ಆಮ್ ಆದ್ಮಿ ಪಕ್ಷ ಸೇರಿದ ನಟಿ ಕಂಗನಾ

ಬಾಲಿವುಡ್ ನ ಹಾಟೆಸ್ಟ್ ‌ನಟಿ ಆಮ್ ಆದ್ಮಿ ಪಕ್ಷ ಸೇರಿಕೊಂಡಿದ್ದಾರೆ. ಹೌದು, ಗ್ರೇಟ್ ಗ್ರ್ಯಾಂಡ್ ಮಸ್ತಿ ಸಿನಿಮಾದ ಮೂಲಕ ಖ್ಯಾತಿ ಗಳಿಸಿರುವ ಕಂಗನಾ ಶರ್ಮಾ ಇದೀಗ ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ. ಪಕ್ಷದ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಯಾಗುತ್ತಿದ್ದಂತೆ ತಾರೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

 

ಆಮ್ ಆದ್ಮಿ ಪಕ್ಷ ಎಲ್ಲೆಡೆ ತನ್ನ ವಿಸ್ತಾರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಪಕ್ಷಕ್ಕೆ ಸೇರುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ನಟಿ ಕಂಗನಾ ಶರ್ಮಾ ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ.

ಗ್ರೇಟ್ ಗ್ರ್ಯಾಂಡ್ ಮಸ್ತಿ ಎಂಬ ಅಡಲ್ಟ್ ಕಾಮಿಡಿ ಸಿನಿಮಾದ ಮೂಲಕ ಖ್ಯಾತಿ ಪಡೆದಿದ್ದ ಕಂಗನಾ ಆಮ್ ಆದ್ಮಿ ಪಕ್ಷವನ್ನು ಸೇರಿದ್ದಾರೆ.

ಕಂಗನಾ ಆಮ್ ಆದ್ಮಿ ಪಾರ್ಟಿ ಸೇರಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗುತ್ತಿದ್ದಾರೆ. ಫುಲ್ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಾ ಆಪ್ ಪಕ್ಷದ ವಿಚಾರವಾಗಿಯೂ ಟ್ರೋಲ್ ಮಾಡುತ್ತಿದ್ದಾರೆ.

ಆಮ್ ಆದ್ಮಿ ಪಕ್ಷ ಸೇರ್ಪಡೆ ಬಗ್ಗೆ ಕಂಗನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆ ನಿರಂತರವಾವಿರಲಿ. ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ. ಟ್ರೋಲ್ ಮಾಡುವವರ ಜೊತೆಗೆ ನಟಿ ಕಂಗನಾಗೆ ಹಾರೈಸುವವರು ಹೆಚ್ಚಾಗಿದ್ದಾರೆ. ಹಾಟ್ ಹಾಟ್ ಪಾತ್ರಗಳಿಗೆ ಸೀಮಿತವಾಗಿ ಉಳಿದ ನಟಿ ಕಂಗನಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Leave A Reply

Your email address will not be published.