ನೀರೆಂದರೆ ಈಕೆಗೆ ಅಲರ್ಜಿ! ಮೈಗೆ ನೀರು ಸೋಕಿಸಲ್ಲ ಈ ಪೋರಿ

15 ವರ್ಷ ವಯಸ್ಸಿನ ಹುಡುಗಿಯೊಬ್ಬಳಿಗೆ ನೀರಿನಿಂದ ತುಂಬಾ ಅಲರ್ಜಿ ಇದೆ. ನೀರು ಕುಡಿದರೆ ವಾಂತಿಯಾಗುತ್ತದೆ. ಸ್ನಾನ ಮಾಡಿದರೆ ದೇಹದಲ್ಲಿ ತುರಿಕೆ ಉಂಟಾಗುತ್ತದೆ. ಮಳೆ ಬಂದಾಗ ಅಥವಾ ಸ್ನಾನ ಮಾಡುವಾಗ ನೀರು ಮೈ ಮೇಲೆ ಬಿದ್ದರೆ ಚರ್ಮದ ಮೇಲೆ ಆಸಿಡ್ ಬಿದ್ದಂತೆ ಭಾಸವಾಗುತ್ತದೆ ಅಬಿಗೈಲ್ ಬೆಕ್‌ ಹೇಳಿದ್ದಾರೆ.

 

ಯುಎಸ್ ರಾಜ್ಯದ ಅರಿಜೋನಾದ ಟಕ್ಸನ್‌ನಿಂದ ಅಬಿಗೈಲ್ ಬೆಕ್, ಅಕ್ವಾಜೆನಿಕ್ ಉರ್ಟೇರಿಯಾರಿಯಾದಿಂದ ಬಳಲುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಅವರು 13 ವರ್ಷ ವಯಸ್ಸಿನವರಾಗಿದ್ದಾಗ ಅವರಲ್ಲಿ ರೋಗಲಕ್ಷಣಗಳು ಮೊದಲು ಕಾಣಿಸಿಕೊಂಡವು. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ.

ಅಬಿಗೈಲ್ ಬೆಕ್‌ನ ವಿಚಿತ್ರ ಪರಿಸ್ಥಿತಿಯನ್ನು ಸುಧಾರಿಸಲು ವೈದ್ಯರು ಆಕೆಗೆ ಪುನರ್ಜಲೀಕರಣ ಮಾತ್ರೆಗಳನ್ನು ಸೂಚಿಸಿದ್ದಾರೆ. ಅಬಿಗೈಲ್ ಆರಂಭದಲ್ಲಿ ತನ್ನ ಮನೆಯಲ್ಲಿನ ನೀರಿನಲ್ಲಿ ಏನಾದರೂ ತೊಂದರೆಯಿದೆ ಎಂದು ಭಾವಿಸಿದಳು. ಇನ್ನು ಕೆಲವೊಮ್ಮೆ ತನಗೆ ಉಂಟಾಗುತ್ತಿರುವುದು ಚರ್ಮ ಅಲರ್ಜಿ ಎಂದುಕೊಂಡಳು. ಆದರೆ ಕಾಲಾನಂತರ ರೋಗಲಕ್ಷಣಗಳು ಉಲ್ಬಣಗೊಂಡಿತು.

ಒಂದು ವರ್ಷಕ್ಕೂ ಹೆಚ್ಚು ಕಾಲ ಒಂದು ಲೋಟ ನೀರನ್ನೂ ಕುಡಿದಿಲ್ಲ ಈಕೆ. ಹಣ್ಣಿನ ರಸಗಳು ಅಥವಾ ತಂಪು ಪಾನೀಯಗಳನ್ನು ಮಾತ್ರ ಸೇವಿಸುತ್ತಾಳೆ

Leave A Reply

Your email address will not be published.