ಹುಡುಗನ ಜೊತೆ ಸೆಲ್ಫೀ ಕ್ಲಿಕ್ಕಿಸಿ, ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದ ನಟಿ ರಮ್ಯಾ |ಆ ಕೂತೂಹಲಕ್ಕೆ ತೆರೆ ಎಳೆದ ಸ್ಯಾಂಡಲ್ ವುಡ್ ಕ್ವೀನ್!

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾ ರನ್ನು ಆರಾಧಿಸುವ ಅಭಿಮಾನಿಗಳಿಗೆ ಕಮ್ಮಿ ಇಲ್ಲ. ಸಿನಿಮಾಗಳಿಂದ ದೂರನೇ ಉಳಿದುಕೊಂಡು ತುಂಬಾನೇ ವರ್ಷಗಳಾಗಿದೆ. ರಾಜಕಾರಣದಲ್ಲಿ ಸಕ್ರಿಯಳಾಗಿದ್ದ ಸಮಯದಲದಲ್ಲೂ ರಮ್ಯ, ಚಿತ್ರರಂಗದ ಜೊತೆಗಿನ ನಂಟನ್ನು ಪೂರ್ತಿಯಾಗಿ ಬಿಡಲಿಲ್ಲ. ಆಗಾಗ್ಗೆ ತಮಗೆ ಇಷ್ಟವಾಗುವ ಸಿನಿಮಾ ಕುರಿತು ತಮ್ಮ ಅನಿಸಿಕೆಯನ್ನು ರಮ್ಯಾ ಹಂಚಿಕೊಳ್ಳುತ್ತಲೇ ಇರುತ್ತಾರೆ.

ರಮ್ಯಾ ಅವರ ಅಭಿಮಾನಿ ಬಳಗಕ್ಕೇನೂ ಕಮ್ಮಿ ಇಲ್ಲ. ಈಗಲೂ ಅವರನ್ನು ಆರಾಧಿಸುವವರ ಬಳಗ ಇದೆ. ಆದಷ್ಟು ಬೇಗ ಕನ್ನಡ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲಿ ಎನ್ನುವುದೇ ರಮ್ಯಾ ಫ್ಯಾನ್ಸ್ ಬಯಕೆ.


Ad Widget

Ad Widget

Ad Widget

ಇತ್ತೀಚೆಗೆ ರಮ್ಯಾ ಅವರ ಒಂದು ಫೋಟೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋ ನೋಡಿದ ಮೇಲೆ ಅಭಿಮಾನಿಗಳ ಮನದಲ್ಲಿ ಹತ್ತು ಹಲವು ಪ್ರಶ್ನೆಗಳು ಮೂಡಿತ್ತು. ಆದರೆ ಈ ಎಲ್ಲಾ ಅನುಮಾನಗಳಿಗೆ ರಮ್ಯಾ ಈಗ ಉತ್ತರ ಕೊಟ್ಟಿದ್ದಾರೆ. ಹೌದು, ನಟಿ ಈಗ ಆ ಹುಡುಗ ಯಾರೆಂದು ಹೇಳಿದ್ದಾರೆ.

ಅಂದಹಾಗೆ ರಮ್ಯಾ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದು ಮತ್ಯಾರು ಅಲ್ಲ ಸ್ಟೈಲಿಸ್ಟ್ ವಿಹಾನ್. ಈ ಬಗ್ಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ಇವರು ವಿಹಾನ್. ನನ್ನ ಸ್ಟೈಲಿಸ್ಟ್. ಆದರೂ ನಾನು ಕುತೂಹಲವನ್ನು ತುಂಬಾ ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: