ಪೆರುವಾಜೆ ಶ್ರೀನಿಧಿ ಜಲಾನಯನ ಸ್ವ-ಸಹಾಯ ಸಂಘದ ಸಾಧನೆ | ಮುಖ್ಯಮಂತ್ರಿಯವರಿಂದ ಪ್ರಶಸ್ತಿ

ಸುಳ್ಯ: ಜಲಾನಯನ ಇಲಾಖೆಯ ಮೂಲಕ ರಚಿಸಲಾದ ಪೆರುವಾಜೆ ಶ್ರೀನಿಧಿ ಜಲಾನಯನ ಸ್ವ ಸಹಾಯ ಸಂಘವು ಸುತ್ತುನಿಧಿಯನ್ನು ಸ್ವ ಉದ್ಯೋಗಕ್ಕಾಗಿ ಯಶಸ್ವಿಯಾಗಿ ವಿನಿಯೋಗಿಸಿದ್ದಕ್ಕೆ ಮುಖ್ಯ ಮಂತ್ರಿಯವರಿಂದ ಅಭಿನಂದನಾ ಪ್ರಶಸ್ತಿ ಲಭಿಸಿದೆ.

ಸಂಘದ ಸದಸ್ಯರಾದ ನಿರ್ಮಲ ಕಾನಾವುಜಾಲು, ಉಮಾವತಿ ಕಾನಾವುಜಾಲು ಅವರು ಮೇ 8 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪ್ರಶಸ್ತಿ ಪತ್ರ ಸ್ವೀಕರಿಸಿದರು.ಸಂಘದ ಸದಸ್ಯರಾದ ಕಾವೇರಿ, ವನಿತಾ ಉಪಸ್ಥಿತರಿದ್ದರು.


Ad Widget

Ad Widget

Ad Widget

ಶ್ರೀನಿಧಿ ಸಂಘವು ಸುತ್ತು ನಿಧಿ ಬಳಸಿ ಹಾಳೆತಟ್ಟೆ ತಯಾರಿಕೆ ಸ್ವ ಉದ್ಯೋಗ ಪ್ರಾರಂಭ ಸೇರಿದಂತೆ ಉತ್ತಮ ವ್ಯವಹಾರದ ಮನ್ನಣೆ ಹೊಂದಿತು. ಇಲಾಖೆ ಅಧಿಕಾರಿಗಳು ಸ್ವಉದ್ಯೋಗದ ದೃಶ್ಯ ಚಿತ್ರಿಕರಿಸಿ ಕೇಂದ್ರ ಇಲಾಖೆಗೆ ಕಳುಹಿಸಿದ್ದರು. ಇದರ ಆಧಾರದಲ್ಲಿ ದ.ಕ.ಜಿಲ್ಲೆಯಲ್ಲಿ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಶ್ರೀನಿಧಿ ಜಲಾನಯನ ಸ್ವ ಸಹಾಯ ಸಂಘ ಪ್ರಶಸ್ತಿಗೆ ಆಯ್ಕೆಯಾಗಿತ್ತು.

Leave a Reply

error: Content is protected !!
Scroll to Top
%d bloggers like this: