ಇಂದು ಚಿನ್ನದ ಬೆಲೆಯಲ್ಲಿ 430 ರೂ.ಕುಸಿತ; ಬೆಳ್ಳಿ ದರವೂ ಇಳಿಕೆ

ಎರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ ನಿನ್ನೆ ಕೊಂಚ ಏರಿಕೆಯಾಗಿತ್ತು. ಇಂದು ಚಿನ್ನದ ಬೆಲೆ ಮತ್ತೆ ಕುಸಿತವಾಗಿದೆ. ಚಿನ್ನದ ದರ ಇಂದು 430 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆ ಕಳೆದ 3 ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಆದರೆ, ಇಂದು 600 ರೂ. ಕುಸಿತ ಕಂಡಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,500 ರೂ. ಇದ್ದುದು 47,100 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,810 ರೂ. ಇದ್ದುದು 51,380 ರೂ. ಆಗಿದೆ.


Ad Widget

Ad Widget

Ad Widget

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,460 ರೂ. ಮುಂಬೈ- 47,100 ರೂ, ದೆಹಲಿ- 47,100 ರೂ, ಕೊಲ್ಕತ್ತಾ 47,100 ರೂ, ಬೆಂಗಳೂರು- 47,100 ರೂ, ಹೈದರಾಬಾದ್ 47,100, ಕೇರಳ- 47,100 ಪುಣೆ-47,200 ಮಂಗಳೂರು- 47,100 ರೂ, ಮೈಸೂರು- 47,100 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,860 ರೂ, ಮುಂಬೈ- 51,380 ರೂ, ದೆಹಲಿ 51,380 ರೂ, ಕೊಲ್ಕತ್ತಾ- 51,380 ರೂ, ಬೆಂಗಳೂರು 51,380 ರೂ, ಹೈದರಾಬಾದ್- 51,380 ರೂ, ಕೇರಳ
51,380, ಪುಣೆ- 51,500 ಮಂಗಳೂರು-51,380 ರೂ, ಮೈಸೂರು- 51,380 ರೂ. ಆಗಿದೆ.

ಇಂದು ಕೂಡ ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62,500 ರೂ. ಇದ್ದುದು ಇಂದು 61,900 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,100 ರೂ, ಮೈಸೂರು- 66,100 ರೂ., ಮಂಗಳೂರು-66,100 ಮುಂಬೈ- 61,900 , ಚೆನ್ನೈ- 66,100 ರೂ, ದೆಹಲಿ- 61,900 ರೂ, ಹೈದರಾಬಾದ್- 66,100 ರೂ, ಕೊಲ್ಕತ್ತಾ- 61,900 ರೂ. ಆಗಿದೆ.

Leave a Reply

error: Content is protected !!
Scroll to Top
%d bloggers like this: