ರಾಜ್ಯದಲ್ಲಿ ಹೋಮ್ ವರ್ಕ್ ಗೆ ಬೀಳಲಿದೆ ಬ್ರೇಕ್..! ನಲಿ-ಕಲಿ ರೀತಿ ಮಾತ್ರ ಶಿಕ್ಷಣ..!

ಮಕ್ಕಳಿಗೆ ಶಾಲೆಯಲ್ಲಿ ಹೋಮ್ ವರ್ಕ್ ಹೊರೆ ತಗ್ಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹಾಗಾಗಿ ರಾಜ್ಯದಲ್ಲಿ ಹೋಮ್ ವರ್ಕ್ ಗೆ ಆದಷ್ಟು ಬೇಗ ಬ್ರೇಕ್ ಬೀಳಲಿದೆ. ಇನ್ಮುಂದೆ ಶಿಕ್ಷಕರು ಎರಡನೇ ತರಗತಿವರೆಗೆ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ. ಸರ್ಕಾರಿ ಶಾಲೆಗಳಿಗೆ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಲಿದ್ದು, ನಲಿ-ಕಲಿ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ.

ಸರ್ಕಾರಿ ಶಾಲೆ ರೀತಿ ಖಾಸಗಿ ಶಾಲೆಗೂ ಈ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದೆ. ಮದ್ರಾಸ್ ಹೈಕೋರ್ಟ್ ಹಾಗೂ ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆ ರಾಜ್ಯದಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.

ಎನ್ ಇ ಪಿ ಶಿಕ್ಷಣ ಕ್ರಮದ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ. ಆದರೆ ಖಾಸಗಿ ಶಾಲೆಯಲ್ಲಿ ಅತಿ ಹೆಚ್ಚು ಹೋಂ ವರ್ಕ್ ನೀಡುವುದರಿಂದ, ಮಕ್ಕಳಿಗೆ ಒತ್ತಡ ಹೆಚ್ಚಾಗುತ್ತೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ನೀಡುವುದು ಬೇಡ, ಆಟವಾಡುತ್ತ ಸಮಾಜದೊಂದಿಗೆ ಬೆರೆಯಲಿ. ಇಂಥ ವಯಸ್ಸಿನಲ್ಲಿ ಕನಿಷ್ಟ 2ನೇ ತರಗತಿವರೆಗೆ ಹೋಂ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಒಲವು ತೋರಿದೆ

Leave A Reply

Your email address will not be published.