ಇನ್ಮುಂದೆ ಜೈಲಿನಲ್ಲಿ VIP ರೂಮ್ ಸಂಸ್ಕೃತಿಗೆ ಬೀಳಲಿದೆ ಬ್ರೇಕ್ !! | ಈ ಕುರಿತು ಹೊಸ ಆದೇಶ ಹೊರಡಿಸಿದ ಸರ್ಕಾರ

ಇನ್ಮುಂದೆ ಜೈಲಿನಲ್ಲಿ ವಿಐಪಿ ರೂಮ್ ಸಂಸ್ಕೃತಿಗೆ ಬ್ರೇಕ್ ಬೀಳಲಿದೆ. ‌ಈ ಸಂಸ್ಕೃತಿಯನ್ನು ಕೊನೆಗೊಳಿಸುವ ಪ್ರಯತ್ನದಲ್ಲಿರುವ ಪಂಜಾಬ್‍ನ ಭಗವಂತ್ ಮಾನ್ ಸರ್ಕಾರವು ಜೈಲಿನಲ್ಲಿರುವ ಎಲ್ಲಾ ವಿಐಪಿ ಕೊಠಡಿಗಳನ್ನು ಜೈಲು ನಿರ್ವಹಣಾ ಬ್ಲಾಕ್‍ಗಳನ್ನಾಗಿ ಪರಿವರ್ತನೆ ಮಾಡುವಂತೆ ಆದೇಶ ಹೊರಡಿಸಿದೆ.

 

ಈ ಬಗ್ಗೆ ಸಿಎಂ ಭಗವಂತ್ ಮಾನ್ ಅವರು ಮಾತನಾಡಿ, ಜೈಲು ಸಿಬ್ಬಂದಿಯ ಸುಗಮ ಕಾರ್ಯ ನಿರ್ವಹಣೆಯನ್ನು ಖಚಿತ ಪಡಿಸಿಕೊಳ್ಳಲು ಎಲ್ಲಾ ವಿಐಪಿ ಕೊಠಡಿಗಳನ್ನು ಜೈಲು ನಿರ್ವಹಣಾ ಬ್ಲಾಕ್‍ಗಳನ್ನಾಗಿ ಪರಿವರ್ತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಜೈಲು ಖೈದಿಗಳಿಂದ ಮೊಬೈಲ್ ಫೋನ್ ವಶಪಡಿಸಿಕೊಂಡ ಬಗ್ಗೆ ಮಾತನಾಡಿದ ಅವರು, ಜೈಲು ಆವರಣದಲ್ಲಿ ದರೋಡೆಕೋರರಿಂದ 710 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದೇವೆ. ಅಷ್ಟೇ ಅಲ್ಲದೇ ಫೋನ್‍ಗಳನ್ನು ಒಳಗೆ ಪಡೆದವರ ವಿರುದ್ಧವೂ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Leave A Reply

Your email address will not be published.