ಅನ್ಯಗ್ರಹ ಜೀವಿ ಏಲಿಯನ್ಸ್ ನ್ನು ಕ್ಯಾಚ್ ಹಾಕಲು ನಾಸಾ ಮಾಡಿದೆ ಹೊಸ ಪ್ಲಾನ್ | ಏಲಿಯನ್ಸ್ ಆಕರ್ಷಣೆಗೆ ಅಂತರಿಕ್ಷಕ್ಕೆ ನಗ್ನ ಚಿತ್ರ ರವಾನೆ !
ನ್ಯೂಯಾರ್ಕ್: ಅನ್ಯಗ್ರಹ ಜೀವಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸ ಪ್ಲಾನ್ ಮಾಡಿದೆ. ಅದು ಮಾನವರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ.
ಮಾನವರ – ಗಂಡು ಮತ್ತು ಹೆಣ್ಣುಗಳ – ಸುಂದರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಈ ಮೂಲಕ ಇಲ್ಲಿಯತನಕ ಇರಬಹುದು ಎಂದುಕೊಂಡಿರುವ ಅನ್ಯಗ್ರಹ ಜೀವಿಗಳನ್ನು (ಏಲಿಯನ್ಸ್) ಆಕರ್ಷಿಸಿ, ‘ಕ್ಯಾಚ್ ‘ ಹಾಕೋ ಹೊಸ ಪ್ರಯತ್ನವನ್ನು ನಾಸಾ ನಡೆಸಿದೆ. “ಬೀಕನ್ ಇನ್ ದ ಗ್ಯಾಲೆಕ್ಸಿ’ ಎಂಬ ಯೋಜನೆಯಡಿ ಈ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ.
ಗಣಿತಶಾಸ್ತ್ರ ಸಂಕೇತಗಳನ್ನು ಆಧರಿಸಿದ ಬೈನರಿ ಕೋಡ್ ಆಧಾರಿತ ಸಂದೇಶ ಏಲಿಯನ್ಸ್ಗೆ ಅರ್ಥವಾಗಬಹುದು ಎಂಬ ಆಶಾವಾದವನ್ನೂ ನಾಸಾ ವಿಜ್ಞಾನಿಗಳು ಹೊಂದಿದ್ದಾರೆ. ಮನುಷ್ಯರಂತೆ ಏಲಿಯನ್ ಗಳು ಕೂಡ ವಿರುದ್ದ ಲಿಂಗಿಯ ಕಡೆ ( ಯಾರಿಗೆ ಗೊತ್ತು- ಸಲಿಂಗಿ ಕೂಡಾ ಇರಬಹುದು !!) ಆಕರ್ಷಿತ ಗೊಳ್ಳ ಬಹುದು. ಆ ಮೂಲಕ ಎಲಿಯನ್ ಗಳ ಸಂಪರ್ಕ ಸಾಧಿಸಬಹುದು ಎನ್ನುವುದು ನಾಸಾ ವಿಜ್ಞಾನಿಗಳ ಹೊಚ್ಚ ಹೊಸಾ ಉಪಾಯ !
ಈ ಹಿಂದೆ 1972ರಲ್ಲಿ ಕೂಡ “ಪಯೋನಿಯರ್ 10′ ಮತ್ತು 1973ರಲ್ಲಿ “ಪಯೋನಿಯರ್ 11′ ಯೋಜನೆಗಳ ಮೂಲಕ ಬಾಹ್ಯಾಕಾಶಕ್ಕೆ ಮಾನವರ ನಗ್ನ ಚಿತ್ರಗಳನ್ನು ಕಳುಹಿಸಲಾಗಿತ್ತು.
ಬಹುಶಃ ಅದು ಏಲಿಯನ್ ಗಳ ಗಮನಕ್ಕೆ ಬಂದಿಲ್ಲ ಅನ್ನಿಸುತ್ತದೆ.
ಈಗ ಕಳಿಸಲು ಉದ್ದೇಶಿಸಿದ ಮಾನವರ ನಗ್ನ ಚಿತ್ರಗಳು ಡಿಜಿಟಲ್ ಮಾದರಿಯಲ್ಲಿದ್ದು, ಆ ಸಂಕೇತಗಳನ್ನು ಏಲಿಯನ್ ಗಳು ಗ್ರಹಿಸಿ, ನಂತರ ನಮ್ಮನ್ನು ಸಂಪರ್ಕಿಸಲು ಬೇಕಾದ ಇನ್ವಿಟೇಶನ್ ಲಿಂಕ್ ಅನ್ನು ಕೂಡಾ ಅಂತರಿಕ್ಷಕ್ಕೆ ಹರಿಯಬಿಡಲಾಗಿದೆ. ಯಾರಿಗೆ ಗೊತ್ತು : ಈ ಸಿಗ್ನಲ್ ಗಳು ಅದ್ಯಾವುದೋ ರಸಿಕ ಏಲಿಯನ್ ಗೆ ತಲುಪಿ ಅವು ಗುಂಪು ಗುಂಪಾಗಿ ಭೂಮಿಗೆ ಬಂದು ತಾಂಬೂಲ ವಿನಿಮಯ ಮಾಡಿಕೊಂಡರೂ ಮಾಡಿಯಾವು ! ಆ ಮೂಲಕ ಅತ್ಯಂತ ಅಡ್ವಾನ್ಸ್ ಟೆಕ್ನಾಲಜಿ ಹೊಂದಿದೆ ಎಂದು ನಂಬಲಾಗಿರುವ ಏಲಿಯನ್ ಗಳು ನಮಗೆ ಹೊಸ ಟೆಕ್ನಾಲಜಿ ಟ್ರಾನ್ಸ್ಫರ್ ಮಾಡಿದರೂ ಅಚ್ಚರಿ ಇಲ್ಲ. ಇದು ಅಮೆರಿಕಾದ ನಾಸಾ ವಿಜ್ಞಾನಿಗಳ ಆಶಾಭಾವನೆ.