ಅಮೆಜಾನ್ ನಿಂದ ಗ್ರಾಹಕರಿಗೆ ಮೆಗಾ ಆಫರ್ !! | ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 13

0 17

ಆನ್ಲೈನ್ ಶಾಪಿಂಗ್ ಆಪ್ ಗಳಲ್ಲಿ ದಿನದಿಂದ ದಿನಕ್ಕೆ ಒಂದೊಂದು ಆಫರ್ ಗಳು ಬರುತ್ತಲೇ ಇದೆ. ಅದರಲ್ಲಿ ಅಮೆಜಾನ್ ಕೂಡ ಒಂದು. ಇದೀಗ ಅಮೆಜಾನ್, ದುಬಾರಿ ಎನಿಸಿರುವ ಐಫೋನ್ 13 ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

ಹೌದು.79,900 ರೂಪಾಯಿಗಳ ಐಫೋನ್ ಅನ್ನು ಕೇವಲ 51,600 ರೂಪಾಯಿಗಳಿಗೆ ಅಮೆಜಾನ್ ಮಾರಾಟ ಮಾಡುತ್ತಿದ್ದು,ಇದು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರವಾಗಿದೆ.ಅಲ್ಲದೇ, ಗರಿಷ್ಠ ಮಾರುಕಟ್ಟೆ ದರಕ್ಕಿಂತ ಸುಮಾರು 30,000 ರೂಪಾಯಿಗಳಷ್ಟು ಕಡಿಮೆಯಾಗಲಿದೆ.

ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಶೇಕಡಾ 5 ರಷ್ಟು ಕ್ಯಾಶ್ ಬ್ಯಾಕ್ ಅನ್ನು ಪಡೆಯಲಿದ್ದು, 3,395 ರೂಪಾಯಿಗಳ ರಿಯಾಯ್ತಿ ಪಡೆಯಲಿದ್ದಾರೆ.ಅಲ್ಲದೆ ಅಮೆಜಾನ್ ನ ಡೀಲ್ ಗಳನ್ನು ಗಮನಿಸಿದರೆ ಐಫೋನ್ 13 ಇನ್ನೂ ಕಡಿಮೆ ದರಕ್ಕೆ ಲಭ್ಯವಾಗಲಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಐಫೋನ್ ಖರೀದಿ ಮೇಲೆ 5,000 ರೂಪಾಯಿಗಳ ಡಿಸ್ಕೌಂಟ್ ಪಡೆಯಲಿದ್ದಾರೆ. ಇದರ ಜೊತೆಗೆ 3,400 ರೂಪಾಯಿ ಕ್ಯಾಶ್ ಬ್ಯಾಕ್ ಕೂಡ ದೊರೆಯಲಿದೆ.

ಇನ್ನು ಎಕ್ಸ್ ಚೇಂಜ್ ಆಫರ್ ನಲ್ಲಿ ಗರಿಷ್ಠ 12,900 ರೂಪಾಯಿಗಳ ಡಿಸ್ಕೌಂಟ್ ದೊರೆಯಲಿದ್ದು,ವಿನಿಮಯದ ಹಣ ಬೇರೆ ಬೇರೆ ಫೋನ್ ಗಳಿಗೆ ಬೇರೆ ಬೇರೆಯದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಐಫೋನ್ ಅನ್ನು 51,600 ರೂಪಾಯಿಗಳಿಗೆ ಖರೀದಿಸಬಹುದು ಎಂದು ಅಮೆಜಾನ್ ತಿಳಿಸಿದೆ.

Leave A Reply