ರಾಜ್ಯಾದ್ಯಂತ 15 ದಿನ ಮದ್ಯ ವ್ಯಾಪಾರಿಗಳ ಮುಷ್ಕರ !! ಮದ್ಯ ಪ್ರಿಯರಲ್ಲಿ ತಳಮಳ !

ಮದ್ಯಪ್ರಿಯರೇ…ನಿಮಗೆ ಈ ನ್ಯೂಸ್ ಕೇಳಿ ಮನಸ್ಸು ತಳಮಳಗೊಂಡಿರಬಹುದು. ಆದರೆ ಈ ಮಾತು ನಿಜ. ಈ ವಿಷಯವನ್ನು ಸ್ವತಃ ಮದ್ಯಮಾರಾಟಗಾರರೇ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಇನ್ನು 15 ದಿನ ಮದ್ಯ ಸಿಗುವುದಿಲ್ಲ ಎಂಬ ವಿಷಯವನ್ನು ಅರಗಿಸಿಕೊಳ್ಳುವುದಕ್ಕೆ ಕಷ್ಟವಾದರೂ ಸಹಿಸಿಕೊಳ್ಳಿ. ಇದಕ್ಕೆ ಪರಿಹಾರ ಮುಖ್ಯಮಂತ್ರಿ, ಅಬಕಾರಿ ಸಚಿವರು ನೀಡುವವರೆಗೆ ಕಾಯಬೇಕು. ಎಲ್ಲೆಲ್ಲಿ ಮದ್ಯ ಲಭ್ಯವಿಲ್ಲ ಎನ್ನುವುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ನಾಳೆಯಿಂದ ಪ್ರಾರಂಭವಾಗಿ ಮೇ 19ರವರೆಗೆ ಮದ್ಯ ಮಾರಾಟಗಾರರ ಮುಷ್ಕರ ನಡೆಯಲಿದ್ದು, 15 ದಿನಗಳವರೆಗೆ ಮುಷ್ಕರ ನಡೆಸಲು ಮದ್ಯ ಮಾರಾಟಗಾರರು ನಿರ್ಧಾರ ಮಾಡಿದ್ದಾರೆ.

ಉಡುಪಿಯಲ್ಲಿ ಈ ಬಗ್ಗೆ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಪ್ರತಿಭಟನೆ ಘೋಷಣೆ ಮಾಡಿದ್ದಾರೆ. ಕೆಎಸ್ ಪಿಸಿಎಲ್ ಎಂಡಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ, ಅಬಕಾರಿ ಸಚಿವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದು ದಿನ ಮದ್ಯ ಖರೀದಿ ಮಾಡದಿದ್ದರೆ ರಾಜ್ಯದಲ್ಲಿ 70 ಕೋಟಿ ರೂಪಾಯಿ ನಷ್ಟ. ಹಾಗಾಗಿ ವಿಭಾಗಮಟ್ಟದಲ್ಲಿ ಮದ್ಯ ಖರೀದಿ ನಿಲ್ಲಿಸಲು ನಿರ್ಧಾರ ಮಾಡಲಾಗಿದೆ. ನಾಳೆ ಕಲಬುರಗಿ ವಿಭಾಗದಲ್ಲಿಯೂ ಮದ್ಯ ವ್ಯಾಪಾರಿಗಳಿಂದ ಮುಷ್ಕರ ಮಾಡಲಾಗುತ್ತಿದೆ. ಹೊಸಪೇಟೆ, ಬೆಳಗಾವಿ, ಮೈಸೂರು ಮಂಗಳೂರು ವಿಭಾಗದಲ್ಲಿ ಮದ್ಯ ಸಿಗಲ್ಲ. ಮೇ ತಿಂಗಳ 19ನೇ ತಾರೀಖಿನವರೆಗೆ ನಿರಂತರ ರಾಜ್ಯಾದ್ಯಂತ ಹೋರಾಟ ನಡೆಯಲಿದೆ.

ಮುಷ್ಕರ ದಿನಾಂಕ ಮತ್ತು ಸ್ಥಳ

ಮೇ 6ರಂದು ಗುಲ್ಬರ್ಗ ವಿಭಾಗದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ.

ಮೇ 10ರಂದು, ಹೊಸಪೇಟೆ ವಿಭಾಗದ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ ,ಬಿಜಾಪುರ, ಧಾರವಾಡ, ಹಾವೇರಿ.

ಮೇ 12ರಂದು, ಮೈಸೂರು ವಿಭಾಗದ ಜಿಲ್ಲೆಗಳಾದ ಮೈಸೂರು ,ಚಿಕ್ಕಮಗಳೂರು, ಹಾಸನ,ಮಂಡ್ಯ ಮತ್ತು ಮಂಗಳೂರು ವಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ,ಉಡುಪಿ, ಉತ್ತರಕನ್ನಡ.

ಮೇ 17ರಂದು- ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ,ತುಮಕೂರ್,

ಮೇ 19ರಂದು ಬೆಂಗಳೂರು ನಗರ ವಿಭಾಗದ ಕೆ ಎಸ್ ಬಿ ಸಿ ಎಲ್ ಡಿಪೋಗಳಲ್ಲಿ ಮದ್ಯ ಖರೀದಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

Leave A Reply

Your email address will not be published.