ವಿಟ್ಲದ ಹುಡುಗಿ, ಕಣಿಯೂರಿನ ಹುಡುಗ : SSLC ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ಅನ್ಯಕೋಮಿನ ವ್ಯಕ್ತಿಯ ಮನೆಗೆ ಬಾಡಿಗೆಗೆ ಹೋದದ್ದೇ ಮುಳುವಾಯಿತೇ ?
ವಿಟ್ಲ: ವಿಟ್ಲದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಬಿಗ್ ಟ್ವಿಸ್ಟ್ ದೊರಕಿದೆ. ಮೂಲತಃ ಪಂಜ ನಿವಾಸಿ ಸಂಜೀವ ಅವರ ಪುತ್ರಿ ಆತ್ಮೀಕಾ(14) ನೇಣಿಗೆ ಕೊರಳು ಒಡ್ಡಿದ ವಿದ್ಯಾರ್ಥಿನಿ. ಈ ವಿದ್ಯಾರ್ಥಿನಿಗೆ ಮುಸ್ಲಿಂ ಯುವಕನೋರ್ವ ಪ್ರೀತಿ ಮಾಡುವಂತೆ ಒತ್ತಡ ಹೇರಿ, ಅದೇ ಒತ್ತಡದಲ್ಲಿ ಆಕೆ ತನ್ನನ್ನು ತಾನು ಕೊಂದು ಕೊಂಡ ಆರೋಪ ಇದೀಗ ಕೇಳಿಬಂದಿದೆ.
ಸಾಹುಲ್ ಹಮೀದ್ ಎಂಬಾತ ವಿದ್ಯಾರ್ಥಿನಿಯ ಜೊತೆಗೆ ಪ್ರೇಮ ಮಾಡುವಂತೆ ಒತ್ತಾಯಿಸಿದ್ದಾನೆ. ನಂತರ ಮಾನಸಿಕ ಹಿಂಸೆ ನೀಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂಬುದೂ ಪ್ರಾಥಮಿಕ ಮೂಲಗಳಿಂದ ಸ್ಪಷ್ಟವಾಗುತ್ತಿದೆ.
ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಎಂಬವರು ಅನ್ಯಕೋಮಿನ ವ್ಯಕ್ತಿಯೊಬ್ಬರ ಮನೆಗೆ ಬಾಡಿಗೆಗೆ ಹೋಗಿದ್ದರು. ಅಲ್ಲಿ ವಾಸ ಇರುವಾಗ, ಅವರ ಅಪ್ರಾಪ್ತ ವಯಸ್ಸಿನ ಮಗಳು ಆತ್ಮಿಕಾಳ ಸಂಪರ್ಕ ಸಾಧಿಸಿದ ಸಾಹುಲ್ ಹಮೀದ್ ಎಂಬಾತ ಆಕೆಯನ್ನು ಪ್ರೀತಿಸುವಂತೆ ಪೀಡಿಸಿದ್ದ. ಆತನ ಒತ್ತಡಕ್ಕೆ ಸಿಲುಕಿ ಹುಡುಗಿ ಒದ್ದಾಡುತ್ತಿದ್ದಳು. ಇದೀಗ ಆತನ ಕಿರುಕುಳ ತಾಳಲಾರದೆ ಹುಡುಗಿ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯ ಮತ್ತು ಕುಟುಂಬದ ದುರದೃಷ್ಟಕ್ಕೆ ಹುಡುಗಿ ಸತ್ತು ಹೋಗಿದ್ದಾಳೆ.
ಇದೀಗ ಬಂದ ಮಾಹಿತಿಯ ಪ್ರಕಾರ ಹುಡುಗ ಕಣಿಯೂರಿನವನಾಗಿದ್ದು, ಆಕೆಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಸಾಹುಲ್ ಹಮೀದ್ ನ ಮೇಲೆ FIR ದಾಖಲಾಗಿದ್ದು, ಇದುವರೆಗೆ ಆತನ ಸುಳಿವು ಲಭ್ಯವಾಗಿಲ್ಲ.
ಈಗ ಲವ್ ಜಿಹಾದ್ ಎಂಬ ಆರೋಪಿಸಿ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಹಿಂಪ ಬಜರಂಗದಳ ವಿಟ್ಲ ಒತ್ತಾಯಿಸಿ ವಿಟ್ಲ ಠಾಣಾ ಇನ್ಸ್‌ಪೆಕ್ಟರ್ ಹೆಚ್ ಇ ನಾಗರಾಜ್ ಅವರಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಮುಖರಾದ ಚಂದ್ರಹಾಸ ಕನ್ಯಾನ, ಯತೀಶ್ ಪೆರುವಾಯಿ ಸೇರಿದಂತೆ ಮೊದಲಾದವರು ಇದ್ದರು.