ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಮಂಟಪದಲ್ಲೇ ಅಂತ್ಯಗೊಂಡ ವಧು | ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಯಿತು ಸತ್ಯ

ತನ್ನ ಮದುವೆಯ ಪ್ರತಿಯೊಂದು ಹೆಜ್ಜೆಲೂ ಖುಷಿ-ಖುಷಿಯಾಗಿಯೇ ಇದ್ದು, ಇನ್ನೇನು ತಾಳಿ ಭಾಗ್ಯವನ್ನು ಪಡೆದು ಸುಮಂಗಲೆಯಾಗಿ ಜೀವನ ನಡೆಸಬೇಕಾಗಿದ್ದ ವಧು ಮದುವೆ ಮಂಟಪದಲ್ಲೇ ಅಂತ್ಯಗೊಂಡ ಘಟನೆಗೆ ಇದೀಗ ಟ್ವಿಸ್ಟ್ ಸಿಕ್ಕಿದೆ.

 

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಈ ಮದುವೆಯಲ್ಲಿ , ನಾಗೋಟಿ ಶಿವಾಜಿ ಎಂಬ ಯುವಕನ ಜತೆ ಹಸೆಮಣೆ ಏರಿದ್ದ ಸೃಜನಾ, ಸಂಪ್ರದಾಯದಂತೆ ವೀಳ್ಯದೆಲೆ ಶಾಸ್ತ್ರದಲ್ಲಿ ಭಾಗಿಯಾಗಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಳು.

ಆಕೆಯ ಸಾವಿನಿಂದ ಗಾಬರಿಗೊಂಡ ಕುಟುಂಬಸ್ಥರು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಸೃಜನಾಳ ದೇಹದಲ್ಲಿ ವಿಷ ಪತ್ತೆಯಾಗಿದೆ. ಇಡೀ ಮದುವೆಯ ಸಮಯದಲ್ಲಿ ನಗುನಗುತ್ತಲೇ ಇದ್ದಾಕೆ, ಫೋಟೋಗೂ ವರನ ಜತೆ ನಗುತ್ತಲೇ ಪೋಸ್​ ಕೊಟ್ಟಾಕೆ ಮದುವೆಯ ಮುನ್ನ ವಿಷ ಸೇವಿಸಿದ್ದಳು ಎಂದರೆ ನಂಬುವುದು ಎಲ್ಲರಿಗೂ ಅಸಾಧ್ಯವೇ ಆಗಿದೆ. ಆದರೆ ನಿಜಕ್ಕೂ ಆಕೆಯೇ ವಿಷ ಸೇವಿಸಿದ್ದಳೇ ಅಥವಾ ಯಾರಾದರೂ ಈಕೆಯ ಆಹಾರದಲ್ಲಿ ವಿಷ ಹಾಕಿದ್ದಾರೆಯೇ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

ಹೊಸ ಕನ್ನಡ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

https://chat.whatsapp.com/FbPlbHZ3AZiBoOtzMVYNKY

ಈ ನಿಗೂಢವನ್ನು ಪೊಲೀಸರು ಭೇದಿಸಲು ಪ್ರಯತ್ನಿಸುತ್ತಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

Leave A Reply

Your email address will not be published.