” ನನ್ನ ಕನ್ಯತ್ವವನ್ನು ಮಾರಾಟ ಮಾಡಿ, ಸೋನಾಕ್ಷಿ ಸಿನ್ಹಾರನ್ನು ನಟಿ ಮಾಡಿದರು” – ಬಿಗ್ ಬಾಸ್ ಖ್ಯಾತಿಯ ನಟಿಯಿಂದ ಆರೋಪ

Share the Article

ಬಿಗ್‌ಬಾಸ್ ಖ್ಯಾತಿಯ ನಟಿ, ಟಿವಿ ನಿರೂಪಕಿ ಹಾಗೂ ರೂಪದರ್ಶಿ ಪೂಜಾ ಮಿಶ್ರಾ ಅವರು ಹಿರಿಯ ನಟ ಹಾಗೂ ಹಾಲಿ ಸಂಸದ ಶತ್ರುಘ್ನಾ ಸಿನ್ಹಾ ಹಾಗೂ ಅವರ ಪತ್ನಿ ಪೂನಂ ಸಿನ್ಹಾ ಮೇಲೆ ‘ಲೈಂಗಿಕ ಹಗರಣ’ ಹಾಗೂ ಮಾಟ ನಡೆಸಿದ ಗಂಭೀರ ಆರೋಪ ಮಾಡಿದ್ದಾರೆ.

“ಶತ್ರುಘ್ನಾ ಸಿನ್ಹಾ ನನ್ನನ್ನು ಲೈಂಗಿಕ ಹಗರಣ ದಂಧೆಗೆ ನೂಕಿದ್ದರು ಹಾಗೂ ನನ್ನ ಕನ್ಯತ್ವವನ್ನು ಮಾರಾಟ ಮಾಡಿ ಅವರ ಪುತ್ರಿ ಸೋನಾಕ್ಷಿ ಸಿನ್ಹಾರನ್ನು ಸ್ಟಾರ್ ಮಾಡಿದರು” ಎಂದು ನವಭಾರತ್ ಟೈಮ್ಸ್ ಜತೆ ಮಾತನಾಡಿದ ಪೂಜಾ ಮಿಶ್ರಾ ಆರೋಪಿಸಿದ್ದಾರೆ. ಇದಕ್ಕೆ ಪೂನಂ ಸಿನ್ಹಾ ಅವರ ಸಹಕಾರವೂ ಇತ್ತೆಂದು ಪೂಜಾ ಹೇಳಿದ್ದಾರೆ.

ಶತ್ರುಘ್ನ ಸಿನ್ಹಾ ಹಾಗೂ ಪೂಜಾ ತಂದೆ ಒಂದು ಕಾಲದಲ್ಲಿ ಬಹಳ ಒಳ್ಳೆ ಸ್ನೇಹಿತರಾಗಿದ್ದರಂತೆ. ಆಗ ಪೂನಂ ಸಿನ್ಹಾ ತಮ್ಮ ತಂದೆಗೆ ‘ವೇಶ್ಯೆಯರು ಮಾತ್ರ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಾರೆ’ ಎಂದು ಹೇಳಿ ತಲೆ ತುಂಬಿಸಿದ್ದರು. ಹೀಗಾಗಿ ಚಿತ್ರರಂಗಕ್ಕೆ ಬರುವ ಅವಕಾಶ ತಪ್ಪಿಹೋಯಿತು ಎಂದು ಹೇಳಿದ್ದಾರೆ.

2005ರಲ್ಲಿ ನಿವೃತ್ತರಾದ ಪೂಜಾ ಮಿಶ್ರಾ ತಂದೆ ನಂತರ ಪುಣೆಗೆ ಹೋದ ನಂತರ, ಸೋನಾಕ್ಷಿ ಸಿನ್ಹಾ ಅವರ ಪೋಷಕರು ಮುಂಬೈನಲ್ಲಿ ತಮಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೇ ತಮ್ಮ35 ಚಿತ್ರಗಳ ಆಫರ್‌ಗಳನ್ನು ನನ್ನಿಂದ ಕಿತ್ತುಕೊಂಡರು ಎಂದು ಆರೋಪಿಸಿರುವ ಪೂಜಾ,”ನಾನು ಅವರಿಗಿಂತ ದೊಡ್ಡ ಸ್ಟಾರ್ ಆಗುತ್ತೇನೆ ಎಂಬ ಭಯದಲ್ಲಿ ಇದ್ದರು ಶತ್ರುಘ್ನ ಸಿನ್ಹಾ’ ಎಂಬ ಮಾತನ್ನು ಕೂಡಾ ಹೇಳಿದ್ದಾರೆ.

“ಸಿನ್ಹಾ ಕುಟುಂಬವು ದುರಾಸೆ ವ್ಯಕ್ತಿತ್ವ ಉಳ್ಳವರಾಗಿದ್ದು, ನನ್ನ ಪ್ರಾಯೋಜಕರನ್ನು ನಮ್ಮಮನೆಗೆ ನುಗ್ಗಿ ತಮ್ಮೆಡೆಗೆ ಸೆಳೆದುಕೊಳ್ಳುತ್ತಿದ್ದರು. ಒಮ್ಮೆ ಶತ್ರುಘ್ನ ಸಿನ್ಹಾ ಹುಟ್ಟುಹಬ್ಬಕ್ಕೆ ನಾನು ಕ್ಯಾಂಡಲ್ ತೆಗೆದುಕೊಂದು ಹೋಗಿದ್ದಾಗ ಪೂನಂ ಸಿನ್ಹಾ ಏನನ್ನೋ ತಿನ್ನಿಸಿ ನನ್ನ ಮೇಲೆ ಮಾಟ ಮಾಡಿಸಿದರು. 2007ರಿಂದ 2014ರವರೆಗೆ ಲೋಖಂಡವಾಲಾದಲ್ಲಿ ನಾನು ವಾಸವಿದ್ದೆ. ಆಗ ನನ್ನ ಮನೆಯ ಮೇಲೆಯೇ ಸಿನ್ಹಾ ಕುಟುಂಬ ವಾಸವಿತ್ತು. ನಾನು ಸಿಂಗಾಪುರದಿಂದ ಶಾಪಿಂಗ್ ಮುಗಿಸಿ ಬರುವಾಗ ಇವರು ಮನೆಯಿಂದ ವಸ್ತುಗಳನ್ನು ಕದಿಯುತ್ತಿದ್ದರು’ ಎಂಬ ಆರೋಪ ಮಾಡಿದ್ದಾರೆ ಪೂಜಾ ಮಿಶ್ರಾ.

ಪೂಜಾ ಮಿಶ್ರಾ ಇನ್ನೂ ಮುಂದುವರಿದು “ಶತ್ರುಘ್ನ ಸಿನ್ಹಾ ನನ್ನ ಕನ್ಯತ್ವ ಮಾರಿ ಮಗಳು ಸೋನಾಕ್ಷಿ ಸಿನ್ಹಾರನ್ನು ಸ್ಟಾರ್ ಮಾಡಿದರು. ಶತ್ರುಘ್ನಾ ಸಿನ್ಹಾರಿಂದಾಗಿಯೇ ನಾನು ಮದುವೆಯಾಗಲಿಲ್ಲ. ಅನೇಕ ಬಾರಿ ಮಾದಕ ದ್ರವ್ಯವನ್ನು ತಿನ್ನಿಸಿ ಅವರು ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನನ್ನ ಹಾಳಾದ ವೃತ್ತಿ ಜೀವನಕ್ಕೆ ಯಾರನ್ನಾದರೂ ದೂಷಿಸುವುದಾದರೆ ಅದು ಶತ್ರುಘ್ನ ಸಿನ್ಹಾರನ್ನು ಮಾತ್ರ. 17 ವರ್ಷ ಈ ಎಲ್ಲದರಿಂದ ಕಷ್ಟಪಟ್ಟಿದ್ದೇನೆ” ಎಂದಿದ್ದಾರೆ ಪೂಜಾ ಮಿಶ್ರಾ.

ಈ ಹಿಂದೆ ಪೂಜಾ ಮಿಶ್ರಾ ಸಲ್ಮಾನ್ ಖಾನ್ ಮತ್ತು ಅವರ ಸಹೋದರರಾದ ಸೊಹೈಲ್ ಖಾನ್ ಹಾಗೂ ಅರ್ಬಾಜ್ ಖಾನ್ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರು.

Leave A Reply

Your email address will not be published.