‘ಋತುಚಕ್ರ’ ಬೇಗ ಆಗಬೇಕಾ ? ಹಾಗಾದರೆ ಈ 5 ಪಾನೀಯಗಳನ್ನು ಸೇವಿಸಿ!
‘ಮುಟ್ಟು’ ಎನ್ನುವುದು ಎಲ್ಲಾ ಹೆಣ್ಣು ಮಕ್ಕಳ ಬಾಳಲ್ಲಿ ನಡೆಯುವಂತಹ ಕ್ರಿಯೆ. ದೇಹದಲ್ಲಿ ಆಗುವ ಕೆಲವೊಂದು ಬದಲಾವಣೆಗಳು ಹೆಣ್ಣು ಮಕ್ಕಳ ಈ ಮುಟ್ಟಿನ ಕ್ರಿಯೆಯ ಮೇಲೆ ಪರಿಣಾಮ ಬೀಳುತ್ತದೆ. ಇವತ್ತು ನಾವು ಈ ಮುಟ್ಟು ಬೇಗ ಆಗಲು ಸುಲಭ ಮತ್ತು ಸ್ವಾಭಾವಿಕ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ವೈದ್ಯರ ಪ್ರಕಾರ, ಮಹಿಳೆಯು 28 ದಿನಗಳಿಗೊಮ್ಮೆ ಋತುಚಕ್ರವಾಗುವುದು ಆರೋಗ್ಯಕರ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಕಾಲುಗಳಲ್ಲಿ ಸೆಳೆತ, ಸೊಂಟ ಮತ್ತು ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತವೆ. ಸಾಕಷ್ಟು ತಡವಾಗಿ ಮುಟ್ಟಾಗುವುದು ಆತಂಕದ ಸಮಸ್ಯೆಗಳಿಗೆ ಕಾರಣವಾಗಬಹುದು.
ಋತುಚಕ್ರವು ಮಹಿಳೆಯರ ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಮತ್ತು ಅಡೆತಡೆಗಳನ್ನು ಉಂಟುಮಾಡುತ್ತದೆ. ಮುಟ್ಟು ಅನಿಯಮಿತವಾಗಿದ್ದಾಗ ಆತಂಕ ಹೆಚ್ಚಾಗುತ್ತದೆ. ಪರಿಣಾಮವಾಗಿ, ಮಾಸಿಕ ಮತ್ತಷ್ಟು ವಿಳಂಬವಾಗಬಹುದು. ನೀವು ಪ್ರತಿ ತಿಂಗಳು ಮುಟ್ಟಾಗಲು ತಡವಾಗಿದ್ದರೆ, ಕೆಲವೊಮ್ಮೆ ಮನೆಯಲ್ಲಿ ಕೆಲವು ಪಾನೀಯಗಳನ್ನು ಸೇವಿಸಿ. ಮುಟ್ಟು ತುಂಬಾ ಸ್ವಾಭಾವಿಕವಾಗಿ ಆಗುತ್ತದೆ.
ಶುಂಠಿ ಟೀ: ಶುಂಠಿ ಟೀ ಅಥವಾ ಶುಂಠಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಮುಟ್ಟು ವಿಳಂಬವಾಗುವುದನ್ನು ತಡೆಯಬಹುದು. ಹಾಗೆಯೇ ಸ್ನಾಯು ಸೆಳೆತವನ್ನು ತಡೆಯುತ್ತದೆ. ಒಂದು ಕಪ್ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕತ್ತರಿಸಿದ ಶುಂಠಿ ತುಂಡುಗಳನ್ನು ಹಾಕಿ ಕುದಿಸಿ ಸೋಸಿ ಕುಡಿಯಿರಿ.
ಸೈಡರ್ ವಿನೆಗರ್ : ಒಂದು ಟೀಚಮಚ ಆಪಲ್ ಸೈಡರ್ ವಿನೆಗರ್ ಅನ್ನು ತೆಗೆದುಕೊಂಡು ಅದನ್ನು ಬಿಸಿನೀರಿನೊಂದಿಗೆ ಮಿಶ್ರಣ ಮಾಡಿ. ಹಾರ್ಮೋನ್ ಸಮಸ್ಯೆಗಳ ನಿವಾರಣೆಗೂ ಇದು ನೆರವಾಗುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಮುಟ್ಟಿನ ಒಂದು ವಾರ ಮೊದಲು ಇದನ್ನು ಸೇವಿಸಿ. ಒಂದು ಲೋಟ ನೀರಿಗೆ, ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಮಿಶ್ರಣ ಮಾಡಿ ಪ್ರತಿದಿನ ಬೆಳಿಗ್ಗೆ ಕುಡಿಯಿರಿ.
ಜೀರಿಗೆ ಚಹಾ: ಮನೆಯಲ್ಲಿ ಮುಟ್ಟನ್ನು ಉತ್ತೇಜಿಸಲು ಸುಲಭವಾದ ಮಾರ್ಗವೆಂದರೆ ಜೀರಿಗೆ ಚಹಾವನ್ನು ತೆಗೆದುಕೊಳ್ಳುವುದು. ಒಂದು ಕಪ್ ಕುದಿಯುತ್ತಿರುವ ನೀರಿಗೆ ಒಂದು ಚಮಚ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಈ ಜೀರಿಗೆ ನೀರಿಗೆ ಸ್ವಲ್ಪ ಹಾಲನ್ನು ಬೆರಸಿ, ರುಚಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಕುಡಿಯಿರಿ
ಅನಾನಸ್ ಜ್ಯೂಸ್: ಅನಾನಸ್ನಲ್ಲಿರುವ ಬೋಮೆಲಿನ್ ಎಂಬ ಕಿಣ್ವವು ಮಹಿಳೆಯರಲ್ಲಿ ಮುಟ್ಟನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದಲ್ಲಿ ಬಿಳಿ ರಕ್ತ ಕಣಗಳು ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಆದ್ದರಿಂದ, ಋತುಬಂಧದ ಸಮಸ್ಯೆ ಇರುವವರಿಗೆ ಇದು ಉತ್ತಮ ಪರಿಹಾರವಾಗಿದೆ.
ಅರಿಶಿನ ಚಹಾ: ಅರಿಶಿನವನ್ನು ಆಹಾರ ಅಥವಾ ಹಾಲಿನೊಂದಿಗೆ ತೆಗೆದುಕೊಳ್ಳಬಹುದು. ಮುಟ್ಟನ್ನು ಉತ್ತೇಜಿಸುತ್ತದೆ. ನೀವು ಅರಿಶಿನವನ್ನು ನೀರಿನಲ್ಲಿ ಕುದಿಸಿ ಹಾಲಿನೊಂದಿಗೆ ಸೇವಿಸಬಹುದು. ಅಥವಾ ಅರಿಶಿಣ ಮಿಶ್ರಿತ ಬಿಸಿ ನೀರು.
(ಮೇಲೆ ಹೇಳಲಾಗಿರುವ ಪಾನೀಯ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಬದಲಾಗಿ ಮುಟ್ಟಾಗುವಿಕೆಯನ್ನು ವೇಗಗೊಳಿಸುತ್ತದೆ)