ಥ್ರೆಷರ್ ಗಾಳಿಯೊಂದಿಗೆ ಮದುವೆಯ ದಿಬ್ಬಣದ ವೆಲ್ ಕಮ್ !! | ಬಂದ ಅತಿಥಿಗಳಿಗೆಲ್ಲಾ ಕೂಲ್ ಕೂಲ್ ಸ್ವಾಗತ- ವೀಡಿಯೋ ವೈರಲ್
ಇಂದಿನ ಬೇಸಿಗೆಯ ಉರಿ ಬಿಸಿಲಿಗೆ ಜನರು ಸೋತು ಹೋಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಏನಾದರೊಂದು ಉಪಾಯ ಕಂಡುಕೊಳ್ಳುತ್ತಲೇ ಇದ್ದಾರೆ. ದಣಿವನ್ನು ನೀಗಿಸಲು ತಂಪು ಪಾನೀಯಗಳನ್ನು ನೀಡುವುದು, ಎಸಿ ಕೆಳಗೆ ಕೂರುವುದು ಇಂತಹುದೆಲ್ಲಾ ಮಾಮೂಲಿ. ಆದರೆ ಇಲ್ಲೊಂದು ಕಡೆ ಮದುವೆಯ ದಿಬ್ಬಣದೊಂದಿಗೆ ಬಂದ ಜನರನ್ನು ಯಾವ ರೀತಿ ತಂಪಾಗಿಸಿದ್ದಾರೆ ಗೊತ್ತೇ!?
ಹೌದು. ಸೋಶಿಯಲ್ ಮೀಡಿಯಾಗಳಲ್ಲಿ ದಿನದಿಂದ ದಿನಕ್ಕೆ ವಿಭಿನ್ನವಾದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇಂತಹ ವಿಡಿಯೋಗಳಲ್ಲಿ ಹೆಚ್ಚಿನದು ಮದುವೆ ಸಮಾರಂಭಗಳ ವಿಭಿನ್ನತೆಯ ವಿಡಿಯೋ ಆಗಿರುತ್ತದೆ. ಆದರೆ ಇದೀಗ ವೈರಲ್ ಆಗಿರುವಂತಹ ಮದುವೆಯ ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಅವನೀಶ್ ಶರಣ್ ಅವರು ಹಂಚಿಕೊಂಡಿದ್ದು, ಈ ವಿಡಿಯೋ ಖಂಡಿತಾ ನಿಮ್ಮನ್ನು ವಿಸ್ಮಯಗೊಳಿಸಲಿದೆ. ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವು ಮದುವೆಯ ಮೆರವಣಿಗೆಯಲ್ಲಿ ಜನರಿಗೆ ಹವಾನಿಯಂತ್ರಣ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲು ಥ್ರೆಶರ್ ಯಂತ್ರವನ್ನು ಬಳಸುವುದನ್ನು ತೋರಿಸಲಾಗಿದೆ.ವಿಡಿಯೋದಲ್ಲಿ, ಮದುವೆಯ ಮೆರವಣಿಗೆ ಮೂಲಕ ಬಂದ ಅತಿಥಿಗಳನ್ನು ಸ್ವಾಗತಿಸಲು ಸ್ಥಾಪಿಸಲಾದ ಟೆಂಟ್ನ ಮುಂದೆ ಥ್ರೆಶರ್ ಯಂತ್ರವನ್ನು ನಿಲ್ಲಿಸಲಾಗಿದೆ.
ಥ್ರೆಷರ್ ಯಂತ್ರ ಎಂದರೆ ಏನು ಎಂಬುದು ಹೆಚ್ಚಿನ ಜನರಿಗೆ ತಿಳಿಯದೇ ಇರಬಹುದು. ಇದು ಹೊಟ್ಟು ಅಥವಾ ಒಣಹುಲ್ಲಿನಿಂದ ಧಾನ್ಯಗಳನ್ನು ಬೇರ್ಪಡಿಸುವ ಯಂತ್ರವಾಗಿದ್ದು, ಹೆಚ್ಚಾಗಿ ಗೋಧಿಯನ್ನು ಪ್ರತ್ಯೇಕಿಸಲು ಬಳಸಲಾಗುತ್ತದೆ. ಈ ಯಂತ್ರವು ಗ್ರಾಮೀಣ ಭಾಗದಲ್ಲಿ ಅತಿಯಾಗಿ ಬಳಕೆಯಲ್ಲಿದೆ.
ಆದರೆ ಇಲ್ಲಿ ಜನರಿಗೆ ತಂಪಾದ ಗಾಳಿಯನ್ನು ನೀಡಲು ಬಳಸಿರುವುದು ನಿಜಕ್ಕೂ ಅದ್ಭುತವಾದ ಪರಿಕಲ್ಪನೆಯೇ ಸರಿ. ಈ ಯಂತ್ರವನ್ನು ಜಲಮೂಲದ ಮೇಲೆ ನಿಲ್ಲಿಸಲಾಗಿದ್ದು, ಇದು ಬಿಸಿಲಿನ ಶಾಖಕ್ಕೆ ಬಳಲಿದ ದಿಬ್ಬಣಕ್ಕೆ ತಂಪಾದ ಗಾಳಿಯನ್ನು ಹರಡಲು ಸಹಾಯ ಮಾಡಿದೆ.
ಥ್ರೆಷರ್ ಗಾಳಿಯೊಂದಿಗೆ ಮೆರವಣಿಗೆಯನ್ನು ಸ್ವಾಗತಿಸುವುದು ಅದ್ಭುತ ಕಲ್ಪನೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಹಲವಾರು ವೀಕ್ಷಣೆಗಳು ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳೊಂದಿಗೆ ವೈರಲ್ ಆಗಿದ್ದು, ಅನೇಕರಿಗೆ ಈ ಐಡಿಯಾ ಖುಷಿ ನೀಡಿದೆ. ಈ ವೈರಲ್ ವಿಡಿಯೋದ ತುಣುಕು ಇಲ್ಲಿದೆ ನೋಡಿ..