟನೆ ನೀಡಿದ್ದರು. “ನಾನು ನನ್ನ ಸ್ನೇಹಿತರೊಂದಿಗೆ ಕಾಮಿಡಿ ಮಾಡುತ್ತಿದ್ದೆ ಅಷ್ಟೇ. ಯಾವ ಸಮುದಾಯಕ್ಕೂ ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನಾನು ಕ್ಷಮೆ ಕೇಳುತ್ತಿದ್ದೇನೆ. ನಾನು ಪಂಜಾಬಿ ಹುಡುಗಿ, ಹುಟ್ಟಿದ್ದು ಅಮೃತಸರದಲ್ಲಿ, ಸಿಖ್ ಸಮುದಾಯದವರನ್ನು ನಾನು ಗೌರವಿಸುತ್ತೇನೆ. ನಾನು ಹೆಮ್ಮೆಯ ಪಂಜಾಬಿ’ ಎಂದು ಹೇಳಿದ್ದಾರೆ ಭಾರತಿ.

error: Content is protected !!
Scroll to Top
%d bloggers like this: