ಅಪ್ರಾಪ್ತ ಬಾಲಕಿಯೋರ್ವಳ ಸ್ನಾನದ ವೀಡಿಯೋ ಮಾಡಿ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟ ಬಾಲಕರು| ಹೆದರಿದ ಬಾಲಕಿಯಿಂದ ದುಡುಕಿನ ನಿರ್ಧಾರ!

0 12

ನಿಜಕ್ಕೂ ಇದೊಂದು ಆಘಾತಕಾರಿ ಘಟನೆ. ಅಪ್ರಾಪ್ತ ವಯಸ್ಸಿನವರು ಈ ರೀತಿಯ ಅಪರಾಧಗಳನ್ನು ಮಾಡುತ್ತಾರೆ ಎಂದರೆ ನಂಬಲು ಸ್ವಲ್ಪ ಕಷ್ಟ ಅಂತಾನೇ ಹೇಳಬಹುದು. ಆದರೂ ನಂಬಲಸಾಧ್ಯ ಘಟನೆಗಳು ಯಾವಾಗಲೂ ನಮ್ಮ ಮುಂದೆ ನಡೆಯುತ್ತಲೇ ಇರುತ್ತದೆ. ಅಂಥದ್ದೇ ಒಂದು ಘಟನೆ ವೆಲ್ಲೂರಿನಲ್ಲಿ ನಡೆದಿದೆ.

15 ವರ್ಷದ ಬಾಲಕಿ ಸ್ನಾನ ಮಾಡುತ್ತಿರುವ ದೃಶ್ಯ ಚಿತ್ರಿಸಿಕೊಂಡ ಮೂವರು ಅಪ್ರಾಪ್ತ ಯುವಕರು, ದೈಹಿಕ ಸಂಪರ್ಕ ಮಾಡಬೇಕೆಂಬ ಒತ್ತಾಯದ ಜೊತೆಗೆ ಬ್ಲಾಕ್ ಮೇಲ್ ಕೂಡಾ ಮಾಡಿದ್ದಾರೆ. ಇದರಿಂದ ಭಯಗೊಂಡ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಶನಿವಾರ ನಡೆದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಶೇ. 90 ರಷ್ಟು ಸುಟ್ಟ ಗಾಯಗಳಾಗಿರುವ ಬಾಲಕಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬಾಲಕಿಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ಅಕ್ಕಪಕ್ಕದವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಹೇಳಿಕೆಯ ಪ್ರಕಾರ, ಬ್ಲಾಕ್ ಮೇಲ್ ಮಾಡಿದ ಹುಡುಗರನ್ನು ನೆರೆಮನೆಯ ಕೆ. ಆಕಾಶ್, ಆರ್. ಗಣಪತಿ ಮತ್ತು ಇನ್ನೊಬ್ಬ 17 ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಈಗ ಬಾಲಕರನ್ನು ಬಂಧಿಸಲಾಗಿದೆ.

ನಾನು ಸ್ನಾನ ಮಾಡುತ್ತಿರುವ ದೃಶ್ಯ ಚಿತ್ರೀಕರಣ ಮಾಡಿಕೊಂಡು ದೈಹಿಕ ಸಂಪರ್ಕಕ್ಕೆ ಸಹಕರಿಸದಿದ್ದರೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇವೆ ಎಂದು ಬೆದರಿಕೆ ಹಾಕಿ ಹಿಂಸೆ ನೀಡಿದ್ದಾರೆ ಎಂದು ಬಾಲಕಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

Leave A Reply