9 ತಿಂಗಳ ಹಿಂದೆ ನಾಪತ್ತೆಯಾದ ಯುವಕನ ಅಸ್ಥಿಪಂಜರ ಪತ್ತೆ

Share the Article

ಉಡುಪಿ : ಯುವಕನೋರ್ವನ ಮೃತದೇಹ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.

ಒಂಭತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೆರ್ಡೂರು ಪಕ್ಕಾಲು ನಿವಾಸಿ ಮಂಜುನಾಥ ಆಚಾರಿ ಪುತ್ರ ನಾಗರಾಜ್ (30) ಅವರ ಮೃತದೇಹ ಇದಾಗಿದೆ ಎಂದು ಕುಟುಂಬಸ್ಥರು ದೃಢಪಡಿಸಿದ್ದಾರೆ.

ನಾಗರಾಜ್ 2021ರ ಆಗಸ್ಟ್ ನಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ನಾಪತ್ತೆ ಪ್ರಕರಣ ದಾಖಲಾಗಿತ್ತು.

ತಲೆ ಬುರುಡೆ ಮತ್ತು ಎಲುಬುಗಳು ಹಾಗೂ ಕಪ್ಪುಬಣ್ಣದ ಪ್ಯಾಂಟ್ ಮತ್ತು 2 ಖಾಲಿ ಪ್ಲಾಸ್ಟಿಕ್ ಬಾಟಲುಗಳು ಪತ್ತೆಯಾಗಿದ್ದವು. ಮೃತದೇಹವನ್ನು ಕಾಡು ಪ್ರಾಣಿಗಳು ಅಥವಾ ಹುಳುಗಳು ತಿಂದಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.