ಮೊಬೈಲ್ ನಲ್ಲಿ ನಿರಂತರವಾಗಿ ಗೇಮ್ ಆಟದಿಂದ ಬ್ಯಾಟರಿ ಸ್ಫೋಟ : ಬಾಲಕನೋರ್ವನ ಎರಡು ಕೈ ಬೆರಳು ಕಟ್

Share the Article

ಮಕ್ಕಳು ಈ ರಜಾ ಸಮಯದಲ್ಲಿ ಕಾಲಕಳೆಯಲು ಮೊದಲು ಹುಡುಕುವುದೇ ಮೊಬೈಲನ್ನು. ಮೊಬೈಲ್ ನಲ್ಲಿ ಮುಳುಗಿದರೆ ಬೇರೆ ಏನೂ ಕಾಣುವುದಿಲ್ಲ, ಗೊತ್ತಾಗುವುದಿಲ್ಲ. ಪೋಷಕರು ಕೂಡಾ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರ ಪಾಡಿಗೆ ಅವರು ಕೆಲಸ ಮಾಡಿಕೊಂಡು ಇರುತ್ತಾರೆ. ಈ ಮೊಬೈಲ್ ಆಟ ಬಾಲಕನ ಕೈ ಬೆರಳು ತುಂಡಾಗಲು ಕಾರಣವಾಗಿದೆ ಎಂದರೆ ನಂಬುತ್ತೀರಾ? ಹೌದು. ನಿಜ.

ಹೆಚ್ಚಿದ ಬಿಸಿಲಿನ ತಾಪದಿಂದಾಗಿ, ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಬಾಲಕನೋರ್ವನ ಎರಡು ಕೈ ಬೆರಳು ತುಂಡಾಗಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಇಷ್ಟು ಮಾತ್ರವಲ್ಲದೇ, ಬ್ಯಾಟರಿ ಸ್ಫೋಟದ ಸದ್ದು ಕೇಳಿಯೇ ಅಕ್ಕ ಪಕ್ಕದ ಮನೆಯವರು ಬೆಚ್ಚಿಬಿದ್ದಿದ್ದಾರೆ.

9 ವರ್ಷದ ಬಾಲಕ ಮೊಬೈಲ್‌ನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕೈಯಲ್ಲಿಯೇ ಮೊಬೈಲ್ ಬ್ಯಾಟರಿ ಸ್ಫೋಟಗೊಂಡಿದೆ. ಇದು ಸ್ಫೋಟಗೊಂಡ ತೀವ್ರತೆಗೆ ಬಲಗೈ ಛಿದ್ರವಾಗಿದೆ. ಎರಡು ಬೆರಳುಗಳಿಗೆ ತೀವ್ರವಾದ ಗಾಯವಾಗಿ ತುಂಡಾಗಿದೆ. ಜೊತೆಗೆ ದೇಹದ ಇತರ ಭಾಗಗಳಿಗೂ ಗಾಯಗಳಾಗಿವೆ.

ಈ ಘಟನೆ ವೇಳೆ ಪೋಷಕರು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದರು. ಸ್ಫೋಟದ ಸದ್ದು ಕೇಳಿದ ಅಕ್ಕ ಪಕ್ಕದವರು ದೌಡಾಯಿಸಿ ಗಾಯಗೊಂಡ ಬಾಲಕವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply

Your email address will not be published.