69 ರ ಹರೆಯದಲ್ಲೂ ಯುದ್ಧ ಮತ್ತು ಪ್ರೀತಿ ಎರಡಕ್ಕೂ ಸೈ | ಪುಟಿನ್ ಪ್ರೇಯಸಿ ಈಗ ಮತ್ತೆ ಗರ್ಭಿಣಿ !!

Share the Article

ಉಕ್ರೇನ್ ಮೇಲಿನ ತೀಕ್ಷ್ಣವಾದ ದಾಳಿಯಿಂದಾಗಿ ವಿಶ್ವದಾದ್ಯಂತ ಸುದ್ದಿ ಮಾಡುತ್ತಿರುವ ರಷ್ಯಾದ ಅಧ್ಯಕ್ಷ ಪುಟಿನ್ ಅವರು ಬಲವಾದ ಇಚ್ಛಾಶಕ್ತಿ ಮತ್ತು ಕಠಿಣ ನಿರ್ಧಾರಗಳ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ವ್ಯಕ್ತಿತ್ವವನ್ನು ತುಂಬಾ ಕಟ್ಟುನಿಟ್ಟಾಗಿ ಪರಿಗಣಿಸಲಾಗಿದೆ. ಆದರೂ ಕೆಲವು ವರ್ಷಗಳಿಂದ ಅವರ ಮನಸನ್ನು ಒಬ್ಬ ಸುಂದರಿ ಆಳುತ್ತಿದ್ದಾಳೆ. ಅದರ ಫಲಿತಾಂಶವೇ ಈ ಸುದ್ದಿ. ಹೌದು. 69ರ ಇಳಿವಯಸ್ಸಲ್ಲೂ ರಷ್ಯಾ ಅಧ್ಯಕ್ಷ ಪುಟಿನ್ ತಂದೆಯಾಗುತ್ತಿದ್ದಾರಂತೆ.

ಕಳೆದ ಕೆಲ ಸಮಯದಿಂದ ಕಣ್ಮರೆಯಾಗಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಪ್ರೇಯಸಿ ಜಿಮ್ನಾಸ್ಟಿಕ್ ಅಲಿನಾ ಕಬೀವಾ ಜೊತೆ ಪ್ರತ್ಯಕ್ಷರಾಗಿ ಆಕೆ ಗರ್ಭಿಣಿಯಾಗಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಜಿಮ್ನಾಸ್ಟಿಕ್ ಮೂರನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ಉಕ್ರೇನ್ ಮೇಲೆ ಮುಗಿಬಿದ್ದು ಸಮರ ಸಾರಿರುವ ರಷ್ಯಾ ದೊರೆಗೆ ಈ ಸುದ್ದಿ ಖುಷಿ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಜಿಮ್ನಾಸ್ಟಿಕ್ ಜೊತೆಗಿನ ಪುಟಿನ್ ಪ್ರೀತಿ ಈಗಾಗಲೇ ಎಲ್ಲರಿಗೂ ತಿಳಿದಿದ್ದು, ಇವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಆದರೆ, ಪುಟಿನ್ ಮಾತ್ರ ಈವರೆಗೂ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ತುಟಿ ಬಿಚ್ಚಿಲ್ಲ ಎಂಬುದು ಗಮನಾರ್ಹ ಸಂಗತಿ.

Leave A Reply

Your email address will not be published.