ಕಷ್ಟಪಟ್ಟು ಸಾಕಿ ಸಲುಹಿದ ತಮ್ಮ ಮಗ ನಮ್ಮನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಕೋರ್ಟ್ ಮೆಟ್ಟಿಲೇರಿದ ತಂದೆ | ಹೀಯಾಳಿಸಿದ ಮಗನಿಗೆ ಕೋರ್ಟ್ ನಲ್ಲೇ ಅಪ್ಪನ ಕಾಲು ತೊಳೆಸಿದ ಜಡ್ಜ್
ಇಂದಿನ ಕಾಲ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಪ್ರತಿಯೊಂದು ಮಗುವಿಗೂ ತನ್ನ ತಂದೆ-ತಾಯಿ ಕೇವಲ ತಾನು ಬೆಳೆದು ನಿಂತು ದೊಡ್ಡವನಾಗುವವರೆಗೆ ಮಾತ್ರ ಎಂಬ ಮಟ್ಟಿಗೆ. ಆದರೆ ಕಷ್ಟಪಟ್ಟು ಸಲುಹಿದ ತಂದೆ-ತಾಯಿಗೆ ತನ್ನ ಮಗು ಎಷ್ಟೇ ದೊಡ್ಡವನಾದರೂ ತನ್ನ ಪಾಲಿಗೆ ಪುಟ್ಟ ಕೂಸಿನಂತೆ ಕಾಣುತ್ತಾರೆ. ಇಂತಹ ನಿಸ್ವಾರ್ಥ ಮನಸ್ಸಿನ ಪೋಷಕರಿಗೆ ಅದೆಷ್ಟೋ ಮಕ್ಕಳು ಹೀಯಾಳಿಸಿ, ದೂರಮಾಡುವುದನ್ನು ನಾವು ಕಂಡಿದ್ದೇವೆ.
ಬೆಳೆದುನಿಂತ ಮಗ, ಮದುವೆಯಾಗಿ ತನ್ನ ಪತ್ನಿಯೊಂದಿಗೆ ಜೀವನ ನಡೆಸಲು ಆರಂಭಿಸಿದ ಬಳಿಕ ತನ್ನ ಹೆತ್ತವರನ್ನು ದೂರ ತಳ್ಳುವಂತಹ ಪ್ರಸಂಗಗಳು ನಡೆದಿದೆ. ಮದುವೆಗೂ ಮುಂಚೆ ಬೇಕಿದ್ದ ಅಪ್ಪ-ಅಮ್ಮ, ಮದುವೆಯ ಬಳಿಕ ಅಸಹ್ಯವೆನಿಸಿದರು. ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದರೂ , ಘಟನೆಗಳೇನೂ ಕಮ್ಮಿ ಆಗುತ್ತಿಲ್ಲ.
ಇದೀಗ ಅಂತಹುದೇ ಒಂದು ಘಟನೆ ಮಧ್ಯಪ್ರದೇಶದ ಜಬಲಪುರದಲ್ಲಿ ನಡೆದಿದ್ದು, ವಯಸ್ಸಾದ ಅಪ್ಪನನ್ನು ಮಗ ಮತ್ತು ಸೊಸೆ ಹೊರಹಬ್ಬಿದ್ದಾರೆ. ನೋವು ತಾಳಲಾರದ ಅಪ್ಪ, ಇವರಿಬ್ಬರ ವಿರುದ್ಧ ದೂರು ನೀಡಿದ್ದರು. ಇದೀಗ ಆ ಕೇಸ್ ನ ವಿರುದ್ಧ ಹಿರಿಜೀವ ಹೋರಾಡಿ ಜಯಗಳಿಸಿದ್ದು, ಮಗನಿಗೆ ಕೋರ್ಟ್ ಬುದ್ಧಿ ಕಲಿಸಿದೆ.
ಪ್ರಕರಣದ ವಿವರ:
ಆನಂದಗಿರಿ ಎನ್ನುವವರು ಮಗ ಮತ್ತು ಸೊಸೆಯ ವಿರುದ್ಧ
ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದೂರು ದಾಖಲು ಮಾಡಿದ್ದರು. “ಕಷ್ಟಪಟ್ಟು ಸಾಕಿ, ಸಲುಹಿದ ತಮ್ಮ ಮಗ ಪತ್ನಿ ಬಂದ ಮೇಲೆ ತಮ್ಮನ್ನು ಮನೆಯಿಂದ ಹೊರಕ್ಕೆ ಹಾಕಿ ಎಷ್ಟು ಹೀನಾಯವಾಗಿ ನೋಡಿಕೊಂಡ” ಎಂದು ಅವರು ಕೋರ್ಟ್ಗೆ ತಿಳಿಸಿದ್ದರು.
ಇವರ ಕಥೆ ಕೇಳಿದ ನ್ಯಾಯಾಧೀಶ ಆಶಿಶ್ ಪಾಂಡೆ ಅವರು
ತಕ್ಷಣವೇ ಮಗನನ್ನು ಕೋರ್ಟ್ಗೆ ಕರೆಸಿ ಛೀಮಾರಿ ಹಾಕಿದ್ದಾರೆ. “ಒಂದು ವೇಳೆ ಅಪ್ಪನನ್ನು ವಿನಯಪೂವರ್ಕವಾಗಿ ಮನೆಗೆ ಕರೆದುಕೊಂಡು, ಅವರನ್ನು ಚೆನ್ನಾಗಿ ನೋಡಿಕೊಳ್ಳದೇ ಹೋದರೆ ಗಂಭೀರ ಶಿಕ್ಷೆ ಎದುರಿಸಬೇಕಾಗುತ್ತದೆ” ಎಂದು ಮಗನ ಜೊತೆ ಅವನ ಹೆಂಡತಿಗೂ ಬುದ್ಧಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ನಂತರ ಯಾವ ರೀತಿ ಅಪ್ಪನನ್ನು ಮನೆಗೆ ಸ್ವಾಗತಿಸಬೇಕು ಎಂದು ತಿಳಿಸಿದ್ದಾರೆ.
ನ್ಯಾಯಾಧೀಶರ ಎಚ್ಚರಿಕೆಗೆ ಬೆದರಿದ ಮಗ, ತಂದೆಯನ್ನು
ಮನೆಗೆ ಕರೆದುಕೊಂಡು ಹೋಗಲು ಒಪ್ಪಿದ್ದಾನೆ. ಮಾತ್ರವಲ್ಲದೇ, ಅಲ್ಲಿಯೇ ಹಾಜರು ಇದ್ದ ಅಪ್ಪನ ಕಾಲಿಗೆ ಬಿದ್ದು, ಅವರ ಕಾಲು ತೊಳೆದು ನಮಸ್ಕರಿಸಿ ಕ್ಷಮೆ ಕೋರಿದ್ದಾನೆ. “ತನ್ನಿಂದ ತಪ್ಪುಆಗಿದ್ದು, ಮುಂದೆ ಹೀಗೆ ಮಾಡುವುದಿಲ್ಲ” ಎಂದಿದ್ದಾನೆ.
ಇದಾದ ಬಳಿಕ ಅರ್ಜಿಯನ್ನು ಅಲ್ಲಿಯೇ ಇತ್ಯರ್ಥಗೊಳಿಸಿದ
ನ್ಯಾಯಾಧೀಶರು ಮಗನಿಗೆ ಇನ್ನೊಮ್ಮೆ ಬುದ್ಧಿ ಹಾಗೂ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಆದರೆ, ಮಗ ಅದೆಷ್ಟು ದೊಡ್ಡ ತಪ್ಪು ಮಾಡಿದವರು ತನ್ನ ಅಪ್ಪನಿಗೆ ಅದು ಮುದ್ದಿನ ಮಗನೇ. ಹೀಗಾಗ ತಮ್ಮ ಮಗನಿಗೆ ಯಾವುದೇ ರೀತಿಯ ಶಿಕ್ಷೆ ಕೊಡಬೇಡಿ ಎಂದು ನ್ಯಾಯಾಧೀಶರಲ್ಲಿ ಕೋರಿಕೊಂಡಿದ್ದಾರೆ. ಈ ದೃಶ್ಯ ಅಲ್ಲಿ ನೆರೆದಿದ್ದ ಕಲ್ಲು ಹೃದಯವನ್ನು ಕೂಡ ಭಾವುಕರನ್ನಾಗಿ ಮಾಡಿಸಿದೆ.