ರಸ್ತೆಯಲ್ಲಿ ಉಗುಳಿದ್ದಕ್ಕೆ ಬಸ್ ಚಾಲಕನಿಗೆ ಮನಬಂದಂತೆ ಥಳಿಸಿದ ಪೊಲೀಸ್ ಕಾನ್ಸ್ಟೇಬಲ್

0 13

ಬಸ್ ಚಾಲಕನೋರ್ವ ರಸ್ತೆಯಲ್ಲಿ ಉಗುಳಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಪೊಲೀಸ್ ಕಾನ್ ಸ್ಟೇಬಲ್ ಥಳಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಜಯಚಂದ್ರನ್ ಎಂದು ಗುರುತಿಸಲಾಗಿದೆ.

ಏಟು ತಿಂದ ವ್ಯಕ್ತಿಯ ತುಟಿ ಕಿತ್ತು ಬಂದಿದ್ದು ಮಾತ್ರವಲ್ಲದೇ, ಗಲ್ಲದಲ್ಲಿ ಗಾಯಗಳಾಗಿವೆ. ಸಂತ್ರಸ್ತ ಜಯಚಂದ್ರನ್ ಸರ್ಕಾರಿ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾನ್ಸ್ಟೇಬಲ್ ಲೂಯಿಸ್ ಹಲ್ಲೆ ಮಾಡಿದರೆಂದು ಆರೋಪ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದ ವೀಡಿಯೋ ಒಂದು ವೈರಲ್ ಆಗಿದೆ. ವೈರಲ್ ವೀಡಿಯೋದಲ್ಲಿ ಪೊಲೀಸರು ಜಯಚಂದ್ರನನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸುತ್ತಿರುವುದು ಮತ್ತು ಘಟನೆಯ ಸ್ಥಳದಿಂದ ಅವರನ್ನು ಕರೆದೊಯ್ಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ರಸ್ತೆಯಲ್ಲಿ ಉಗುಳಿದ್ದಕ್ಕೆ ಸುಮಾರು ಒಂದು ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಜಯಚಂದ್ರನ್ ಆರೋಪ ಮಾಡಿದ್ದಾರೆ.

ಆದರೆ, ಜಯಚಂದ್ರನ್ ಮಾಡಿದ ಆರೋಪವನ್ನು ಕಾನ್ಸ್ ಟೇಬಲ್ ನಿಕಾರಿಸಿದ್ದಾರೆ. ಅಲ್ಲದೆ, ಆತ ಉಗುಳಿದ್ದು ರಸ್ತೆಯ ಮೇಲಲ್ಲ ನನ್ನ ಮೇಲೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಾನ್ಸ್ಟೇಟೇಬಲ್ ಲೂಯಿಸ್, ಸಂತ್ರಸ್ತನಿಗೆ ಬೆದರಿಕೆ ಹಾಕುತ್ತಿರುವುದು ಸೆರೆಯಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯ ನಿವಾಸಿಗಳು ಪೊಲೀಸರನ್ನು ಪ್ರಶ್ನಿಸಿದರು. ಇದಾದ ಬಳಿಕ ಪೊಲೀಸರು ಗುಂಪನ್ನು ಚದುರಿಸಿದರು. ಈ ಸಂಬಂಧ ದೂರು ದಾಖಲಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.

Leave A Reply