ಇನ್ನೇನು ವಧುವಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ‘ಪವರ್ ಕಟ್’|ಮುಂದೆ ಆಗಿದ್ದು!?

Share the Article

ಮದುವೆ ಸಮಾರಂಭದಲ್ಲಿ ತಾಳಿ ಕಟ್ಟುವ ವೇಳೆ ‘ನಿಲ್ಸಿ’ ಎನ್ನುತ್ತಾ ಅನೇಕ ಕಾರಣಗಳಿಗೆ ಮದುವೆಯೇ ಮುರಿದು ಹೋಗಿದ್ದನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ಆಗಿದ್ದೇ ಬೇರೆ.ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಪವರ್ ಕಟ್!ಮುಂದೆ ಆಗಿದ್ದು!?

ಹೌದು. ಕರೆಂಟ್ ಬಂದಾಗ ಅಕ್ಕನಿಗೆ ನಿಶ್ಚಯವಾಗಿದ್ದ ವರ ತಂಗಿಯನ್ನು ಹಾಗೂ ತಂಗಿಗೆ ನಿಶ್ಚಯವಾಗಿದ್ದ ವರ ಅಕ್ಕನಿಗೆ ತಾಳಿ ಕಟ್ಟಿದ್ದಾರೆ.ಈ ಕರೆಂಟ್ ನ ಎಡವಟ್ಟಿನಿಂದ ಅಕ್ಕನ ಗಂಡ ತಂಗಿಗೆ, ತಂಗಿಯ ಗಂಡ ಅಕ್ಕನ ಪಾಲಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

ರಮೇಶ್‌ಲಾಲ್‌ ಅವರ ಪುತ್ರಿಯರಾದ ನಿಖೀತಾ ಮತ್ತು ಕರೀಶ್ಮಾಗೆ ಬೇರೆ ಬೇರೆ ಊರಿನ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್‌ರೊಂದಿಗೆ ಮದುವೆ ನಿಶ್ಚಯವಾಗಿತ್ತು. ರಾತ್ರಿ ವೇಳೆ ಮದುವೆ ಮುಹೂರ್ತ ನಡೆಯುವಾಗಲೇ ಕರೆಂಟ್‌ ಹೋಗಿದೆ. ಅಂದ ಹಾಗೇ ಮದುವೆ ಸಮಯದಲ್ಲಿ ತಾಳಿಕಟ್ಟಿಸಿಕೊಳ್ಳಬೇಕಾದ ವಧು ಹಾಗೂ ಆಕೆಯ ತಂಗಿ ಒಂದೇ ತೆರನಾದ ಬಟ್ಟೆ ಧರಿಸಿದ್ದರು ಎನ್ನಲಾಗಿದ್ದು, ಇದೇ ಮಹಾಎಡವಟ್ಟಿಗೆ ಕಾರಣ.

ವರರಿಬ್ಬರೂ ತಮ್ಮ ಪತ್ನಿಯನ್ನು ಮನೆಗೆ ಕರೆದೊಯ್ದ ನಂತರವೇ ಈ ಅದಲು ಬದಲು ವಿಚಾರ ತಿಳಿದುಬಂದಿದೆ.ಮದುವೆಯ ಆಚರಣೆಗಳ ಸಮಯದಲ್ಲಿ ಕರೆಂಟ್‌ ಹೋದ ಸಮಯದಲ್ಲಿ ಗೊಂದಲಕ್ಕೆ ಈಡಾದ ಮಧ್ಯೆದಲ್ಲಿ ತಾಳಿ ಕಟ್ಟಿದ್ದಾನೆ ಎನ್ನಲಾಗಿದೆ.

ಮಾರನೇ ದಿನವೇ ಮೂರೂ ಕುಟುಂಬ ಕುಳಿತು ಮಾತನಾಡಿದ್ದು, ಮತ್ತೂಮ್ಮೆ ನಿಶ್ಚಿತ ವರನೊಂದಿಗೆ ಮದುವೆ ಮಾಡಿ, ನಿಖೀತಾ ಮತ್ತು ಕರೀಶ್ಮಾರನ್ನು ಅವರವರ ಗಂಡನ ಮನೆಗೆ ಕಳುಹಿಸಿಕೊಡಲಾಗಿದೆ.ಏನೇ ಆದರೂ ಪವರ್ ಕಟ್ ನಿಂದ ಅವರಿಗೆ ಇಬ್ಬರು ಹೆಂಡತಿಯರು ಸಿಕ್ಕಿದ್ದಂತೂ ಸತ್ಯ.

Leave A Reply

Your email address will not be published.