ವಿಟ್ಲದ ಆತ್ಮಿಕಾಳ ಪರವಾಗಿ ಯಾರೂ ಯಾಕೆ ಉಸುರೆತ್ತೊದಿಲ್ಲ ? |
ಎಲ್ಲಿ ಸತ್ತಿದ್ದಾರೆ ನಕಲಿ ಸ್ತ್ರೀವಾದಿಗಳು,ಹೋರಾಟಗಾರರು ?

ಅಪ್ರಾಪ್ತ ದಲಿತ ಬಾಲಕಿಯ ಆತ್ಮಹತ್ಯೆಯೊಂದು ನಿನ್ನೆ ವಿಟ್ಲದಲ್ಲಿ ನಡೆದಿದ್ದು, ಈ ಘಟನೆಗೆ ಅನ್ಯಕೋಮಿನ ಯುವಕ ಕಾರಣ ಎಂದು ಪ್ರಾಥಮಿಕ ಹಂತದಲ್ಲಿ ಗೊತ್ತಾದರೂ, ಇಲ್ಲಿಯವರೆಗೆ ಯಾವುದೇ ರಾಜಕೀಯ ಧುರೀಣರು, ದಲಿತ ಸಮುದಾಯದ ಮುಖಂಡರು ಭೇಟಿ ನೀಡದಿರುವುದು ಆಶ್ಚರ್ಯಕರವಾಗಿದೆ. ಮುಸ್ಲಿಂ ಸಮುದಾಯದವರಿಗೆ ಏನಾದರೂ ಆದಾಗ, ಎಲ್ಲಿದ್ದರೂ ಓಡಿ ಬಂದು ನಾವು ನಿಮ್ಮ ಜೊತೆ ಇದ್ದೇವೆ ಎಂದು ಪ್ರತಿಭಟನೆ ಮಾಡುವ ರಾಜಕೀಯ ಧುರೀಣರು ಈಗ ಎಲ್ಲಿದ್ದಾರೆ? ನಿನ್ನೆಯಿಂದ ಇಲ್ಲಿಯವರೆಗೆ ಕೇವಲ ಹಿಂದೂ ಸಂಘಟನೆಯ ಕಾರ್ಯಕರ್ತರು ಮಾತ್ರ ಬಂದು ಆ ವಿದ್ಯಾರ್ಥಿನಿಯ ಹೆತ್ತವರಿಗೆ ಸಮಾಧಾನ ಮಾಡುತ್ತಾ, ಆರೋಪಿಯ ಪತ್ತೆ ಹಚ್ಚಲು ಪೊಲೀಸರಿಗೆ ಒತ್ತಡ ಹಾಕುತ್ತಿದ್ದಾರೆ.

ಅದೇ ಇವತ್ತು ಆರೋಪಿಯಾಗಿ ನಿಂತಿರುವ ಸ್ಥಾನದಲ್ಲಿ ಓರ್ವ ಹಿಂದೂ ಹುಡುಗ ಇದ್ದಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ಸರತಿ ಸಾಲುಗಳಲ್ಲಿ ನಿಂತು ಸೋ ಕಾಲ್ಡ್ ನಾಯಕರುಗಳು ಬಂದು ಆತ್ಮಿಕಾಲ ಮನೆಯ ಮುಂದೆ ಭಾಷಣ, ಫೋಟೋ ಸೆಷನ್, ಮೊಸಳೆ  ಕಣ್ಣೀರು ಹರಿಸಿ ಗೊಳೋ ಎಂದು ಗಂಡ ಸತ್ತ ಮುಂಡೆಯಂತೆ ಆಳುತ್ತಿದ್ದರು. ಇವತ್ತು ಅಂತಹ ಒಂದು ನರ ನಾಯಿ ಕೂಡಾ ಕಂಡು ಬರ್ತಾ ಇಲ್ಲ. ಯಾಕೆಂದ್ರೆ ಅಲ್ಲಿ ಆರೋಪಿತನಾಗಿರುವುದು ಮುಸ್ಲಿಂ ಹುಡುಗ ; ಅದು ಲವ್ ಜಿಹಾದ್ !

ಸದಾ ಮಾನವೀಯತೆ, ಮಾನವಹಕ್ಕು ಎಂತೆಲ್ಲ ಓಡಿಕೊಂಡು ಬರುವ ಇವರುಗಳು ಈಗ ಎಲ್ಲಿದ್ದಾರೆ ?  ಈ ಬಡ ಕುಟುಂಬದ ಹೆಣ್ಣುಮಗಳ ಜೀವದ ಬೆಲೆ ಇಲ್ಲವೆ ? ಅಥವಾ ಮುಸ್ಲಿಂ ಜನಾಂಗದ ಯುವಕ ಇದಕ್ಕೆ ಕಾರಣವೆಂದು ಸುಮ್ಮನಾಗಿದ್ದಾರೆಯೇ ? ಕೇವಲ ಮುಸ್ಲಿಂ ಸಮುದಾಯದ ರಕ್ಷಣೆ ಹೊತ್ತಿದ್ದಾರೆಯೇ ರಾಜಕೀಯ ಕುತಂತ್ರಿಗಳು ? ಅವರಿಗೆ ದಲಿತರಿಗೆ ನೋವಾದಾರೆ ಬೇಜಾರಾಗೊಡಿಲ್ಲ. ನೋವು ಕೊಟ್ಟವರು ಯಾರು ಎಂಬುದು ಮುಖ್ಯವಾಗುತ್ತದೆ.’ ನೋವು ಸಾರ್ವತ್ರಿಕ ‘ ಎಂಬ ಸತ್ಯವಾದ ಮಾತು ಯಾಕೆ ಇಂತಹ ಸಂದರ್ಭದಲ್ಲಿ ಇವರ ಗಣನೆಗೆ ಬರ್ತಿಲ್ಲ. ಹಿಂದೂ ಯಾ ಮುಸ್ಲಿಂ, ದಲಿತ ಯಾ ಬ್ರಾಹ್ಮಣ – ನೋವು ಎಲ್ಲರಿಗೂ ಸಮಾನ ಅಲ್ಲವೇ ? ಯಾಕೆ ಈ ಡಬಲ್ ಸ್ಟ್ಯಾಂಡರ್ಡ್ ?!

ಮುಸ್ಲಿಂಮರು ದೌರ್ಜನ್ಯ ಎಸೆದಾಗ ನೀವುಗಳು ಕಣ್ಣಿದ್ದೂ ಕುರುಡರಾಗುವುದು ನಿನ್ನೆ ಮೊನ್ನೆಯ ವಿಚಾರವಲ್ಲ. ನಿಮ್ಮದೆಲ್ಲ ನಕಲಿ ಹೋರಾಟತನವೇ? ಹೆಣ್ಣು ಮಗಳಿಗೆ ಏನಾದರೂ ಆದಾಗ ಅವರ ರಕ್ಷಣೆಗೆಂದು ಇರುವ ಸ್ತ್ರೀವಾದಿ ಹೋರಾಟಗಾರರು ನಿಮಗೂ ಇದು ಕಾಣಲಿಲ್ಲವೇ ? ಎಲ್ಲಿದ್ದೀರಿ ನೀವೆಲ್ಲಾ ? ಹಿಂದೂ ಯುವತಿಯ ಜೀವದ ಪರ ಹೋರಾಟ ಮಾಡುವ ನಿಮ್ಮ ಹಕ್ಕು ಇಲ್ಲಿಗೇ ಮುಗಿದು ಹೋಯಿತೇ ? ಮೊನ್ನೆ ಬೆಳ್ತಂಗಡಿಯ ದಲಿತ ವ್ಯಕ್ತಿಯ ವಿಷಯದಲ್ಲಿ ತೋರಿದ ಕಾಳಜಿ (?!) ಇಲ್ಲಿ ಮಾಯ. ಇವತ್ತಿನ ಆತ್ಮಿಕಳ ಥರಾನೇ, ಎರಡು ವಾರಗಳ ಹಿಂದೆ ದಲಿತ ಹುಡುಗ ರಾಜುವಿನ ಮರ್ಡರ್ ಆಗಿತ್ತು. ಅಲ್ಲಿ ಕೂಡಾ ಡೋಂಗಿ ಹೋರಾಟಗಾರರು ದಿವ್ಯ ಮೌನ ವಹಿಸಿದರು. ಕಾರಣ ಮುಸ್ಲಿಂ ಓಲೈಕೆ ಮತ್ತು ಅಲ್ಲಿ ದೊರೆಯಬಹುದಾದ ತುಂಡು ಮೂಳೆಯ ಬಿರಿಯಾನಿ!

ಇದನ್ನೆಲ್ಲಾ ನೋಡಿದಾಗ ಕಾಡುವ ಒಂದೇ ಪ್ರಶ್ನೆ ಎಂದರೆ ಯಾರದಾದರೂ ಒತ್ತಡಕ್ಕೆ ಇವರುಗಳು ಸಿಲುಕಿದ್ದಾರೆಯೇ ಎನ್ನುವುದು. ಯಾವ ರಾಜಕೀಯ ಪಕ್ಷ ಓರ್ವ ಹಿಂದೂ ಬಡ ಬಾಲಕಿಯ ಸಾವಿಗೆ ನ್ಯಾಯ ಒದಗಿಸುವುದಕ್ಕೆ  ಅಡ್ಡಿ ಪಡಿಸುತ್ತಿದೆ ಎನ್ನುವುದು.

ಘಟನೆ ವಿವರ : ವಿಟ್ಲದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯಾದ ಆತ್ಮೀಕಾ ( 14)  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆಯ ಆತ್ಮಹತ್ಯೆಗೆ ಅನ್ಯಕೋಮಿನ ಯುವಕನಾದ ಸಾಹುಲ್ ಹಮೀದ್ ಎಂಬಾತ ನೀಡಿದ ಮಾನಸಿಕ ಕಿರುಕುಳ ನೀಡಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ.

ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಎಂಬವರು  ಅನ್ಯಕೋಮಿನ ವ್ಯಕ್ತಿಯೊಬ್ಬರ ಮನೆಗೆ ಬಾಡಿಗೆಯಲ್ಲಿ ವಾಸವಿದ್ದು, ಅವರ ಅಪ್ರಾಪ್ತ ವಯಸ್ಸಿನ ಮಗಳು ಆತ್ಮಿಕಾಳ ಸಂಪರ್ಕ ಸಾಧಿಸಿದ ಸಾಹುಲ್ ಹಮೀದ್ ಎಂಬಾತ ಆಕೆಯನ್ನು ಪ್ರೀತಿಸುವಂತೆ ಪೀಡಿಸಿದ್ದ. ಆತನ ಒತ್ತಡಕ್ಕೆ ಸಿಲುಕಿ ಹುಡುಗಿ ಒದ್ದಾಡುತ್ತಿದ್ದಳು. ಅನ್ಯಕೋಮಿನ ಯುವಕ ಕಿರುಕುಳ ತಾಳಲಾರದೆ ಹುಡುಗಿ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯ ಮತ್ತು ಕುಟಂಬದ ದುರದೃಷ್ಟಕ್ಕೆ ಹುಡುಗಿ ಸತ್ತು ಹೋಗಿದ್ದಾಳೆ.
ಸಾಹುಲ್ ಹಮೀದ್ ನ ಮೇಲೆ FIR ದಾಖಲಾಗಿದ್ದು, ಇದುವರೆಗೆ ಆತನ ಸುಳಿವು ಲಭ್ಯವಾಗಿಲ್ಲ.

Leave A Reply