ಫ್ಲ್ಯಾಟ್ ನಲ್ಲಿ ಶವವಾಗಿ ಪತ್ತೆಯಾದ 20 ರ ಹರೆಯದ ಕಿರುತೆರೆ ನಟಿ | ಚಿಕ್ಕ ವಯಸ್ಸಿಗೇ ಜೀವ ಕೊನೆಗಾಣಿಸಲು ಕಾರಣವೇನು? ಸಾವಿನ ಸುತ್ತ ಅನುಮಾನದ ಹುತ್ತ!!!

ಚಿತ್ರಲೋಕದ ಜಗಮಗಿಸುವ ಲೋಕದಲ್ಲಿ ಒಂದೊಂದಾಗಿ ಬಣ್ಣ ಕಳೆದುಕೊಳ್ಳುತ್ತಿರುವ ಎಳೆಯ ಜೀವಗಳು.ಇದಕ್ಕೆ ಖಿನ್ನತೆ ಕಾರಣವೋ ? ಈಗ ಈ ಬಣ್ಣದ ಲೋಕದ ಮತ್ತೊಂದು ಜೀವ ಶವವಾಗಿ ಪತ್ತೆಯಾಗಿದೆ.

 

ಜನಪ್ರಿಯ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಅವರು ಭಾನುವಾರ ಬೆಳಗ್ಗೆ ಕೋಲ್ಕತ್ತಾದ ಗರ್ಫಾ ಪ್ರದೇಶದಲ್ಲಿನ ತಮ್ಮ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ವೈದ್ಯರು ಆಕೆ ಮರಣ ಹೊಂದಿದ್ದಾಳೆ ಎಂದು ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಯುವ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

20ರ ಹರೆಯದ ಪಲ್ಲವಿ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಪಲ್ಲವಿ ಡೇ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಪಲ್ಲವಿ ಡೇ ಅವರು ತಮ್ಮ ಬಾಯ್ ಫ್ರೆಂಡ್ ಸಾಗ್ನಿಕ್ ಚಕ್ರವರ್ತಿ ಜೊತೆಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಗ್ನಿಕ್ ಚಕ್ರವರ್ತಿ ಅವರನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಪಲ್ಲವಿ ಸಾವಿನಿಂದಾಗಿ, ಅವರ ಅಭಿಮಾನಿಗಳು, ಆಪ್ತರು, ಸ್ನೇಹಿತರು ಅಘಾತಕ್ಕೆ ಒಳಗಾಗಿದ್ದಾರೆ.

ಪಲ್ಲವಿ ಅವರು ‘ರೇಶಮ್ ಜಪಿ’, ‘ಸರಸ್ವತಿ ಪ್ರೇಮ್’ ಮತ್ತು ‘ಅಮಿ ಸಿರಾಜರ್ ಬೇಗಂ’ಗಳಲ್ಲಿ ಮಾತ್ರವಲ್ಲದೇ, ‘ಮೊನ್ ಮನೆ ನಾ’ ಚಿತ್ರದಲ್ಲಿ ನಟಿಸಿದ್ದಾರೆ.

Leave A Reply

Your email address will not be published.