ನೈಟ್ ಶಿಫ್ಟ್ ಕೆಲಸ ಮಾಡುವವರೇ| ಈ ಸಲಹೆ ಪಾಲಿಸುವುದು ಉತ್ತಮ

ಉದ್ಯೋಗ ಅಂದರೆ ನಮಗೆ ಬೇಕಾದ ಹಾಗೇ ಕೆಲವೊಮ್ಮೆ ಸಿಗುವುದಿಲ್ಲ. ಕೆಲವರು ಬೆಳಗ್ಗೆ ಕೆಲಸಕ್ಕೆ ಹೋದರೆ ಇನ್ನು ಕೆಲವರು ರಾತ್ರಿ ಶಿಫ್ಟ್ ಮಾಡುತ್ತಾರೆ. ಹೌದು. ಎಲ್ಲಾ ಕ್ಷೇತ್ರದಲ್ಲೂ ಎಲ್ಲರಿಗೂ 9-5 ಕೆಲಸ ಸಿಗುವುದು ತುಂಬಾ ಕಷ್ಟ, ಕೆಲವರಿಗಂತೂ, ರಾತ್ರಿ ಶಿಫ್ಟ್ ಗಳಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ತುಂಬಾ ಇರುತ್ತದೆ. ರಾತ್ರಿ ಕೆಲಸ ಮಾಡುವುದೆಂದರೆ ಒಂದು ರೀತಿಯ ಸವಾಲಿನ ಕೆಲಸ ಅಂದರೆ ಸುಳ್ಳಾಗದು. ಆದರೆ ನೀವುಗಳು ಗಮನಿಸಿರಬಹುದು, ಈ ನೈಟ್‌ಶಿಫ್ಟ್‌ಗಳಲ್ಲಿ ಕೆಲಸ ಮಾಡುವಂತವರಲ್ಲಿ ಹಲವು ಮಂದಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ನೈಟ್‌ಶಿಫ್ಟ್‌ಗಳಲ್ಲಿ ಕೆಲಸ ಮಾಡುವವರು ಈ ಸಲಹೆಗಳನ್ನು ತಪ್ಪದೆ ಪಾಲಿಸುವುದು ಉತ್ತಮ.

ನಿತ್ಯವೂ ಒಂದೊಂದು ಸಮಯದಲ್ಲಿ ನಿದ್ರೆ ಮಾಡುವುದರಿಂದ ತೂಕ ಹೆಚ್ಚಳ ಮಾನಸಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ನೈಟ್‌ಶಿಫ್ಟ್‌ನಲ್ಲಿ ಕೆಲಸ ಮಾಡುವವರು ಮೊದಲು ನಿದ್ರೆ ಮಾಡುವ ಸಮಯವನ್ನು ಫಿಕ್ಸ್ ಮಾಡಿ, ದಿನ ಅದೇ ಸಮಯಕ್ಕೆ ಮಲಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ.


Ad Widget

Ad Widget

Ad Widget

ರಾತ್ರಿ ನಿದ್ರೆ ಬರಬಾರದೆಂದು ತುಂಬಾ ಮಂದಿ ಕಾಫಿ, ಟೀ ಸೇರಿದಂತೆ ಇತರೆ ಪಾನೀಯಗಳನ್ನು ಕುಡಿಯುತ್ತಾರೆ. ಆದರೆ ಅದು ತಪ್ಪು. ಇವುಗಳು ಕೂಡ ಅನಾರೋಗ್ಯವನ್ನುಂಟು ಮಾಡಬಹುದು.

ಪ್ರತಿಯೊಬ್ಬರಿಗೂ ತಮ್ಮ ಕೆಲಸವನ್ನು ಹೊರತುಪಡಿಸಿ ತಮ್ಮದೇ ಆದ ಜೀವನವಿರುತ್ತದೆ. ಹಾಗಾಗಿ ಬಿಡುವಿನ ಸಮಯದಲ್ಲಿ ಮನೆಯವರೊಂದಿಗೆ ಕಾಲ ಕಳೆಯಿರಿ ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ನಿತ್ಯ ಉತ್ತಮ ಆಹಾರವನ್ನು ತಿನ್ನಿ. ವರ್ಕೌಟ್ ಮಾಡಿ. ಅದಕ್ಕಾಗಿ ನಿಗದಿಪಡಿಸಿ ಎಂದೂ ಆಲಸ್ಯವನ್ನು ತೋರಿಸಬೇಡಿ, ಇದು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹೆಚ್ಚು ಆಹಾರ ಸೇವನೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಒಮ್ಮೆಲೇ ಸೇವನೆ ಮಾಡದೇ ಇದ್ದರೂ ಆಗಾಗ ತಿನ್ನುವ ಅಭ್ಯಾಸವನ್ನು ಕೆಲವರು ಮಾಡಿಕೊಂಡಿರುತ್ತಾರೆ. ನಿದ್ರೆಯಿಂದ ತಪ್ಪಿಸಿಕೊಳ್ಳಲು ಕೆಲವರು ಹೀಗೆ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಇದರಿಂದ ದೇಹಕ್ಕೆ ಅತಿಯಾದ ಕ್ಯಾಲೊರಿ ಅಂಶಗಳು ಸೇರುತ್ತಾ ಹೋಗುತ್ತವೆ. ಅನಾರೋಗ್ಯಕರ ಆಹಾರದಿಂದ ಮಧುಮೇಹ ನಿರ್ವಹಣೆ ಕೂಡ ಕಷ್ಟ ಆಗುತ್ತದೆ. ಹಾಗಾಗಿ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಗಮನವಹಿಸಬೇಕು.

ಇತ್ತೀಚೆಗೆ ಅಂದರೆ 2017ರಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ರಾತ್ರಿ ಪಾಳಿಯಲ್ಲಿ ಕೆಲಸಮಾಡುವ ಜನರಿಗೆ ತಮ್ಮ ಮಧುಮೇಹ ನಿರ್ವಹಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೆ ಬೆಳಗಿನ ಸಮಯದಲ್ಲಿ ಕೆಲಸ ಮಾಡುವವರಿಗೆ ಅಥವಾ ಕೆಲಸ ಮಾಡದೆ ಇರುವವರಿಗೆ ತಮ್ಮ ಮಧುಮೇಹ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

Leave a Reply

error: Content is protected !!
Scroll to Top
%d bloggers like this: