ಫ್ಯಾಷನ್ ಗಾಗಿ ಉಗುರು ಬೆಳೆಸೋ ಅಭ್ಯಾಸ ನೀವು ಹೊಂದಿದ್ದೀರಾ?? | ಹಾಗಾದರೆ ಇಲ್ಲಿದೆ ನೋಡಿ ಉಗುರನ್ನು ಇನ್ನೂ ಆಕರ್ಷಣೀಯವಾಗಿಸುವ ಗುಟ್ಟು
ಸೌಂದರ್ಯ ಎಂಬುದು ಮನುಷ್ಯನ ಪ್ರತಿಯೊಂದು ದೇಹದ ಭಾಗದಿಂದ ಕೂಡಿದೆ. ಇದರಲ್ಲಿ ನಮ್ಮ ಬೆರಳಿನ ಉಗುರು ಕೂಡ ಒಂದು.ಇದು ಸೌಂದರ್ಯ ಮಾತ್ರವಲ್ಲದೇ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.ಹುಡುಗರಿಕ್ಕಿಂತ ಹೆಚ್ಚಾಗಿ ಹುಡುಗಿಯರಿಗೆ ಉಗುರು ಬೆಳೆಸೋ ಅಭ್ಯಾಸ ಹೆಚ್ಚು ಎಂದೇ ಹೇಳಬಹುದು.
ಕೆರಾಟಿನ್ ಎನ್ನುವ ಗಟ್ಟಿಯಾದ ಪ್ರೊಟೀನ್ ನಮ್ಮ ಉಗುರಿನ ಬೆಳವಣಿಗೆಗೆ ಸಹಕಾರಿಯಾಗಿದ್ದು,ತಿಂಗಳಿಗೆ ಸರಾಸರಿ 3.47 ಮಿಲಿ ಮೀಟರ್ನ ಹತ್ತನೇ ಒಂದು ಭಾಗದಷ್ಟು ಉಗುರ ಬೆಳೆಯುತ್ತದೆ.ಈ ನಿಟ್ಟಿನಲ್ಲಿ ಉಗುರಿನ ಆರೋಗ್ಯದ ಮೇಲೆ ನಮ್ಮ ದೈಹಿಕ ಆರೋಗ್ಯವೂ ನಿರ್ಧರಿತವಾಗುತ್ತದೆ.ಉಗುರು ಬೆಳೆಸಿ ಅಂದವಾಗಿಟ್ಟುಕೊಳ್ಳಬೇಕು ಎನ್ನುವ ಯೋಜನೆಯಲ್ಲಿ ನೀವೂ ಕೂಡ ಇದ್ದರೆ, ಇಲ್ಲಿದೆ ನೋಡಿ ಸೌಂದರ್ಯವಾಗಿರಿಸುವ ಗುಟ್ಟು.
- ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ ಸೆಲೆನಿಯಮ್ ಅಂಶ ಹೇರಳವಾಗಿದ್ದು ಬೇಗನೇ ಉಗುರು ಬೆಳೆಯಲು ನೆರವಾಗುತ್ತದೆ. ಆದ್ದರಿಂದ ಆಗಾಗ ಬೆಳ್ಳಿಳ್ಳಿ ಬಿಡಿಸುವುದು ನಿಮ್ಮ ಉಗುರಿಗೆ ಒಂದು ರೀತಿ ಮಸಾಜ್ನಂತೆಯೇ ಇರುತ್ತದೆ.
- ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆಯಲ್ಲಿ ಉಗುರುಗಳನ್ನು ಮಸಾಜ್ ಮಾಡುವುದು ಬಹಳ ಮುಖ್ಯವಾಗುತ್ತದೆ. ಈ ರೀತಿ ಮಾಡುವುದರಿಂದ ವೇಗವಾಗಿ ಉಗುರು ಬೆಳೆಯುತ್ತದೆ.
- ಗ್ರೀನ್ ಟೀ : ಗ್ರೀನ್ ಟೀ ಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಇದು ಉಗುರು ಕೀಳುವುದನ್ನು ತಡೆಯುವುದಲ್ಲದೇ ಉಗುರಿನ ದೃಢತೆ ಹೆಚ್ಚಿಸುತ್ತದೆ. ವಾರಕ್ಕೊಮ್ಮೆ ಗ್ರೀನ್ ಟೀಯಿಂದ ಉಗುರುಗಳಿಗೆ ಮಸಾಜ್ ನೀಡುವುದು ಪ್ರಯೋಜನಕಾರಿ.
- ಮೊಟ್ಟೆ : ಮೊಟ್ಟೆಯಲ್ಲಿ ಸಲ್ಫರ್ ಅಂಶ ಹೇರಳವಾಗಿರುವ ಕಾರಣ ಉಗುರು ಬಹಳ ಬೇಗನೇ ಬೆಳವಣಿಗೆ ಕಾಣುತ್ತದೆ. ಈ ನಿಟ್ಟಿನಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಉಗುರಗಳ ಮಸಾಜ್ಗೆ ಬಳಸಬಹುದು. ಇದರಿಂದ ಉಗುರಿನ ಹೊಳಪು ಕೂಡ ಹೆಚ್ಚಾಗುತ್ತದೆ.
- ಅಲೋವೆರಾ : ಅಲೋವೆರಾ ನಿಮ್ಮ ಉಗುರುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆ ಮೂಲಕ ಉಗುರು ಅತ್ಯಂತ ವೇಗವಾಗಿ ಬೆಳೆಯುತ್ತದೆ. ಆಕರ್ಷಕ ಉಗುರು ನಿಮ್ಮದಾಗುತ್ತದೆ.
- ಶಿಯಾ ಬಟರ್ : ವಾರದಲ್ಲಿ ಒಮ್ಮೆ ಅಥವಾ 2 ಬಾರಿ ಶಿಯಾ ಬಟರ್ ಅನ್ನು ನಿಮ್ಮ ಉಗುರುಗಳಿಗೆ ಲೇಪಿಸಿ ಮಸಾಜ್ ಮಾಡಿಕೊಳ್ಳಿ. ಇದು ಉಗುರಿನ ಆರೋಗ್ಯಕ್ಕೆ ಪ್ರಯೋಜನಕಾರಿ.