ಗಂಡಸರೇ ನಿಮಗೊಂದು ಮುಖ್ಯವಾದ ಮಾಹಿತಿ…ನೀವು ಈ ವಿಷಯಗಳನ್ನು ಪತ್ನಿಯಿಂದ ಮುಚ್ಚಿಡುವುದು ಒಳ್ಳೆಯದು !

ಈ ಜಗತ್ತಿನಲ್ಲಿ ಪ್ರತಿಯೊಂದು ಸಂಬಂಧವು ನಿಂತಿರುವುದೇ ಪ್ರೀತಿ ಮೇಲೆ. ಈ ದಾಂಪತ್ಯದಲ್ಲಂತೂ ಪ್ರೀತಿ ಜೊತೆಗೆ ವಿಶ್ವಾಸದ ಅಗತ್ಯ ಕೂಡಾ ಇರಬೇಕು. ಗಂಡ ಹೆಂಡತಿ ಮಧ್ಯೆ ಸಾಧಾರಣವಾಗಿ ಯಾವುದೇ ಗುಟ್ಟು ಇರುವುದಿಲ್ಲ. ಕೆಲವರು ಹಾಗೆ ಗುಟ್ಟು ಇಟ್ಟುಕೊಳ್ಳಬಾರದು ಅಂತಾರೆ. ಆದರೂ ಗಂಡಸರು ಕೆಲವೊಂದು ವಿಷಯವನ್ನು ತಮ್ಮ ಹೆಂಡತಿಯರ ಮುಂದೆ ಹೇಳಬಾರದ ವಿಷಯಗಳಿವೆ. ಅವು ಯಾವುದು ಎಂದು ನಾವಿಲ್ಲಿ ಹೇಳ್ತೀವಿ.

ಮದುವೆಯಾದ ಹೊಸದರಲ್ಲಿ ಎಲ್ಲರೂ ಸಾಮಾನ್ಯವಾಗಿ ಎಲ್ಲಾ ವಿಷಯವನ್ನೂ ಅದು ಗುಟ್ಟಿನ ವಿಷಯ ಆಗಿದ್ದರೂ ಹೇಳ್ತಾರೆ. ಆದರೆ ಕೆಲವೊಂದು ವಿಷ್ಯಗಳು ನಿಮ್ಮ ಸಂಗಾತಿಗೆ ಇಷ್ಟವಾಗದೇ ಇರಬಹುದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅಂತಹ ಕೆಲವು ಅಂಶಗಳು ಯಾವುದು ತಿಳಿಯೋಣ. ಅಲ್ಲದೆ ಯಾವ ಗುಟ್ಟು ಹೇಳಿಕೊಳ್ಳುವ ಮುನ್ನ, ಆ ಗುಟ್ಟನ್ನು, ಎದುರಿನ ಪಾರ್ಟನರ್ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎನ್ನುವುದು ಮುಖ್ಯ. ಕೇಳಲು ಜನ ಸಿಕ್ರು ಅಂತ ಬಡ ಬಡ ಹೇಳಿಕೊಂಡರೆ ಕಥೆ ಮುಗಿದಂತೆಯೇ.! ಯಾಕೆಂದ್ರೆ ಗಂಡಂದಿರೇ, ನೀವೇನೋ ಬಹಳ ಓಪನ್ ಅಂತ, ಬೋಲ್ಡ್ ಅಂತ ಮತ್ತು ಒಳ್ಳೆಯವನು ಎಂದು ತೋರಿಸಿಕೊಳ್ಳುವ ಹುನ್ನಾರದಲ್ಲಿ ಎಲ್ಲಾ ಬಿಚ್ಚಿಟ್ಟರೆ ಸಮಸ್ಯೆ ಗ್ಯಾರಂಟಿ. ಗುಟ್ಟು ಒದರಿಬಿಡುವ ಮುನ್ನ ಸಂಗಾತಿ ಅದನ್ನು ಹೇಗೆ ರಿಸೀವ್ ಮಾಡಬಹುದು ಎಂಬ ಅಧ್ಯಯನ ಅಗತ್ಯ. ಅದಕ್ಕೆ ಸಮಯ ಬೇಕಾಗುತ್ತದೆ. ಮದುವೆ ಆಗಿ, ಫಸ್ಟ್ ನೈಟ್ ನ ಸಂದರ್ಭ ಆಕೆಯ ಮುಂದೆ ಎಲ್ಲ ಗುಟ್ಟು ಉದುರಿಸಿ ಸಂಬಂಧಗಳಲ್ಲಿ ಒಡಕು ತಂದುಕೊಳಬೇಡಿ.ನಿಧಾನಕ್ಕೆ ಯೋಚಿಸಿ ಮುನ್ನಡೆಯಿರಿ.


Ad Widget

Ad Widget

Ad Widget

ತಪ್ಪಿಯೂ ಹೆಂಡತಿ ಮುಂದೆ ಪರ ಸ್ತ್ರೀಯನ್ನು ಹೊಗಳದಿರಿ. ಸಾಮಾನ್ಯವಾಗಿ ಯಾರಾದರೂ ಸುಂದರವಾಗಿರುವವರು ಅಥವಾ ಚೆನ್ನಾಗಿ ಕಾಣಿಸುವವರನ್ನು ನೋಡಿದರೆ ಅವರು ಬಹಳ ಚೆನ್ನಾಗಿ ಕಾಣಿಸ್ತಿದ್ದಾರೆ ಎಂದು ಹೋಗಳುವುದು ಸಾಮಾನ್ಯ ಅಭ್ಯಾಸ. ಮನಸ್ಸಿನಲ್ಲಿ ಯಾವುದೇ ಕೆಟ್ಟ ಭಾವನೆ ಇಟ್ಟುಕೊಳ್ಳದೆ ಅವರನ್ನು ಹೊಗಳಿದ್ದರೂ ಅದು ನಿಮ್ಮ ಹೆಂಡತಿಯ ದೃಷ್ಠಿಯಲ್ಲಿ ತಪ್ಪಾಗಿಯೇ ಕಾಣಿಸುತ್ತದೆ.

ಹೆಂಡತಿಯರು ಗಂಡ ತನ್ನನ್ನು ಬಿಟ್ಟು ಬೇರೆ ಯಾವುದೇ ಹುಡುಗಿಯ ಹೊಗಳಿಕೆಯನ್ನೂ ಕೇಳಲಾರಳು. ಆಕೆ ತಕ್ಷಣ ನಿಮಗೆ ಏನೂ ಹೇಳದೇ ಇರಬಹುದು. ಈ ಒಂದು ಮಾತು ಅನುಮಾನಗಳನ್ನು ಹುಟ್ಟು ಹಾಕಬಹುದು. ಹಾಗಾಗಿ ತಪ್ಪಿಯೂ ಇತರ ಹುಡುಗಿಯರನ್ನು ಹೊಗಳದಿರುವುದು ಉತ್ತಮ.

ನಿಮ್ಮ ಹಳೆ ಪ್ರೇಯಸಿ ಬಗ್ಗೆ ಹೆಂಡತಿಗೆ ತಿಳಿಸಿ, ಆದರೆ ಅದರ ಬಗ್ಗೆ ಮತ್ತೆ ಮತ್ತೆ ಚರ್ಚಿಸಬೇಡಿ. ನೀವು ಪದೇ ಪದೇ ನಿಮ್ಮ ಹಳೆ ಗೆಳತಿಯ ಬಗ್ಗೆ ಮಾತನಾಡಿದರೆ ಸಂಬಂಧ ಒಳ್ಳೆಯ ರೀತಿಯಲ್ಲಿ ಇರೋಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ನೀವು ನಿಮ್ಮ ಹೆಂಡತಿಯಿಂದ ಕೆಲವೊಂದು ವಿಷಯಗಳನ್ನು ಮರೆಮಾಚಬೇಕಾಗುತ್ತದೆ. ಅಂದರೆ ಕೆಲವೊಂದು ವಿಷಯಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳುವುದು ಸೂಕ್ತ.

ಕೆಲವು ಗಂಡಂದಿರು ಮದುವೆಯಾದ ನಂತರ ಸ್ಟೈಲ್ ಮಾಡಬೇಕು ಎಂಬುದರ ಕುರಿತು ಜ್ಞಾನವನ್ನು ನೀಡಲು ಪ್ರಾರಂಭಿಸುತ್ತಾರೆ. ಅದು ನಿಮ್ಮ ಹೆಂಡತಿಗೆ ಇಷ್ಟವಾಗದೇ ಇರಬಹುದು. ನೀವು ಹೆಂಡತಿಯ ಉಡುಗೆಯನ್ನು ಇಷ್ಟಪಡದಿದ್ದರೂ ಸಹ, ಅವರನ್ನು ನಿಂದಿಸಬೇಡಿ. ಆಕೆಯ ಡ್ರೆಸಿಂಗ್ ಸೆನ್ಸ್ ಬಗ್ಗೆ ತಪ್ಪಾಗಿ ಮಾತನಾಡಬೇಡಿ, ಬದಲಿಗೆ ಹೊಗಳಿಕೆಯ ಮಾತುಗಳನ್ನು ಹೇಳಿ, ಗಂಡಂದಿರು ಹೊಗಳಿದರೆ ಹೆಂಡತಿಗೆ ತುಂಬಾನೇ ಸಂತೋಷವಾಗುತ್ತದೆ. ಕೆಲವೊಮ್ಮೆ ಹೆಂಡತಿಯ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಸರಿಯಾದ ಅಭಿಪ್ರಾಯವನ್ನು ನೀಡಲು ನೀವು ಯೋಚಿಸುತ್ತಿರಬಹುದು, ಆದರೆ ಅವರು ಅದನ್ನು ನಕಾರಾತ್ಮಕ ರೀತಿಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಯಾರನ್ನಾದರೂ ಯಾರಿಗಾದರೂ ಹೋಲಿಸುವುದು ತಪ್ಪು. ಅದಲ್ಲೂ ನೀವು ನಿಮ್ಮ ಹೆಂಡತಿಯನ್ನು ಇತರರಿಗೆ ಹೋಲಿಸಿ ಹೀಯಾಳಿಸುವುದು ತಪ್ಪು. ಅನೇಕ ಬಾರಿ ಗಂಡ ತನ್ನ ಮನಸ್ಸಿನ ಪ್ರತಿಯೊಂದು ವಿಷಯವನ್ನು ಹೆಂಡತಿಯ ಮುಂದೆ ತಕ್ಷಣವೇ ಹೇಳುತ್ತಾನೆ. ಆದರೆ ಅವರಿಗಿಂತ ಚೆನ್ನಾಗಿ ಕಾಣುವ ಹುಡುಗಿ ಇನ್ನೊಬ್ಬಳಿದ್ದಾಳೆ ಎಂದು ಹೇಳಿದಾಗ ಅವರಿಗೂ ಅಸೂಯೆ ಮತ್ತು ಕೋಪ ಬರುವುದು ಖಂಡಿತ.

ಇಂದಿನ ಮಹಿಳೆಯರು ಸ್ವತಂತ್ರರಾಗಿರಬೇಕೆಂದು ಬಯಸುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ, ತಮ್ಮ ಹೆಂಡತಿಯನ್ನು ಬೇರೆ ಯಾವುದೇ ಮಹಿಳೆಗೆ ಹೋಲಿಸುವುದು ಅವರಿಗೆ ನೋವು ಕೊಡುತ್ತದೆ. ಈ ರೀತಿ ಮಾಡಿದರೆ ಅದು ನಿಮ್ಮ ಸಂಬಂಧದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದು ಆಕೆ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಬಹುದು. ಅಲ್ಲದೆ ನಿಮ್ಮ ವೈವಾಹಿಕ ಸಂಬಂಧದ ಬಗ್ಗೆ ತಪ್ಪು ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಬಹುದು.

ಹಾಗಾಗಿ ಗಂಡಂದಿರೇ ನೀವು ನೀವಾಗಿರಿ, ನಿಮ್ಮ‌ ಹೆಂಡತಿಯನ್ನು ಅವಳ ರೀತಿಯಲ್ಲೇ ಇರೋಕೆ ಬಿಡಿ. ಅಭಿಪ್ರಾಯದ ಒತ್ತಡ ಹೇರಿಸಲು ಹೋಗಬೇಡಿ. ತುಂಬಾ ಪ್ರೀತಿ ಮಾಡಿ…ಬಾಂಧವ್ಯ ಚೆನ್ನಾಗಿರುತ್ತದೆ.

Leave a Reply

error: Content is protected !!
Scroll to Top
%d bloggers like this: