ಮುಸ್ಲಿಮರ ನರಕ ಕೂಪವಾಗಿ ಮಾರ್ಪಾಟಾಗುತ್ತಿದೆ ಅಫ್ಘಾನಿಸ್ತಾನ | ಮಹಿಳೆಯರ ವಾಹನ ಪರವಾನಿಗೆ ಬ್ಯಾನ್ ಮಾಡಿದ ತಾಲಿಬಾನ್ ಸರ್ಕಾರ !!

ಇಲ್ಲಿ ಮಹಿಳೆಯರ ಬದುಕು ದಿನದಿಂದ ದಿನಕ್ಕೆ ನರಕ ಕೂಪವಾಗಿ ಮಾರ್ಪಾಟಾಗುತ್ತಿದೆ. ತಾಲಿಬಾನಿಗಳ ದಿನಕ್ಕೊಂದು ಕಾನೂನಿಗೆ ಇಲ್ಲಿನ ಮಹಿಳೆಯರು ಬಲಿಪಶುವಾಗುತ್ತಿದ್ದಾರೆ. ಇದೀಗ ತಾಲಿಬಾನ್ ಆಡಳಿತವು ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ವಾಹನ ಪರವಾನಗಿ ನೀಡುವುದನ್ನು ನಿಲ್ಲಿಸಿದೆ.

ಆಹಾರ ಮತ್ತು ಅಗತ್ಯ ವಸ್ತುಗಳ ಸರಬರಾಜುಗಳ ತೀವ್ರ ಕೊರತೆಯೊಂದಿಗೆ ದೇಶವು ವಿನಾಶಕಾರಿ ಮಾನವೀಯ ಬಿಕ್ಕಟ್ಟಿನಿಂದ ಬಳಲುತ್ತಿರುವ ಸಂದರ್ಭದಲ್ಲಿ ಈ ನಿಷೇಧವನ್ನು ಹೇರಲಾಗಿದೆ. ತಾಲಿಬಾನ್ ವಶಪಡಿಸಿಕೊಳ್ಳುವ ಮೊದಲು ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಕಾಬೂಲ್ ಸೇರಿದಂತೆ ದೇಶದ ಕೆಲವು ಪ್ರಮುಖ ನಗರಗಳಲ್ಲಿ ವಾಹನ ಚಲಾಯಿಸುವ ಹಕ್ಕು ಹೊಂದಿದ್ದರು. ಆದರೆ ತಾಲಿಬಾನ್ ಈಗ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ವಿತರಿಸುವುದನ್ನು ನಿಲ್ಲಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


Ad Widget

Ad Widget

Ad Widget

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಫ್ಘಾನ್ ಸರ್ಕಾರದ ಪತನ ಮತ್ತು ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಹದಗೆಟ್ಟಿದೆ. ದೇಶದಲ್ಲಿ ಹೋರಾಟ ಕೊನೆಗೊಂಡಿದ್ದರೂ, ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ. ಜೊತೆಗೆ ಮಹಿಳೆಯರ ಹಕ್ಕುಗಳನ್ನೂ ಕಸಿದುಕೊಳ್ಳಲಾಗುತ್ತಿದೆ.

ಈತ್ತೀಚೆಗಷ್ಟೇ ತಾಲಿಬಾನ್ ಆಡಳಿತವು, ಅಫ್ಘಾನಿಸ್ತಾನದಲ್ಲಿ 6ನೇ ತರಗತಿ ಮುಗಿಸಿದ ನಂತರ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಿತ್ತು. ಈ ನಡೆ ವಿಶ್ವಾದ್ಯಂತ ಖಂಡನೆಗೆ ಕಾರಣವಾಯಿತು. ನಂತರ ಶಿಕ್ಷಕರ ಕೊರತೆ ಇರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ಶೀಘ್ರದಲ್ಲೇ 6ನೇ ತರಗತಿ ನಂತರವೂ ಹೆಣ್ಣುಮಕ್ಕಳು ಶಾಲೆಗಳಲ್ಲಿ ಶಿಕ್ಷಣ ಕಲಿಯುವುದನ್ನು ಪುನಾರಂಭಿಸಲಾಗುವುದು ಎಂದು ತಾಲಿಬಾನ್ ಹೇಳಿತ್ತು.

ಅಫ್ಘಾನಿಸ್ತಾನ್ ಈಗ ವಿಶ್ವದಲ್ಲೇ ಅತಿ ಹೆಚ್ಚು ತುರ್ತು ಆಹಾರ ಅಭದ್ರತೆಯ ಸಮಸ್ಯೆ ಎದುರಿಸುತ್ತಿದೆ. ದೇಶದಲ್ಲಿ ಶೇ.95ರಷ್ಟು ಜನತೆ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಹೀಗಿದ್ದರೂ ಬುದ್ಧಿ ಕಲಿಯದ ತಾಲಿಬಾನ್ ಸರ್ಕಾರ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಲೇ ಇದೆ.

Leave a Reply

error: Content is protected !!
Scroll to Top
%d bloggers like this: