ಶಿಕ್ಷಣ ಕೊಡಿಸುವ ನೆಪದಲ್ಲಿ 17 ವರ್ಷದ ಅಪ್ರಾಪ್ತೆಯೋರ್ವಳ ‘ಡಿಜಿಟಲ್ ರೇಪ್’ :‌ 81 ವರ್ಷದ ವರ್ಣಚಿತ್ರಕಾರ ಅರೆಸ್ಟ್! ಅಷ್ಟಕ್ಕೂ ಡಿಜಿಟಲ್ ರೇಪ್ ಎಂದರೇನು ?

81 ವರ್ಷದ ಮುದುಕನೋರ್ವನನ್ನು ನೊಯ್ಡಾ ಪೊಲೀಸರು 17 ವರ್ಷದ ಬಾಲಕಿಯ ‘ ಡಿಜಿಟಲ್ ಅತ್ಯಾಚಾರ’ ಆರೋಪದ ಮೇಲೆ ಬಂಧಿಸಿದ್ದಾರೆ. ಈತನ ಹೆಸರು ಮೌರಿಸ್ ಎಂದು. ಸಂತ್ರಸ್ತ ಯುವತಿಯೊಂದಿಗೆ ಈತ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂಬ ಆರೋಪದಲ್ಲಿ, ಈತನನ್ನು ಬಂಧಿಸಲಾಗಿದೆ.

ಸಂತ್ರಸ್ತೆ 17 ವರ್ಷದ ಬಾಲಕಿಯೊಂದಿಗೆ ವಾಸಿಸುತ್ತಿದ್ದ ಮಹಿಳೆಯೋರ್ವಳು ಈತನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು, ನಂತರ ಪೊಲೀಸರು ತನಿಖೆ ಆರಂಭಿಸಿದಾಗ, ಆರೋಪಿ ಮೊದಲು ತಾನು ಬಾಲಕಿಯ ಗಾರ್ಡಿಯನ್ ಎಂದು ಹೇಳಿದ್ದಾನೆ. ಆದರೆ ಆತ ಆಗಾಗ್ಗೆ ಅಶ್ಲೀಲ ವೀಡಿಯೋಗಳನ್ನು ತೋರಿಸಿ ಬಾಲಕಿಯ ಮೇಲೆ ಜೊತೆ ಅತ್ಯಾಚಾರ ನಡೆಸಿ, ಕಿರುಕುಳ ನೀಡುತ್ತಿದ್ದನು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

ಸಂತ್ರಸ್ತೆ ಹೇಳುವ ಪ್ರಕಾರ, ನಾನು 10 ವರ್ಷವಾಗಿದ್ದಾಗ ಮೌರಿಸ್ ಆತನ ಮನೆಗೆ ಕರೆತಂದಿದ್ದ. ತಂದೆಯ ಬಳಿ ಆಕೆಗೆ ಶಿಕ್ಷಣ ಕೊಡಿಸುವುದಾಗಿ ಹೇಳಿ ಆತ ತನ್ನನ್ನು ಕರೆತಂದಿದ್ದ, ಆದರೆ ಆತ ಆ ರೀತಿ ಮಾಡದೆ ದಿನಗಳೆದಂತೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದನ್ನು ವಿರೋಧಿಸಿದಾಗ ಥಳಿಸಿದ್ದಾನೆ‌. ಅಶ್ಲೀಲ ಚಿತ್ರ ತೋರಿಸಿ ನನ್ನ ಖಾಸಗಿ ಅಂಗವನ್ನು ಮುಟ್ಟುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಮೌರಿಸ್ ಮೊದಲು ಹಿಂದೂ ಆಗಿದ್ದು ನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಗೊಂಡಿದ್ದ. 22 ವರ್ಷದ ಹಿಂದೆ, ಹೆಂಡತಿಯೊಂದಿಗೆ ನೊಯ್ಡಾಗೆ ಬಂದಿದ್ದ ಈತ, ಸ್ವಲ್ಪ ದಿನದ ನಂತರ ದೆಹಲಿಯ ಛಾಯಾಚಿತ್ರ ಪ್ರದರ್ಶನದಲ್ಲಿ ಬೇರೊಂದು ಮಹಿಳೆಯ ಪರಿಚಯ ಮಾಡಿ, ಆಕೆಯನ್ನು ತನ್ನ ಮನೆಗೆ ಕರೆತಂದಿದ್ದನಂತೆ. ಇದರಿಂದ ಈತನ ಹೆಂಡತಿ ಸಿಟ್ಟುಗೊಂಡು ಮನೆ ಬಿಟ್ಟು ಹೋಗಿದ್ದಳಂತೆ.

ಮೌರಿಸ್ ಜೊತೆ ಇರಲು ಬಂದಿದ್ದ ಮಹಿಳೆ ಡೆಹ್ರಾಡೂನ್ ಮೂಲದವರು. ಡಿಜಿಟಲ್ ಅತ್ಯಾಚಾರದ ವಿಷಯವು ಮುನ್ನೆಲೆಗೆ ಬಂದಿರುವ ಅಪ್ರಾಪ್ತ ಬಾಲಕಿ ಶಿಮ್ಲಾದ ಮೌರಿಸ್ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯ ಮಗಳು.

ಡಿಜಿಟಲ್ ರೇಪ್ ಎಂದರೆ ಹುಡುಗಿ ಅಥವಾ ಹುಡುಗನನ್ನು ಇಂಟರ್ನೆಟ್ ಮೂಲಕ ಶೋಷಣೆ ಮಾಡುವುದು ಎಂದಲ್ಲ. ಈ ಪದವು ಡಿಜಿಟ್ ಮತ್ತು ರೇಪ್ ಎಂಬ ಎರಡು ಪದಗಳಿಂದ ಕೂಡಿದೆ. ಡಿಜಿಟ್ ಅಂದರೆ ಅಂಕಿ (ಸಂಖ್ಯೆ) ಎಂದರ್ಥ. ಇಂಗ್ಲೀಷ್ ನಿಘಂಟಿನ ಪ್ರಕಾರ ಬೆರಳು, ಹೆಬ್ಬೆರಳು, ಕಾಲ್ಬೆರಳು. ಇಲ್ಲಿ ದೇಹದ ಭಾಗಗಳನ್ನು ಅಂಕೆಯೊಂದಿಗೆ ಸಂಬೋಧಿಸಲಾಗುತ್ತದೆ.

ಡಿಜಿಟಲ್ ಮೂಲಕ ನಡೆಯುವ ಲೈಂಗಿಕ ಕಿರುಕುಳವನ್ನು ‘ಡಿಜಿಟಲ್ ರೇಪ್’ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಡಿಜಿಟಲ್ ಅತ್ಯಾಚಾರಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಮಹಿಳೆಯ ಖಾಸಗಿ ಭಾಗದಲ್ಲಿ ಬೆರಳುಗಳನ್ನು ಬಳಸಲಾಗುತ್ತದೆ. ನಿರ್ಭಯಾ ಪ್ರಕರಣದ ನಂತರ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಘಟನೆಗಳನ್ನು ತಡೆಯಲು ಡಿಜಿಟಲ್ ರೇಪ್‌ನಲ್ಲಿ ಕಠಿಣ ಶಿಕ್ಷೆಯನ್ನು ಸಹ ಮಾಡಲಾಗಿದೆ.

Leave A Reply

Your email address will not be published.