‘ಆಹಾರ’ದಲ್ಲಿ ಖಾರ ಹೆಚ್ಚಾದ್ರೆ ಏನು ಮಾಡುವುದು? ಎಂಬ ಪ್ರಶ್ನೆಗೆ ಇಲ್ಲಿದೆ ಕೆಲವೊಂದು ಟಿಪ್ಸ್ !
ಅಡುಗೆ ಒಂದು ಕಲೆ. ಎಲ್ಲರಿಗೂ ಈ ಕಲೆ ಒಲಿದು ಬರುವುದಿಲ್ಲ. ನಳಪಾಕ ಮಾಡಲು ಬಲ್ಲವರು ಅದೃಷ್ಟವಂತರೆಂದೇ ಹೇಳಬಹುದು. ಮನೆಯಲ್ಲಿ ರುಚಿ ರುಚಿಯಾದ ಅಡುಗೆ ಮಾಡುವವರು ಇದ್ದಾರೆ ಅಂದರೆ ಯಾರೇ ಆದರೂ ಹೊರಗಿನ ಊಟ ಮುಟ್ಟಲ್ಲ. ಇಂತಿಪ್ಪ ಅಡುಗೆಯಲ್ಲಿ ಯಾವಾಗಲಾರದರೊಮ್ಮೆ ಖಾರ ಜಾಸ್ತಿಯಾದರೆ ಏನು ಮಾಡುವುದು ಎಂದು ಯೋಚಿಸುವವರಿಗೆ ಒಂದು ಸುಲಭ ಉಪಾಯ ಇಲ್ಲಿದೆ.
ಪ್ರತಿ ಬಾರಿ ರುಚಿರುಚಿಯಾಗಿ ಆಹಾರ ತಯಾರಾಗುವುದಿಲ್ಲ. ಉಪ್ಪು, ಹುಳಿ, ಖಾರ ಎಲ್ಲವೂ ಸರಿಯಾಗಿರೋದು ಕಷ್ಟ. ಅನೇಕರು ಖಾರ ತಿನ್ನಲು ಇಷ್ಟಪಡುವುದಿಲ್ಲ. ನೀವು ತಯಾರಿಸಿದ ಆಹಾರದಲ್ಲೂ ಖಾರ ಜಾಸ್ತಿಯಾದ್ರೆ ಕೆಲವೊಂದು ಟಿಪ್ಸ್ ಬಳಸಿ.
ಒಂದು ವೇಳೆ ನೀವು ತರಕಾರಿ ಸಾಂಬಾರ್ ತಯಾರಿಸಿದ್ದೇ ಆದರೆ ಖಾರ ಹೆಚ್ಚಾಗಿದ್ದರೆ, ಖಾರ ಕಡಿಮೆ ಮಾಡಲು ದೇಸಿ ತುಪ್ಪವನ್ನು ಹಾಕಿ. ಇದು ಖಾರ ಕಡಿಮೆ ಮಾಡಿ ತರಕಾರಿ ರುಚಿಯನ್ನು ಹೆಚ್ಚಿಸುತ್ತದೆ.
ಪದಾರ್ಥಗಳಲ್ಲಿನ ಖಾರ ಹೆಚ್ಚಾದ್ರೆ ಅದಕ್ಕೆ ಟೊಮೋಟೋ ಸೇರಿಸಬಹುದು. ಪದಾರ್ಥ ಟೊಮೋಟೋ ಸೇರಿಸುವ ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಕತ್ತರಿಸಿದ ಟೊಮೋಟೋವನ್ನು ಚೆನ್ನಾಗಿ ಹುರಿದುಕೊಂಡರೆ ತುಂಬಾ ಒಳ್ಳೆಯದಾಗುತ್ತದೆ.
ಕರಿ ಖಾರ ಕಡಿಮೆ ಮಾಡಿ ರುಚಿ ಹೆಚ್ಚಿಸಬೇಕೆಂದಿರುವವರು ಅದಕ್ಕೆ ತಾಜಾ ಕ್ರೀಂ, ಮೊಸರು ಸೇರಿಸಬಹುದು.
ಕರಿ, ಸಾಂಬಾರ್ ಮಾಡುವ ವೇಳೆ ಖಾರವಾದ್ರೆ, ತರಕಾರಿಗಳ ರಾಜಾ ಆಲೂಗಡ್ಡೆಯನ್ನು ಬೇಯಸಿ ಕತ್ತರಿಸಿ ಹಾಕಿದ್ರೆ ಖಾರ ಕಡಿಮೆಯಾಗುತ್ತದೆ.