ಯಕ್ಷಗಾನದಲ್ಲಿ ಆಸಕ್ತಿ ಹೊಂದಿರುವವರಿಗೆ ಇಲ್ಲಿದೆ ಸುವರ್ಣಾವಕಾಶ !! | ಉಚಿತ ವಸತಿ ಶಿಕ್ಷಣದೊಂದಿಗೆ ಯಕ್ಷಗಾನ ತರಬೇತಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಯಕ್ಷಗಾನ ಕಲಿಯಲು ಆಸಕ್ತಿ ಹೊಂದಿದವರಿಗೆ ಉತ್ತಮ ಅವಕಾಶವೊಂದಿದೆ. ಉಡುಪಿಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಶಿಕ್ಷಣದೊಂದಿಗೆ ಯಕ್ಷಗಾನ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರವು ವಿದ್ಯಾರ್ಥಿಗಳಿಗೆ ಗುರುಕುಲ ಪದ್ಧತಿಯಂತೆ 10 ವರ್ಷಗಳಿಂದ ವಸತಿ ಶಾಲೆ ನಡೆಸುತ್ತಿದೆ. ಶಿಕ್ಷಣದೊಂದಿಗೆ ಯಕ್ಷಗಾನ ಎಂಬ ಧ್ಯೇಯದೊಂದಿಗೆ ಪ್ರಾರಂಭವಾಗಿರುವ ಈ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ ಬಾಲಕರಿಗೆ ಅವಕಾಶ ಇದೆ. ಉಚಿತ ಊಟ, ಉಪಹಾರ, ವಸತಿಯ ವ್ಯವಸ್ಥೆಯೊಂದಿಗೆ ಯಕ್ಷಗಾನ ಶಿಕ್ಷಣದ ವ್ಯವಸ್ಥೆ ಮಾಡಲಾಗುತ್ತದೆ.


Ad Widget

Ad Widget

Ad Widget

ಆಸಕ್ತರು ಮೇ 15ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ವಿಳಾಸ: ಯಕ್ಷಗಾನ ಕಲಾಕೇಂದ್ರ, ಹಂಗಾರಕಟ್ಟೆ, ಐರೋಡಿ ಅಂಚೆ, ಉಡುಪಿ ತಾಲೂಕು. ಮಾಹಿತಿಗೆ ದೂ: 98806 05610 ಸಂಪರ್ಕಿಸಬಹುದು ಎಂದು ಕಲಾಕೇಂದ್ರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: