ಅನ್ಯಗ್ರಹ ಜೀವಿ ಏಲಿಯನ್ಸ್‌ ನ್ನು ಕ್ಯಾಚ್ ಹಾಕಲು ನಾಸಾ ಮಾಡಿದೆ ಹೊಸ ಪ್ಲಾನ್ | ಏಲಿಯನ್ಸ್‌ ಆಕರ್ಷಣೆಗೆ ಅಂತರಿಕ್ಷಕ್ಕೆ ನಗ್ನ ಚಿತ್ರ ರವಾನೆ !

ನ್ಯೂಯಾರ್ಕ್‌: ಅನ್ಯಗ್ರಹ ಜೀವಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸ ಪ್ಲಾನ್ ಮಾಡಿದೆ. ಅದು ಮಾನವರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ.

ಮಾನವರ – ಗಂಡು ಮತ್ತು ಹೆಣ್ಣುಗಳ – ಸುಂದರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಈ ಮೂಲಕ ಇಲ್ಲಿಯತನಕ ಇರಬಹುದು ಎಂದುಕೊಂಡಿರುವ ಅನ್ಯಗ್ರಹ ಜೀವಿಗಳನ್ನು (ಏಲಿಯನ್ಸ್‌) ಆಕರ್ಷಿಸಿ, ‘ಕ್ಯಾಚ್ ‘ ಹಾಕೋ ಹೊಸ ಪ್ರಯತ್ನವನ್ನು ನಾಸಾ ನಡೆಸಿದೆ. “ಬೀಕನ್‌ ಇನ್‌ ದ ಗ್ಯಾಲೆಕ್ಸಿ’ ಎಂಬ ಯೋಜನೆಯಡಿ ಈ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ.


Ad Widget

Ad Widget

Ad Widget

ಗಣಿತಶಾಸ್ತ್ರ ಸಂಕೇತಗಳನ್ನು ಆಧರಿಸಿದ ಬೈನರಿ ಕೋಡ್‌ ಆಧಾರಿತ ಸಂದೇಶ ಏಲಿಯನ್ಸ್‌ಗೆ ಅರ್ಥವಾಗಬಹುದು ಎಂಬ ಆಶಾವಾದವನ್ನೂ ನಾಸಾ ವಿಜ್ಞಾನಿಗಳು ಹೊಂದಿದ್ದಾರೆ. ಮನುಷ್ಯರಂತೆ ಏಲಿಯನ್ ಗಳು ಕೂಡ ವಿರುದ್ದ ಲಿಂಗಿಯ ಕಡೆ ( ಯಾರಿಗೆ ಗೊತ್ತು- ಸಲಿಂಗಿ ಕೂಡಾ ಇರಬಹುದು !!) ಆಕರ್ಷಿತ ಗೊಳ್ಳ ಬಹುದು. ಆ ಮೂಲಕ ಎಲಿಯನ್ ಗಳ ಸಂಪರ್ಕ ಸಾಧಿಸಬಹುದು ಎನ್ನುವುದು ನಾಸಾ ವಿಜ್ಞಾನಿಗಳ ಹೊಚ್ಚ ಹೊಸಾ ಉಪಾಯ !

ಈ ಹಿಂದೆ 1972ರಲ್ಲಿ ಕೂಡ “ಪಯೋನಿ­ಯರ್‌ 10′ ಮತ್ತು 1973ರಲ್ಲಿ “ಪಯೋನಿಯರ್‌ 11′ ಯೋಜನೆಗಳ ಮೂಲಕ ಬಾಹ್ಯಾಕಾಶಕ್ಕೆ ಮಾನವರ ನಗ್ನ ಚಿತ್ರಗಳನ್ನು ಕಳುಹಿಸಲಾಗಿತ್ತು.
ಬಹುಶಃ ಅದು ಏಲಿಯನ್ ಗಳ ಗಮನಕ್ಕೆ ಬಂದಿಲ್ಲ ಅನ್ನಿಸುತ್ತದೆ.
ಈಗ ಕಳಿಸಲು ಉದ್ದೇಶಿಸಿದ ಮಾನವರ ನಗ್ನ ಚಿತ್ರಗಳು ಡಿಜಿಟಲ್ ಮಾದರಿಯಲ್ಲಿದ್ದು, ಆ ಸಂಕೇತಗಳನ್ನು ಏಲಿಯನ್ ಗಳು ಗ್ರಹಿಸಿ, ನಂತರ ನಮ್ಮನ್ನು ಸಂಪರ್ಕಿಸಲು ಬೇಕಾದ ಇನ್ವಿಟೇಶನ್ ಲಿಂಕ್ ಅನ್ನು ಕೂಡಾ ಅಂತರಿಕ್ಷಕ್ಕೆ ಹರಿಯಬಿಡಲಾಗಿದೆ. ಯಾರಿಗೆ ಗೊತ್ತು : ಈ ಸಿಗ್ನಲ್ ಗಳು ಅದ್ಯಾವುದೋ ರಸಿಕ ಏಲಿಯನ್ ಗೆ ತಲುಪಿ ಅವು ಗುಂಪು ಗುಂಪಾಗಿ ಭೂಮಿಗೆ ಬಂದು ತಾಂಬೂಲ ವಿನಿಮಯ ಮಾಡಿಕೊಂಡರೂ ಮಾಡಿಯಾವು ! ಆ ಮೂಲಕ ಅತ್ಯಂತ ಅಡ್ವಾನ್ಸ್ ಟೆಕ್ನಾಲಜಿ ಹೊಂದಿದೆ ಎಂದು ನಂಬಲಾಗಿರುವ ಏಲಿಯನ್ ಗಳು ನಮಗೆ ಹೊಸ ಟೆಕ್ನಾಲಜಿ ಟ್ರಾನ್ಸ್ಫರ್ ಮಾಡಿದರೂ ಅಚ್ಚರಿ ಇಲ್ಲ. ಇದು ಅಮೆರಿಕಾದ ನಾಸಾ ವಿಜ್ಞಾನಿಗಳ ಆಶಾಭಾವನೆ.

Leave a Reply

error: Content is protected !!
Scroll to Top
%d bloggers like this: