ಪೊಲೀಸಪ್ಪನ ಲವ್ ದೋಖಾ : ವಂಚನೆ ಗೊತ್ತಾಗಿ ಯುವತಿ ಆತ್ಮಹತ್ಯೆ!

ಇದೊಂದು ಪ್ರೀತಿಯಲ್ಲಿ ಬಿದ್ದು ಒದ್ದಾಡಿ ಕೊನೆಗೆ ಆತ್ಮಹತ್ಯೆಗೆ ಕೊರೊಳೊಡ್ಡಿದ ಘಟನೆ.

ಯುವತಿಯೋರ್ವಳು ಸಬ್ ಇನ್ಸ್‌ಪೆಕ್ಟರ್ ಪ್ರೀತಿಯಲ್ಲಿ ಮುಳುಗಿದ್ದ ಜಗತ್ತು ಕಾಣದಾಗಿದೆ. ಆದರೆ ಆಕೆಗೆ ಆ ಯುವಕ ಮೊದಲೇ ಮದುವೆಯಾಗಿರುವ ವಿಚಾರ ಗೊತ್ತಾಗಿ, ನೋವು ತಾಳಲಾರದೆ ಒದ್ದಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕರುಣಾಜನಕ ಘಟನೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ಶುಕ್ರವಾರ ನಡೆದಿದೆ.


Ad Widget

Ad Widget

Ad Widget

ಸರಸ್ವತಿ ಎಂಬ ಯುವತಿಯೇ ಮೃತ ದುರ್ದೈವಿ. ಈಕೆ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿ ಸಬ್ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ನಾಯಕ್‌ನನ್ನು ಶನಿವಾರ ಬಂಧಿಸಲಾಗಿದೆ. ಸರಸ್ವತಿ ಪದವಿ ವಿದ್ಯಾರ್ಥಿನಿಯಾಗಿದ್ದಳು. ಸರಸ್ವತಿ ಮತ್ತು ನಾಯಕ್ ಇಬ್ಬರು ಅನಂತಪುರ ಜಿಲ್ಲೆಯ ಪಮಿದಿ ಗ್ರಾಮದ ನಿವಾಸಿಗಳು, ಸರಸ್ವತಿಯನ್ನು ಪರಿಚಯ ಮಾಡಿಕೊಂಡಿದ್ದ ಎಸ್‌ಐ ಆಕೆಯ ಪ್ರೀತಿಯ ನಾಟಕವಾಡಿದ್ದ. ಅಲ್ಲದೆ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಂಚಿಸಿದ್ದಾರೆ.

ಪ್ರೀತಿ ವಿಚಾರ ತಿಳಿದು ಸರಸ್ವತಿ ಕುಟುಂಬದವರು ಮದುವೆಗೆ ಸಿದ್ಧತೆಯನ್ನೂ ನಡೆಸಿದ್ದರು. ಆದರೆ, ನಾಯಕ್‌ಗೆ ಈಗಾಗಲೇ ಬೇರೊಬ್ಬಳ ಜತೆ ಮದುವೆ ಆಗಿರುವುದು ಸರಸ್ವತಿಗೆ ಅನಂತರ ತಿಳಿದಿದೆ. ಅಲ್ಲದೆ, ಎಸ್‌ಐ ಅನೇಕ ಹುಡುಗಿಯರನ್ನು ಇದೇ ರೀತಿ ವಂಚಿಸಿದ್ದಾನೆ ಎಂಬ ಸತ್ಯ ಆಕೆ ಗೊತ್ತಾಗಿದೆ. ಇದರಿಂದ ಮನನೊಂದ ಸರಸ್ವತಿ
ಗುರುವಾರ ವಿಷ ಕುಡಿದಿದ್ದಳು. ಅಸ್ವಸ್ಥಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ.

ಸುದ್ದಿ ತಿಳಿದ ಪೊಲೀಸ್ ವರಿಷ್ಠಾಧಿಕಾರಿ ಫಕಿರಪ್ಪ ಕಾಗಿ ಅವರು, ಆರೋಪಿ ಎಸ್‌ಐ ನಾಯಕ್‌ನನ್ನು ಬಂಧಿಸುವಂತೆ ಆದೇಶ ಹೊರಡಿಸಿದ್ದರು. ಅದರಂತೆ ಆರೋಪಿಯನ್ನು ಶನಿವಾರ ಬಂಧಿಸಲಾಗಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: