ತಂದೆಯ ಮೇಣದ ಪ್ರತಿಮೆಯನ್ನು ಮಾಡಿ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಮದುವೆ ಶಾಸ್ತ್ರಕ್ಕೆ ಕುಳಿತ ವರ!
ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ.ಇದು ಜೀವನದುದ್ದಕ್ಕೂ ಮರೆಯಲಾಗದ ದಿನವೆಂದೆ ಹೇಳಬಹುದು.ಇಂತಹ ಶುಭ ಸಮಾರಂಭದಲ್ಲಿ ತನ್ನ ತಂದೆ-ತಾಯಿ ಕಣ್ಣೆದುರೇ ಇರಬೇಕು ಎಂಬುದು ಪ್ರತಿಯೊಬ್ಬರೂ ಇಚ್ಛೆ ಪಡುವಂತದ್ದೇ.
ಆದರೆ ಮೈಸೂರುನಲ್ಲಿ ನಡೆದ ಮದುವೆಯಲ್ಲಿ ವರ ತನ್ನ ತಂದೆಯನ್ನು ಕಳೆದುಕೊಂಡಿದ್ದ. ಆದರೆ ಅವರಿಲ್ಲದೆ ಮದುವೆ ಮಾಡಿಕೊಳ್ಳಲು ಇಷ್ಟ ಪಡದ ವರ ಮಾಡಿದ ಐಡಿಯಾವೇ ಅದ್ಭುತ.ಹೌದು.ತಂದೆಯನ್ನ ಕಳೆದುಕೊಂಡಿದ್ದರಿಂದ ತನ್ನ ಮದುವೆಯಲ್ಲಿ ತಂದೆಯ ಮೇಣದ ಪ್ರತಿಮೆಯನ್ನು ಮಗ
ಮಾಡಿಸಿದ್ದಾನೆ.
ನಂಜನಗೂಡು ತಾಲೂಕಿನ ಮಲ್ಕುಂಡಿಯ ವಧು ಡಾ.ಅಪೂರ್ವ ಜೊತೆ ಡಾ.ಯತೀಶ್ ಸಪ್ತಪದಿ ತುಳಿದಿದ್ದಾನೆ.ವರ ಯತೀಶ್ ತಂದೆ ರಮೇಶ್ ಎಂಬುವವರು ಕಳೆದ ಒಂದು ವರ್ಷದ ಹಿಂದೆ ಕೋವಿಡ್‌ನಿಂದ ಮೃತಪಟ್ಟಿದರು.ಹೀಗಾಗಿ ತಂದೆಯ ಮೇಣದ ಪ್ರತಿಮೆ ಮುಂದೆ ವರ ಮದುವೆ ಶಾಸ್ತ್ರಕ್ಕೆ ಕುಳಿತಿರುವಂತಹ ಅಪರೂಪದ ಮದುವೆಯೊಂದು ಜಿಲ್ಲೆಯ
ನಂಜನಗೂಡಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರ್ ತಾಲೂಕಿನ ಅಜ್ಜಂಪುರ ನಿವಾಸಿ ಯತೀಶ್,ಮೈಸೂರು ಜೆ.ಎಸ್.ಎಸ್ ಆಯುರ್ವೇದ ಕಾಲೇಜಿನಲ್ಲಿ ಎಂ.ಡಿ ವ್ಯಾಸಂಗ ಮಾಡುತ್ತಿದ್ದು,ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ
ಮಂಟಪದಲ್ಲಿ ವಿವಾಹ ನಡೆದಿದ್ದು, ಮದುವೆ ಶಾಸ್ತ್ರಗಳಲ್ಲಿ ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ವರ ಪೂಜೆಗೆ ಕುಳಿತಿದ್ದಾನೆ.ಒಟ್ಟಾರೆ ಈ ವಿಶೇಷ ಮದುವೆ ಎಲ್ಲರ ಗಮನ ಸೆಳೆದಿದ್ದು, ತಂದೆ ಮೇಲಿನ ಮಗನ ಪ್ರೀತಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.