ಯತ್ನಾಳ್ ಗೆ 200 ಕೋಟಿ ಮಾನ ನಷ್ಟ ಮೊಕದ್ದಮೆ ಹೂಡಿಕೆ ಹಿನ್ನೆಲೆ | ಮಾನ ಇಲ್ಲದವರಿಗೆ ನಷ್ಟ ಏನಾಗತ್ತೆ ? ರೌಡಿ ಕೊತ್ವಾಲ್ ಗೆ ಚಾ ಸಿಗರೇಟ್ ಕೊಡ್ತಿದ್ದ ಡಿಕೆಶಿ ಎಂದು ವಾಗ್ದಾಳಿ ನಡೆಸಿದ ಯತ್ನಾಳ್

Share the Article

ಬೆಂಗಳೂರು:ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಯತ್ನಾಳ್, ಮಾನ ಇಲ್ಲದವರಿಗೆ ಮಾನನಷ್ಟವೇನಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ಮೆಂಟಲ್ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೂ ತಿರುಗೇಟು ನೀಡಿರುವ ಯತ್ನಾಳ್, ರೌಡಿ ಕೊತ್ವಾಲ್ ರಾಮಚಂದ್ರಗೆ ಚಹಾ, ಸಿಗರೇಟ್ ಕೊಡ್ತಿದ್ದ ರೌಡಿಗಳಿಂದ ನಾನೇನೂ ಕಲಿಯಬೇಕಿಲ್ಲ ಎಂದು ಹೇಳಿದ್ದಾರೆ.ಡಿ.ಕೆ.ಶಿವಕುಮಾರ್ ಮಾನನಷ್ಟ ಮೊಕದ್ದಮೆ ಹಾಕುವುದಾದರೆ ಹಾಕಲಿ.ಮಾನ ಇದ್ದವರಿಗೆ ಮಾನನಷ್ಟವಾಗುತ್ತೆ. ಮಾನ ಇಲ್ಲದವರಿಗೇನು ಮಾನ ನಷ್ಟವಾಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಆಜಾನ್ ವಿರುದ್ಧ ಸುಪ್ರಭಾತ ಅಭಿಯಾನ ನಡೆಸುತ್ತಿರುವ
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ರಾಜ್ಯ ಸರ್ಕಾರ
ಅನುಮತಿಯಿಲ್ಲದ ಮೈಕ್ ಗಳನ್ನು ತೆರವು ಮಾಡಬೇಕು.ಕೋರ್ಟ್ ಆದೇಶ ಪಾಲಿಸಬೇಕಾಗಿದ್ದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

Leave A Reply

Your email address will not be published.