‘ಟೆಂಡರ್ ಅಕ್ರಮ’ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ: ಇನ್ಮುಂದೆ ಈ ನಿಯಮ ಪಾಲನೆ ಕಡ್ಡಾಯ
ಟೆಂಡರ್ ಪಾರದರ್ಶಕತೆ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಆದೇಶಿಸ ಹೊರಡಿಸಿದ ಬೆನ್ನಲ್ಲೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮತ್ತು ಬಿಲ್ಲುಗಳ ಪಾವತಿಗೆ ಸಂಬಂಧಿಸಿದಂತೆ ಮಹತ್ವದ ಕ್ರಮವನ್ನು ಕೈಗೊಂಡು, ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಆರ್ಥಿಕ ಸಚಿವಾಲಯವು ಸುತ್ತೋಲೆ ಹೊರಡಿಸಿದೆ. ಅದರಂತೆ ಕಾಮಗಾರಿಗಳ ಬಿಲ್ಲುಗಳನ್ನು First Come First Serve ಆಧಾರದ ಮೇಲೆ ಪಾವತಿ ಮಾಡಲು ತಿಳಿಸಲಾಗಿದೆ. ಸಾರ್ವಜನಿಕ ಸಂಗ್ರಹಣೆಗಳ ಪ್ಲ್ಯಾನಿಂಗ್, ಪ್ಯಾಕೇಜಿಂಗ್ ಮತ್ತು ಶೆಡ್ಯೂಲಿಂಗ್ ಹಾಗೂ ಅನುದಾನ ಲಭ್ಯಗೊಳಿಸುವ ಬಗ್ಗೆ ತಿಳಿಸಲಾಗಿದ್ದು, ಕಾರ್ಯಯೋಜನೆಯ ಅನುಷ್ಠಾನವನ್ನು ಗಮನದಲ್ಲಿಟ್ಟುಕೊಂಡು ಪ್ಯಾಕೆಜಿಂಗ್ ಮಾಡುವುದನ್ನು ಪರಿಶೀಲಿಸಲು ತಿಳಿಸಿದ್ದಾರೆ.
ಟೆಂಡರ್ ಆಹ್ವಾನಿಸುವ ಮತ್ತು ಅಂಗೀಕರಿಸುವ ಪ್ರಾಧಿಕಾರಿಗಳನ್ನು ನೇಮಕ ಮಾಡಬೇಕು. ತಾಲೂಕು ಮಟ್ಟದ ಪ್ರಾಧಿಕಾರಿ ತಾಲೂಕು ಹಂತದಲ್ಲಿ ಜಿಲ್ಲಾ ಮಟ್ಟದ ಪ್ರಾಧಿಕಾರ ಜಿಲ್ಲಾ ಹಂತದಲ್ಲಿ ಹಾಗೂ ರಾಜ್ಯ ಮಟ್ಟದ ಪ್ರಾಧಿಕಾರವು ರಾಜ್ಯ ಮಟ್ಟದಲ್ಲಿ ಆಯಾ ಸಂಗ್ರಹಣೆಗಳ ಟೆಂಡರ್ ಕರೆಯಲು ಕ್ರಮವಹಿಸುವಂತೆ ಸೂಚಿಸಿದೆ.
ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ KW-1 ರಿಂದ KW-6ರಲ್ಲಿ ಮಾದರಿ ದಾಖಲೆಗಳನ್ನು ನಿಗಧಿಪಡಿಸಿ ಆದೇಶ ಹೊರಡಿಸಲಾಗಿರುತ್ತದೆ. ಕ್ರಮವಾಗಿ ರೂ.50 ಲಕ್ಷಗಳಿಂದ ರೂ.100 ಲಕ್ಷಗಳವರೆಗೆ ಮತ್ತು ರೂ.100 ಲಕ್ಷಗಳನ್ನು ಮೀರಿದ ಅಂದಾಜು ಮೊತ್ತಗಳ ಕಾಮಗಾರಿಗಳಿಗೆ KW-3 KW-4 Clause 3.3(a) ರಲ್ಲಿ ಟೆಂಡರ್ ದಾರರಿಗೆ ಯಂತ್ರೋಪಕರಣಗಳ ಸಾಮರ್ಥ್ಯವನ್ನು ನಿಗದಿಪಡಿಸಿದೆ.
ಪ್ರಸಕ್ತ ಯಂತ್ರೋಪಕರಣಗಳ ಸಾಮರ್ಥ್ಯವನ್ನು ಪರಿಷ್ಕರಿಸಿ, ರೂ.300 ಲಕ್ಷಗಳವರೆಗಿನ ಅಂದಾಜು ಮೊತ್ತದ ಕಾಮಗಾರಿಗಳಿಗೆ ಸದರಿ Clauseನ ಅನ್ವಯಿಕೆಯಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ಇತರೆ ಎಲ್ಲಾ ಷರತ್ತುಗಳನ್ನು ಯಾವುದೇ ಬದಲಾವಣೆ ಮಾಡದಂತೆ ಮುಂದುವರೆಸಲಾಗಿದೆ.