ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಮದುವೆ ಮಂಟಪದಲ್ಲೇ ಅಂತ್ಯ !!

ಮದುವೆ ದಿನದ ಶುಭಘಳಿಗೆಯಲ್ಲಿ ಇನ್ನೇನು ತಾಳಿ ಭಾಗ್ಯವನ್ನು ಪಡೆದು ಸುಮಂಗಲೆಯಾಗಿ ಜೀವನ ನಡೆಸಬೇಕಾಗಿದ್ದ ವಧು, ಮದುವೆ ಮಂಟಪದಲ್ಲೇ ತನ್ನ ಅಂತಿಮ ಯಾತ್ರೆಯನ್ನು ಮುಗಿಸಿದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

ಮೃತಪಟ್ಟ ವಧು ಸೃಜನಾ ಎಂದು ತಿಳಿದು ಬಂದಿದೆ.


Ad Widget

Ad Widget

Ad Widget

ಖುಷಿಖುಷಿಯಾಗಿ ಹೆಜ್ಜೆಹಾಕುತ್ತಾ ಓಡಾಡುತ್ತಿದ್ದ ಮದುವೆ ಮಂಟಪದಲ್ಲಿ ಒಮ್ಮೆಲೆ ಸೂತಕದ ಛಾಯೆ ಆವರಿಸಿತು. ಹೌದು. ಇನ್ನೇನು ತಾಳಿಕಟ್ಟಲು ಕೆಲವೇ ನಿಮಿಷಗಳು ಬಾಕಿ ಇದ್ದವು. ಸಂಪ್ರದಾಯದಂತೆ ವೀಳ್ಯದೆಲೆ ಶಾಸ್ತ್ರದಲ್ಲಿ ಭಾಗಿಯಾಗಿದ್ದ ವಧು-ವರರು, ತಮ್ಮ ಮದುವೆಯ ಶಾಸ್ತ್ರಗಳನ್ನು ಆನಂದಿಸುತ್ತಿದ್ದರು. ಅಷ್ಟರವರೆಗೆ ಖುಷಿ-ಖುಷಿಯಾಗಿ ಇದ್ದ ವಧು ದಿಢೀರನೆ ಕುಸಿದು ಬಿದ್ದಿದ್ದಾಳೆ.

ತಕ್ಷಣ ಕುಟುಂಬಸ್ಥರೆಲ್ಲ ಸೇರಿ ಆಸ್ಪತ್ರೆಗೆ ಸಾಗಿಸಿದರೂ,ಆದರೆ ಆಕೆಯ ಆಯಸ್ಸು ಮಾತ್ರ ಮದುವೆ ಮಂಟಪಕ್ಕೆ ಕಾಲಿಡುವಷ್ಟೇ ಇತ್ತೋ ಏನೋ. ಹಾಗಾಗಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ. ಮದುವೆ ಸಂಭ್ರಮದಲ್ಲಿ ತೇಲಾಡುತ್ತಿದ್ದ ಕುಟುಂಬ ಮಾತ್ರ ಸೂತಕದ ಛಾಯೆಯಲ್ಲಿ ಮುಳುಗಿ ಹೋಗಿದೆ.

Leave a Reply

error: Content is protected !!
Scroll to Top
%d bloggers like this: