ಮಂಗಳೂರು : ಯುವತಿಗೆ ಮದುವೆಯಾಗುವ ಆಮಿಷವೊಡ್ಡಿ ಅತ್ಯಾಚಾರ | ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ಹಣ ವಸೂಲಿ ,ಆರೋಪಿ ಶಾನ್ ನವಾಸ್ ಬಂಧನ

ಮಂಗಳೂರು : ಮೂಡಬಿದಿರೆಯ ಯುವತಿಯೊಬ್ಬಳನ್ನು ಮದುವೆಯಾಗುವ ಅಮಿಷವೊಡ್ಡಿ ಆಕೆಗೆ ಡ್ರಗ್ಸ್ ನೀಡಿ, ನಂತರ ಅತ್ಯಾಚಾರ ನಡೆಸಿ ಆಕೆಯಿಂದ ಹಣವನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 

ಮೂಡಬಿದಿರೆ ನಿವಾಸಿ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಹಣವನ್ನು ಸುಲಿಗೆ ಮಾಡಿದ್ದು, ಅಲ್ಲದೇ ಆಕೆಗೆ ಮಾದಕ ವಸ್ತುಗಳನ್ನು ಬಲವಂತವಾಗಿ ಸೇವನೆ ಮಾಡಿಸಿ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್ ನಲ್ಲಿ ಚಿತ್ರಿಕರಣ ಮಾಡಿ ನಂತರ ಹಣವನ್ನು ನೀಡಬೇಕೆಂದು ಬೆದರಿಕೆ ಹಾಕಿ 1 ಲಕ್ಷದ 50 ಸಾವಿರ ರೂ ಸುಲಿಗೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಿಧ ಕಡೆಗಳಲ್ಲಿನ ಲಾಡ್ಜ್ ಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ಈ ಬಗ್ಗೆ ನೊಂದ ಯುವತಿಯು ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬಳಿಕ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

ಬಂಧಿತ ಆರೋಪಿ ಉಳ್ಳಾಲದ ಪೆರ್ಮನ್ನೂರು ಗ್ರಾಮದ ಶಾನ್ ನವಾಸ್ (36) ಎನ್ನುವವನಾಗಿದ್ದಾನೆ.ಬಂಧಿತನನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

ಆರೋಪಿಯು ಈ ಹಿಂದೆ 2019 ಹಾಗೂ 2020 ರಲ್ಲಿ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಮಾದಕ ವಸ್ತು ಮಾರಾಟದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ನೊಂದ ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಆಕೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.