ಬರೋಬ್ಬರಿ 66 ದಿನ ಒಬ್ಬಂಟಿಯಾಗಿ ಕಾಲ ಕಳೆದ 13ರ ಪೋರ! ಹಾಲಿವುಡ್ ನ ‘ ಹೋಮ್ ಅಲೋನ್’ ಸಿನಿಮಾ ನೆನಪಿಸುವಂತಿದ್ದೆ ಈತನ ಕಾರ್ಯವೈಖರಿ!
ಹಾಲಿವುಡ್ ನ ‘ಹೋಮ್ ಅಲೋನ್’ ಚಿತ್ರವನ್ನು ಯಾರಾದರೂ ನೋಡಿದ್ದರೆ, ಆ ಸಿನಿಮಾದ ಥ್ರಿಲಿಂಗ್ ಫೀಲ್ ಈಗಲೂ ನೆನಪಿಸುವಂಥದ್ದು. ಆ ಸಿನಿಮಾದಲ್ಲಿ ನಟಿಸಿದ ಮಗುವು ಒಬ್ಬಂಟಿಯಾಗಿ ಮನೆಯಲ್ಲಿ ಹೇಗೆ ಬದುಕುಳಿಯಿತು ಜೊತೆಗೆ ಮನೆಗೆ ಕನ್ನ ಹಾಕಲು ಬಂದ ಕಳ್ಳರನ್ನು ತನ್ನ ಚಾಕಚಕ್ಯತೆಯಿಂದ ಹೇಗೆ ಹೊರಗೋಡಿಸಿತು ಎನ್ನುವ ಕುತೂಹಲ ಇನ್ನೂ ಅಚ್ಚಳಿಯದಂತೆ ಮನಸ್ಸಿನಲ್ಲಿ ಮೂಡಿಸಿದೆ ಈ ಸಿನಿಮಾ. ಅದು ಸಿನಿಮಾ ಆದರೆ ನಿಜಜೀವನದಲ್ಲಿ ಇದೇ ರೀತಿ ಚೀನಾದಲ್ಲೊಬ್ಬ ಬಾಲಕ ಈ ರೀತಿಯ ಸಾಹಸ ಮೆರೆದು ಉದಾಹರಣೆ ಸೃಷ್ಟಿಸಿದ್ದಾನೆ.
ಈ ಬಾಲಕನ ತಂದೆ ತಾಯಿ ಫೆಬ್ರವರಿ 28 ರಂದು ವೈದ್ಯಕೀಯ ಚಿಕಿತ್ಸೆ ಪಡೆಯಲು ಶಾಂಘೈಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಆ ಸಮಯದಲ್ಲಿ ಕೊರೊನಾ ತಾಂಡವಾಡುತ್ತಿದ್ದರಿಂದ ಲಾಕ್‌ಡೌನ್ ಘೋಷಿಸಿದ್ದಾರೆ. ಹಾಗಾಗಿ ಬಾಲಕನ ಪೋಷಕರು ಅಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಏಪ್ರಿಲ್ ಅಂತ್ಯದವರೆಗೆ ಅವರಿಗೆ ತಮ್ಮ ಮಗನನ್ನು ಭೇಟಿಯಾಗಲು ಸಾಧ್ಯವಾಗಿಲ್ಲ.
ಹಾಗಾಗಿ 66 ದಿನಗಳ ಕಾಲ ಮನೆಯಲ್ಲಿ 13 ವರ್ಷದ ಬಾಲಕ ಒಬ್ಬಂಟಿಯಾಗಿದ್ದ. ಬಾಲಕ ಕಳೆದ ಎರಡು ತಿಂಗಳಿಂದ ಮನೆಯಲ್ಲಿಯೇ ಒಂಟಿಯಾಗಿಯೇ ವಾಸಿಸುತ್ತಿದ್ದ. ಬೆಕ್ಕು ಮತ್ತು ನಾಯಿ ಕೂಡ ಆತನ ಜೊತೆಯಲ್ಲಿತ್ತು.
ತಾಯಿ ಹೇಳುವ ಪ್ರಕಾರ, ನನ್ನ ಮಗು ನೈತಿಕವಾಗಿ ಅವರು ಯೋಚಿಸಿದ್ದಕ್ಕಿಂತ ಬಲಶಾಲಿ ಎಂದು ಹೇಳಿದ್ದಾರೆ. ಪ್ಯಾಕೇಜ್ ಮಾಡಿದ ಆಹಾರಗಳನ್ನು ತಿನ್ನಲು ಮಗು ಇಷ್ಟಪಡದ ಕಾರಣ, ತನ್ನ ತಾಯಿಯಿಂದ ಫೋನ್ ಮೂಲಕ ಅಡುಗೆ ಕಲಿತು ಅಡುಗೆ ಮಾಡಿದ್ದಾನೆ. ಏಪ್ರಿಲ್‌ನಲ್ಲಿ ಪೋಷಕರು ಮನೆಗೆ ಹಿಂತಿರುಗಿದಾಗ, ಬಾಲಕ ಮತ್ತು ಎರಡು ಸಾಕುಪ್ರಾಣಿಗಳು ತಮ್ಮ ಅನುಪಸ್ಥಿತಿಯಲ್ಲೂ ದಪ್ಪಗಾಗಿದ್ದರು. ಇದು ಪೋಷಕರಿಗೆ ಅಚ್ಚರಿ ತರಿಸಿತ್ತು.
ಬಾಲಕ ಬೆಕ್ಕಿನ ಮಲ, ಮೂತ್ರ ವಿಸರ್ಜಿಸುವ ಪೆಟ್ಟಿಗೆಯನ್ನು ಸ್ವಚ್ಛಗೊಳಿಸುತ್ತಿದ್ದನು. ಹಾಗೆಯೇ ನಾಯಿಯನ್ನು ವಾಕ್ ಮಾಡಲು ಕರೆದೊಯ್ಯುತ್ತಿದ್ದ. ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಸ್ನಾನ ಮಾಡಿಸುತ್ತಿದ್ದನಂತೆ. ಹೀಗೆ 66 ದಿನಗಳ ಕಾಲ ತಾನೇ ಅಡುಗೆ ಮಾಡಿ ಊಟ ಮಾಡುತ್ತಿದ್ದ. ಇದನ್ನೆಲ್ಲಾ ಕಂಡು ಪೋಷಕರಿಗೆ ಹೃದಯ ತುಂಬಿ ಬಂದಿದೆ. ಹೀಗೆ 66 ದಿನಗಳ ಕಾಲ ತಾನೇ ಅಡುಗೆ ಮಾಡಿ ಊಟ ಮಾಡುತ್ತಿದ್ದ ಬಾಲಕನ ಶೌರ್ಯಕ್ಕೆ ಪೋಷಕರು ಕೊಂಡಾಡಿದ್ದಾರೆ. ಯಾವ ತಂದೆ ತಾಯಿಗೆ ತಮ್ಮ ಮಗು ಅದು ಕೂಡಾ ಪುಟ್ಟ ಬಾಲಕ, ಈ ಕಷ್ಟದ ಸಂದರ್ಭದಲ್ಲಿ ಎದೆಗುಂದದೆ ಧೈರ್ಯದಿಂದ ಜೀವನ ಮಾಡಿದ್ದನ್ನು ನೋಡಿ ಹೆಮ್ಮೆ ಆಗುವುದಿಲ್ಲ ಹೇಳಿ…