PUC ಪರೀಕ್ಷೆಯ ಜೊತೆಗೆ ಪ್ರವೇಶ ಪರೀಕ್ಷೆಗಳ ತಯಾರಿಗೆ ಅತ್ಯಂತ ಸುಲಭ ಕಲಿಕೆಯ ವಿಧಾನ ಇಲ್ಲಿದೆ!
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಮುಗಿದ ತಕ್ಷಣವೇ ಹಲವು ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಕಾಲೇಜಿಗೆ ಸೇರಲು ಹಲವು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಜ್ಜಾಗುತ್ತಾರೆ. ಹಾಗೂ ಇದು ಅನಿವಾರ್ಯ ಕೂಡಾ.
ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆಗಳಿಗೆ ಹೆಚ್ಚಿನ ತಯಾರಿ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಇತ್ತಿಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದ್ದು, ಇದನ್ನು ಎದುರಿಸಬೇಕಾದರೆ ವಿದ್ಯಾರ್ಥಿಗಳು ವೇಳಾಪಟ್ಟಿಯೊಂದಿಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಮುಖ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದೆ. ಹಾಗಾಗಿ ಇದನ್ನು ಎದುರಿಸಬೇಕಾದರೆ ವಿದ್ಯಾರ್ಥಿಗಳು ವೇಳಾಪಟ್ಟಿಯೊಂದಿಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಮುಖ್ಯವಾಗಿದೆ. ಇದು ಉತ್ತಮ ಫಲಿತಾಂಶ ಪಡೆಯಲು ಸಹಕಾರಿ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ JEE ಮುಖ್ಯ ಪರೀಕ್ಷೆ, CUET,CLAT, IP MAT, NEET, ಸೇರಿದಂತೆ ಹಲವು ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಬೇಕಾಗಿದೆ. ಇದರಿಂದಾಗಿ ಈ ಎಲ್ಲಾ ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಕಾಲಾವಕಾಶವಿಲ್ಲ. ಜೂನ್ 19 ರಂದು CLAT (ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ), ಹಾಗೂ ಜುಲೈ ಎರಡನೇ ವಾರದಲ್ಲಿ CUET ಪರೀಕ್ಷೆ ನಡೆಯಲಿದೆ.
ಹಾಗಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಬೋರ್ಡ್ ಎಕ್ಸಾಂ ಮತ್ತು ಪ್ರವೇಶ ಪರೀಕ್ಷೆಗಳಿಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುವುದು ಉತ್ತಮ. ಈ ಎರಡು ಪರೀಕ್ಷೆಗಳು ವಿದ್ಯಾರ್ಥಿ ಜೀವನದ ಪ್ರಮುಖ
ಘಟ್ಟ.
ಕೆಲವು ವಿದ್ಯಾರ್ಥಿಗಳು ಪರೀಕ್ಷೆ ತಯಾರಿ ಯಾವ ರೀತಿ ಮಾಡಬೇಕೆಂದು ಗೊತ್ತಿರುವುದಿಲ್ಲ. ಹಾಗಾಗಿ ಬಹಳ ಒತ್ತಡದಲ್ಲಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಎನ್ನುವುದರ ಕುರಿತು ಕೆಲವೊಂದು ಸಲಹೆಗಳನ್ನು ಈ ಕೆಳಗೆ ತಿಳಿಸಿಕೊಡಲಾಗಿದೆ.
ಈ ಎರಡು ಪರೀಕ್ಷೆ ಎದುರಿಸಲು ಸೂಕ್ತ ವೇಳಾಪಟ್ಟಿ ವಿದ್ಯಾರ್ಥಿಗಳು ಮಾಡುವುದು ಒಳ್ಳೆಯದು. ಆ ಕ್ರಮದ ಪ್ರಕಾರ ಅಧ್ಯಯನ ಮಾಡಿದರೆ ಉತ್ತಮ. ದಿನದಲ್ಲಿ ಎರಡು ಗಂಟೆಯಾದರೂ ಪ್ರವೇಶ ಪರೀಕ್ಷೆ ತಯಾರಿಗಿಡಿ. ವೇಳಾಪಟ್ಟಿಗೆ ಕ್ರಮವಾಗಿ ಅಧ್ಯಯನ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.
ಯಾವ ಕಾಲೇಜಿನಲ್ಲಿ ನೀವು ಪ್ರವೇಶ ಪಡೆಯಲು ಇಚ್ಛಿಸುತ್ತೀರಿ ಎಂದು ಮೊದಲು ನಿರ್ಧಾರ ಮಾಡಿ. ನಂತರ ಅಲ್ಲಿಯ ಪರೀಕ್ಷೆಯ ಪ್ಯಾಟರ್ನ್ ತಿಳಿದುಕೊಳ್ಳಿ. CUET ನಲ್ಲಿ ಪ್ರವೇಶ ಪಡೆಯಬೇಕು ಎಂದರೆ ಆನ್ಲೈನ್ ಅಭ್ಯಾಸ ಪರೀಕ್ಷೆ ಉತ್ತಮ. ಇದರಿಂದ ಸಂಪೂರ್ಣ ಮಾಹಿತಿ ದೊರೆಯುತ್ತದೆ.
ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಉದಾರಹಣೆಗೆ ಯುಪಿಎಸ್‌ಸಿ ಪ್ರಿಲಿಮ್ಸ್‌ನಂತಹ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಾಮಾನಗಳ ಕುರಿತು ಹೆಚ್ಚು ಪ್ರಶ್ನೆಗಳು ಬರುತ್ತವೆ. ಹಾಗಾಗಿ ವಿದ್ಯಾರ್ಥಿಗಳು ದಿನನಿತ್ಯದ ಪ್ರಚಲಿತ ಘಟನೆಗಳ ಬಗ್ಗೆ ತಿಳಿದುಕೊಂಡರೆ ಉತ್ತಮ. ದಿನ ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಓದುವುದು ಒಳ್ಳೆಯದು.
ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡುವುದು ವಿದ್ಯಾರ್ಥಿಗಳಿಗೆ ಉತ್ತಮ ಹಾದಿ. ಇದರಿಂದ ನಿಮಗೆ ಪ್ರಶ್ನೆಗಳು ಹೇಗೆ ಬರಬಹುದು ಮತ್ತು ಎಷ್ಟು ಸಮಯದಲ್ಲಿ ನಾನು ಪ್ರಶ್ನೆ ಪತ್ರಿಕೆಗೆ ಉತ್ತರಿಸಬಹುದು ಎನ್ನುವುದು ತಿಳಿಯುತ್ತದೆ. ಇದು ಪರೀಕ್ಷೆಯಲ್ಲಿ ಬೇಗ ಬೇಗ ಉತ್ತರಿಸಲು ಸಹಾಯವಾಗುತ್ತದೆ.
ಪಿಯುಸಿ ಎಕ್ಸಾಂ ಮುಗಿಯುತ್ತಿದ್ದಂತೆ, ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭವಾಗುತ್ತಿರುವ ಕಾರಣ ಅಧ್ಯಯನದ ಬಗ್ಗೆ ಆಲಸ್ಯತನ ಬೇಡ. ಸಮಯ ಸಿಕ್ಕಾಗ ಓದಿ. ಇನ್ನೂ ಸಮಯವಿದೆ ಎಂದು ಉದಾಸೀನ ಮಾಡಬೇಡಿ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವ ಪರಿಸ್ಥಿತಿ ನಿಮ್ಮದಾಗುವುದು ಬೇಡ.
ಛಲ ಬಿಡದ ಪ್ರಯತ್ನ ನಿಮ್ಮನ್ನು ಗುರಿ ಮುಟ್ಟಿಸುವಲ್ಲಿ ಖಂಡಿತ ಸಹಾಯ ಮಾಡುತ್ತದೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಓದಿನ ಕಡೆ ಗಮನ ಕೊಡಿ. ಆತ್ಮವಿಶ್ವಾಸ, ಸಕಾರಾತ್ಮಕ ಆಲೋಚನೆಗಳಿಂದ ಪರೀಕ್ಷೆ ಬರೆಯಿರಿ. ಆಲ್ ದಿ ಬೆಸ್ಟ್.