ತಾಯಿಯ ಬಳಿ ಕೀ ಇಸ್ಕೊಂಡು ತಾನೇ ಕಾರು ಚಲಾಯಿಸಿದ ನಾಲ್ಕರ ಪೋರ !! ಮತ್ತೇನಾಯ್ತು !??
ಮಕ್ಕಳು ತಂಟೆ ಮಾಡುವುದು ಸಹಜ. ಆದರೆ ಇಷ್ಟೊಂದು ದೊಡ್ಡ ಫಜೀತಿ ಮಾಡಿದರೆ ಹೇಗೆ ?? ಇಲ್ಲೊಬ್ಬ ನಾಲ್ಕು ವರ್ಷದ ಬಾಲಕ ತನ್ನ ತಂದೆ ಕೆಲಸಕ್ಕೆ ಹೋದ ನಂತರ ತಾಯಿಯ ಕಾರನ್ನು ಚಲಾಸಿಕೊಂಡು ಹೋಗಿ ಅಪಘಾತಕ್ಕೀಡಾಗಿರುವ ಆಘಾತಕಾರಿ ಘಟನೆ ನೆದರ್ಲ್ಯಾಂಡ್ಸ್‌ನ ಉಟ್ರೆಕ್ಟ್ ರಸ್ತೆಯಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಬಾಲಕ ಬೆಳಗ್ಗೆ ತನ್ನ ತಾಯಿಯಿಂದ ಕಾರಿನ ಕೀ ತೆಗೆದುಕೊಂಡು ಉಟ್ರೆಕ್ಟ್ ಬೀದಿಯಲ್ಲಿ ಚಾಲನೆ ಮಾಡಿದ್ದಾನೆ. ಬಾಲಕನ ಕಾರು ರಸ್ತೆ ಬದಿ ನಿಂತಿದ್ದ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ನಂತರ ಕಾರನ್ನು ಅಲ್ಲೆ ಬಿಟ್ಟು ಹೋಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪೈಜಾಮಾ ಮತ್ತು ಬರಿ ಪಾದಗಳಲ್ಲಿ ಬೀದಿಯಲ್ಲಿ ಅಲೆದಾಡುತ್ತಿದ್ದ ಬಾಲಕನನ್ನು ನೋಡಿದ ಸಾರ್ವಜನಿಕರು ತಕ್ಷಣ ತುರ್ತು ಸೇವೆಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಗಸ್ತು ತಂಡವು ಅಪಘಾತಕ್ಕೀಡಾಗಿದ್ದ ಕಾರನ್ನು ಪತ್ತೆ ಹಚ್ಚಿ, ಆ ಕಾರಿನ ಮಾಲೀಕರಿಗೆ ಕರೆ ಮಾಡಿದ್ದಾರೆ. ನಂತರ ಬಾಲಕನ ತಾಯಿ ಬಂದು ಮಗುವನ್ನು ಕರೆದುಕೊಂಡು ಹೋಗಿದ್ದಾರೆ.
ಪೋಷಕರು ಮನೆಗೆ ಕರೆದೊಯ್ಯುವ ಮುನ್ನ ಬಾಲಕ ಕಾರ್ ಹೇಗೆ ಕೆಲಸ ಮಾಡಿತು ಎಂಬುದನ್ನು ಪೊಲೀಸರ ಮುಂದೆ ಪ್ರದರ್ಶಿಸಿದ್ದಾನೆ ಎಂದು ವರದಿಯಾಗಿದೆ. ಈಗಿನ ಕಾಲದಲ್ಲಿ ಮಕ್ಕಳನ್ನು ಎಷ್ಟು ಜಾಗರೂಕವಾಗಿ ನೋಡಿಕೊಂಡರೆ ಸಾಕಾಗುವುದಿಲ್ಲ. ಪೋಷಕರು ತಮ್ಮಷ್ಟಕ್ಕೆ ಇದ್ದರೆ ಮಕ್ಕಳು ಈ ರೀತಿಯ ಅನಾಹುತಗಳಿಗೆ ಸಾಕ್ಷಿಯಾಗಬೇಕಾದೀತು. ಆದ್ದರಿಂದ ಮಕ್ಕಳ ಮೇಲೆ ಹೆಚ್ಚಿನ ಜಾಗ್ರತೆ ವಹಿಸುವುದು ಅವಶ್ಯಕ.