ಚಾರ್ಮಾಡಿ : ಸರ್ಕಾರಿ ಪ್ರೌಢಶಾಲೆಗೆ ಸಂಬಂಧಪಟ್ಟ ಸ್ಥಳದಲ್ಲಿ ತಲೆಯೆತ್ತಿದೆ ಮುಸ್ಲಿಂ ಪ್ರಾರ್ಥನಾ ಮಂದಿರ !! | ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ ನಿಂದ ಮನವಿ

ಚಾರ್ಮಾಡಿ ಗ್ರಾಮದ ಗಾಂಧಿನಗರ ಎಂಬಲ್ಲಿ ಸರಕಾರಿ ಪ್ರೌಢ ಶಾಲೆ ಕಕ್ಕಿಂಜೆ ಇಲ್ಲಿನ ಶಾಲೆಗೆ ಸಂಬಂಧ ಪಟ್ಟ ಸ್ಥಳದಲ್ಲಿ ಪಂಚಾಯತಿ ಪರವಾನಿಗೆ ಇಲ್ಲದೆ ಮುಸ್ಲಿಮರಿಗೆ ಸಂಬಂಧಿಸಿದ ಪ್ರಾರ್ಥನಾ ಮಂದಿರವನ್ನು ಕಟ್ಟಲು ಪ್ರಯತ್ನಿಸುತ್ತಿರುವ ಕುರಿತು ವಿಶ್ವ ಹಿಂದೂ ಪರಿಷತ್ ಚಾರ್ಮಾಡಿ ವತಿಯಿಂದ PDOಗೆ ಮನವಿ ಮಾಡಲಾಗಿದೆ.

ಹಿಂದೆ ಚಾರ್ಮಾಡಿ ಪಂಚಾಯತ್ ಮತ್ತು ತಾಲೂಕು ಆಡಳಿತಕ್ಕೆ ಸರ್ವೆ ಮಾಡಿ ಗಡಿ ಗುರುತು ಮಾಡಬೇಕೆಂದು ಮನವಿ ಕೊಟ್ಟರೂ ಯಾವುದೇ ಕ್ರಮವನ್ನು ಜರಗಿಸಿಲ್ಲ. 4 ಎಕರೆ 90 ಸೆಂಟ್ಸ್ ಜಾಗದಲ್ಲಿ ಈಗ 2 ಎಕರೆಯಷ್ಟು ಮಾತ್ರ ಉಳಿದಿದೆ. ಆದ್ದರಿಂದ ಈ ಅಕ್ರಮ ಕಟ್ಟಡವನ್ನು ಕೂಡಲೆ ತೆರವುಗೊಳಿಸಿ ಸ್ಥಳವನ್ನು ಶಾಲೆಗೆ ಬಿಟ್ಟುಕೊಡಲು ಆಗ್ರಹಿಸಿ ಚಾರ್ಮಾಡಿ, ಚಿಬಿದ್ರೆ, ನೆರಿಯ, ತೋಟತ್ತಾಡಿ ಗ್ರಾಮದ ಎಲ್ಲಾ ವಿದ್ಯಾಭಿಮಾನಿಗಳು, ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: