ಕತ್ತಲೆಯಿಂದ ಬೆಳಕಿಗೆ ಬರಬೇಕೆಂದಿದ್ದೇನೆ, ನನ್ನ ಪತಿ ಮೃಗದ ಮನಸ್ಸಿನವನು- ಖ್ಯಾತ ಟಿವಿ ನಿರೂಪಕನ ವಿರುದ್ಧ ಪತ್ನಿಯ ದೂರು!

ತನಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯವಳಾದ ಯುವತಿಯನ್ನು ಮದುವೆಯಾಗಿ, ತನ್ನ ಹೆಂಡತಿಯ ಸೌಂದರ್ಯದ ಬಗ್ಗೆ, ಆಕೆಯ ಗುಣ ನಡತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗುಣಗಾನಮಾಡಿ, ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಂಡಿರುವ ಜೊತೆಗೆ ಟಿವಿ ನಿರೂಪಕ ವೃತ್ತಿ ಮಾಡಿಕೊಂಡಿದ್ದ ವ್ಯಕ್ತಿ ವಿರುದ್ಧ ಆತನ ಪತ್ನಿ ಈಗ ಗಂಭೀರ ಆರೋಪವೊಂದನ್ನು ಮಾಡಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

49 ವರ್ಷದ ಪಾಕ್ ಟಿವಿ ನಿರೂಪಕ ಅಮೀರ್ ಲಿಯಾಕತ್ 18 ವರ್ಷದ ಯುವತಿ ಡಾನಿಯಾ ಶಾಳನ್ನು ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಅಂದರೆ ಕಳೆದ ಫೆಬ್ರವರಿಯಲ್ಲಷ್ಟೇ ಮದುವೆಯಾಗಿದ್ದರು. ಆದರೆ ಇಲ್ಲಿಗೆ ಅವರ ದಾಂಪತ್ಯ ಪಯ ಮುಗಿದಿದೆ ಎಂದು ಕಾಣಿಸುತ್ತದೆ‌. ಏಕೆಂದರೆ ಇಬ್ಬರ ನಡುವೆ ಹೊಂದಾಣಿಕೆ ಕಮ್ಮಿ ಇತ್ತು ಎಂದು ಡಾನಿಯಾ ಶಾ ಆರೋಪಿಸಿದ್ದಾರೆ.


Ad Widget

Ad Widget

Ad Widget

ಲಿಯಾಕತ್ ಒಳ್ಳೆಯ ವ್ಯಕ್ತಿತ್ವದವನಲ್ಲ, ಮನೆಯಲ್ಲಿ ಕೂಡಿಹಾಕಿ ಹೊಡೆಯುತ್ತಿದ್ದ, ಅಲ್ಲದೇ ಮೆನಕೆಲಸದವರ ಮುಂದೆ ಮರ್ಯಾದೆಯೇ ಕೊಡುತ್ತಿರಲಿಲ್ಲ. ಸದಾ ನಶೆಯಲ್ಲಿದ್ದು, ನನ್ನ ಮೇಲೆ ಹಲ್ಲೆ ಮಾಡುತ್ತಿದ್ದು, ಸದ್ಯ ನಾನು ಕತ್ತಲೆಯಿಂದ ಬೆಳಕಿಗೆ ಬರಬೇಕೆಂದಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಈತನಿಂದ ಬಿಡುಗಡೆ ಪಡೆಯಬೇಕು. ಇವನ ಜೊತೆ ಬಾಳಲು ನನಗೆ ಇಷ್ಟವಿಲ್ಲ ಎಂದಿರುವ ಡಾನಿಯಾ ನ್ಯಾಯಾಲಯಕ್ಕೆ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದು, ಜೊತೆಗೆ 15 ಕೋಟಿ ರೂ. ಪರಿಹಾರ ನೀಡಬೇಕೆಂದು ಕೋರಿದ್ದಾರೆ.

Leave a Reply

error: Content is protected !!
Scroll to Top
%d bloggers like this: