SSLC ನಂತರ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿವೇತನಗಳಾವವು? ಇಲ್ಲಿದೆ ಕಂಪ್ಲೀಟ್ ವಿವರ !

ರಾಜ್ಯ ಸರ್ಕಾರದಿಂದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅನೇಕ ಇಲಾಖೆಗಳು ಮತ್ತು ನಿಗಮಗಳು ವಿದ್ಯಾರ್ಥಿವೇತನವನ್ನು ಪ್ರತಿ ವರ್ಷ ನೀಡುತ್ತದೆ. ಈ ವಿದ್ಯಾರ್ಥಿವೇತನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡುತ್ತದೆ. ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ನೀಡುವ ಕೆಲವು ವಿದ್ಯಾರ್ಥಿವೇತನಗಳ ಪಟ್ಟಿ ಇಲ್ಲಿದೆ.

  1. ಸಾಂದೀಪನಿ ಶಿಷ್ಯವೇತನ

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಈ ಶಿಷ್ಯವೇತನವನ್ನು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳಿಗೆ ಈ ಉದ್ದೇಶಗಳಿಗಾಗಿ ನೀಡಲಾಗುತ್ತದೆ.

• ಪಠ್ಯ ಪುಸ್ತಕಗಳ ಖರೀದಿಗೆ

• ಎಲೆಕ್ಟ್ರಾನಿಕ್ ಉಪಕರಣಗಳು (ಲ್ಯಾಪ್‌ಟಾಪ್, ಮೊಬೈಲ್) ಸೇರಿದಂತೆ ಮುಂತಾದ ಅಧ್ಯಯನ ಸಲಕರಣೆಗಳನ್ನು ಪಡೆಯುವುದಕ್ಕೆ.

• ಹಾಸ್ಟೆಲ್ ಶುಲ್ಕ ಭರಿಸಲು

• ಸಂಚಾರ, ಬಸ್‌ಪಾಸ್ ಮತ್ತು ಇತರೆ ವೆಚ್ಚಗಳಿಗಾಗಿ ನೀಡಲಾಗುತ್ತದೆ.

ಅರ್ಹತೆಗಳು

• ವಾರ್ಷಿಕ ಆದಾಯ ಎಂಟು ಲಕ್ಷಕ್ಕಿಂತ ಕಡಿಮೆ ಇರಬೇಕು.

• ಅರ್ಜಿಯೊಂದಿಗೆ EWS ಪ್ರಮಾಣಪತ್ರ ಮತ್ತು ಬ್ರಾಹ್ಮಣ ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು.

• SSLC ನಂತರ ಸರ್ಕಾರಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾನ್ಯತೆ ಪಡೆದ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.

• ಈ ವಿದ್ಯಾರ್ಥಿವೇತನವನ್ನು ಶೇ. 33 ರಷ್ಟನ್ನು ವಿದ್ಯಾರ್ಥಿಯನಿರಿಗೆ ನೀಡಲಾಗುತ್ತದೆ. ಶೇ. 5ರಷ್ಟನ್ನು ವಿಶೇಷ ಚೇತನರಿಗೆ ನೀಡಲಾಗುತ್ತದೆ. ಅದರಲ್ಲೂ ಅನಾಥರು ಮತ್ತು ಒಂಟಿ ಪೋಷಕರಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ

ಈ ಯೋಜನೆಯನ್ನು 2021ರಲ್ಲಿ ಜಾರಿಗೆ ತರಲಾಯಿತು.
ಇದರ ಮುಖ್ಯ ಉದ್ದೇಶ ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗಾಗಿ ಕರ್ನಾಟಕ ಸರಕಾರ ಈ ವಿದ್ಯಾರ್ಥಿ ವೇತನ ನೀಡುತ್ತದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿವಿಧ ಕೋರ್ಸ್‌ಗಳಿಗೆ ಸೇರುವ ರೈತ ಮಕ್ಕಳಿಗೆ ನೆರವಾಗಲು ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ವಾರ್ಷಿಕವಾಗಿ ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿಯುಸಿ, ಐಟಿಐ, ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆದವರಿಗೆ 2,500 ರೂಪಾಯಿ ನೀಡಲಾಗುತ್ತದೆ.

ಎಸ್‌ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನದಲ್ಲಿ, ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಹಣಕಾಸಿನ ನೆರವು ನೀಡಲಾಗುತ್ತದೆ. ಕೋರ್ಸ್ ಶುಲ್ಕ 8 ಲಕ್ಷದಿಂದ 15 ಲಕ್ಷದವರೆಗೆ ಇದ್ದರೆ ಶುಲ್ಕದ ಶೇ.50 ಭಾಗವನ್ನು ವಿದ್ಯರ್ಥಿವೇತನ ನೀಡಲಾಗುತ್ತದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಿಗುವ
ವಿದ್ಯಾರ್ಥಿವೇತನಗಳು

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ- ಆಹಾರ ಮತ್ತು ವಸತಿ ವಿದ್ಯಾರ್ಥಿವೇತನ ಯೋಜನೆ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಯಾವ ವಿದ್ಯಾರ್ಥಿಗೆ ಹಾಸ್ಟೆಲ್ ಸೌಲಭ್ಯ ಇರುವುದಿಲ್ಲ ಅಂತಹ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ತಿಂಗಳಿಗೆ 1,500 ರೂ. ವರ್ಗಾಯಿಸಲಾಗುತ್ತದೆ.

8ನೆ ತರಗತಿಯ ನಂತರದ ವಿದ್ಯಾರ್ಥಿಗಳು ಅರ್ಜಿ
ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನೂ ಒಬಿಸಿ ವರ್ಗದ
ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ
ನೀಡಲಾಗುತ್ತದೆ. ಇದರ ಜೊತೆ ಉನ್ನತ ಶಿಕ್ಷಣದ
ಕೋರ್ಸ್‌ಗಳ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

ಕಾರ್ಮಿಕ ಮಂಡಳಿಯಿಂದ ವಿದ್ಯಾರ್ಥಿವೇತನ

ಕರ್ನಾಟಕ ಕಾರ್ಮಿಕ ಮಂಡಳಿಯನ್ನು ಕಾರ್ಮಿಕರ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿದೆ. ಅಸಂಘಟಿತ ಕಾರ್ಮಿಕರ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿವಿಧ ತರಗತಿಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಸೌಲಭ್ಯ ದೊರೆಯುತ್ತದೆ.

8 ರಿಂದ 10 ನೇ ತರಗತಿವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ 3,000 ರೂಪಾಯಿ ನೀಡಲಾಗುತ್ತದೆ. ಪಿಯುಸಿ/ಐಟಿಐ/ ಡಿಪ್ಲೊಮಾ ಓದುತ್ತಿರುವ ವಿದ್ಯಾರ್ಥಿಗಳಿಗೆ 4,000 ರೂಪಾಯಿ, ಪದವಿ ಕೋರ್ಸ್ ಓದುತ್ತಿರುವವರಿಗೆ 5,000 ರೂಪಾಯಿ, ಸ್ನಾತಕೋತ್ತರ ಕೋರ್ಸ್‌ಗಳಿಗೆ 6,000 ರೂಪಾಯಿ ಮತ್ತು ಇಂಜಿನಿಯರಿಂಗ್ / ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವವರೆಗೆ ವರ್ಷಕ್ಕೆ 10,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಅರ್ಹತೆಗಳು : ಹಿಂದಿನ ವರ್ಷದ ಅಂತಿಮ ಪರೀಕ್ಷೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳು 50% ಮತ್ತು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು 45% ಅಂಕ ಗಳಿಸಿರಬೇಕು.

Leave A Reply

Your email address will not be published.