TO-LET ಬೋರ್ಡ್ ನೋಡಿ ಮನೆ ನೋಡಲು ಬಂದ ಜೋಡಿ…ಸೆಕ್ಸ್ ನಲ್ಲಿ ನಿರತ ! ಮನೆ ಮಾಲೀಕ ಶಾಕ್!!

Share the Article

ಏನೇ ಆಗಲಿ ಬಾಡಿಗೆ ಮನೆ ಹುಡುಕೋ ಕೆಲಸ ತುಂಬಾ ಕಷ್ಟ. ಸಿಕ್ಕರೂ ನಮಗೆ ಬೇಕಾದಂತಹ ಮನೆ ಸಿಗೋದು ಇನ್ನೂ ಕಷ್ಟ. ಎಲ್ಲಾ ರೀತಿಯ ವ್ಯವಸ್ಥೆ ಇದ್ದರೂ ಕೆಲವೊಮ್ಮೆ ಮನೆ ಪ್ರವೇಶ ಮಾಡಿದರೂ ಏನಾದರೂ ಒಂದು ಸಮಸ್ಯೆ ಉಂಟಾಗುವುದು, ಇದೆಲ್ಲಾ ಬಾಡಿಗೆಮನೆದಾರರ ಮಾಮು

ಆದರೆ ಇಲ್ಲೊಂದು ಜೋಡಿ ಬಾಡಿಗೆ ಮನೆ ಹುಡುಕೋದಕ್ಕೆ ಅಂತ ಹೋಗಿ, ಏನೋ ಮಾಡೋಕೆ ಹೋಗಿ ಏನೋ ಮಾಡಿದೆ ಅನ್ನುವ ಹಾಗೆ ನಡೆದಿದೆ ಈ ಪ್ರಸಂಗ.

ನಡೆದ ಪ್ರಸಂಗ : ಸಾಮಾನ್ಯವಾಗಿ ಮನೆ ಮುಂದೆ ಟು – ಲೆಟ್ ಬೋರ್ಡ್ ಹಾಕಿದರೆ, ಪ್ರತಿದಿನ ಐದಾರು ಮಂದಿ ಬಂದು ರೂಂ ನೋಡುವುದು ಸರ್ವೇ ಸಾಮಾನ್ಯ.
ಹೀಗೆ ಬಂದವರಿಗೆಲ್ಲ ಮನೆ ಮಾಲೀಕ ಅವರ ಜೊತೆಗೆನೇ ಹೋಗಿ, ಮನೆ ತೋರಿಸುವುದು ಸ್ವಲ್ಪ ಕಷ್ಟದ ಕೆಲಸ ಅಂತಾನೇ ಹೇಳಬಹುದು. ಹೀಗಾಗಿ, ಕೆಲ ಮಾಲೀಕರು ಏನು ಮಾಡುತ್ತಾರೆಂದರೆ, ಬೀಗದ ಕೈ ಅವರ ಕೈಗೆ ನೀಡಿ, ನೀವೇ ನೋಡ್ಕೊಳ್ಳಿ ಎಂದು ಮಾಲೀಕರು ಹೇಳುತ್ತಾರೆ. ಆದರೆ,ಇಂತಹ ತಪ್ಪು ನೀವೂ ಮಾಡುತ್ತಿದ್ದರೆ ಈ ಸ್ಟೋರಿಯನ್ನೊಮ್ಮೆ ಓದುವುದು ಒಳಿತು.

ಈ ಘಟನೆ ಹೈದರಾಬಾದ್‌ನ ಎಸ್‌ಆರ್ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನಡೆದಿದೆ. ಟು-ಲೆಟ್ ಬೋರ್ಡ್ ಹಾಕಿದ್ದ ಮನೆಗೆ ಬೈಕ್‌ನಲ್ಲಿ ಬಂದ ಜೋಡಿ ಮನೆಯ ಹೊರಗಡೆ ನಿಂತಿದ್ದ ಮಾಲೀಕನೊಂದಿಗೆ ಮಾತನಾಡಿದ್ದಾರೆ. ಈ ವೇಳೆ, ಅವರು ದಂಪತಿ ಎಂದು ಭಾವಿಸಿರುವ ಮಾಲೀಕ ಎರಡನೇ ಮಹಡಿಯಲ್ಲಿ ಮನೆ ಖಾಲಿ ಇದೆ ಎಂದು ಹೇಳಿ, ಅವರ ಕೈಗೆ ಕೀ ನೀಡಿದ್ದಾನೆ. ಅಲ್ಲಿಗೆ ತೆರಳಿರುವ ಜೋಡಿ, ಸ್ವಲ್ಪ ಸಮಯದ ನಂತರ ಕೆಳಗೆ ಬಂದಿದ್ದು ಮಾಲೀಕರ ಹತ್ತಿರ ಏನೋ ಹೇಳಿ, ಮತ್ತೆ ಮೇಲೆ ಹೋಗಿದೆ.

ಆದರೆ ಇವರು ಮತ್ತೊಮ್ಮೆ ಮೇಲೆ ಹೋಗಿದ್ದು ಏಕೆಂದರೆ, ಮನೆ ಖಾಲಿ ಇದೆ, ಮೇಲ್ಗಡೆ ಬೇರೆ ಇದೆ, ಯಾರೂ ಇಲ್ಲ…ಹಾಗಾಗಿ ಇಬ್ಬರಿಗೂ ರೊಮ್ಯಾನ್ಸ್‌ ಮೂಡ್ ಬಂದಿದೆ. ಹಾಗೇ ರೋಮ್ಯಾನ್ಸ್ ನಲ್ಲೇ ಈ ಜೋಡಿ ಮುಳುಗಿದೆ. ಇಬ್ಬರೂ ಇಹಲೋಕದ ಪ್ರಜ್ಞೆಯೇ ಇಲ್ಲದ ಸೆಕ್ಸ್ ನಲ್ಲಿ ನಿರತರಾಗಿದ್ದಾರೆ. ಆದರೆ ತುಂಬಾ ಹೊತ್ತಿನವರೆಗೆ ಅವರು ಕೆಳಗೆ ಬಾರದ ಕಾರಣ ಮನೆಯ ಮುಂದೆ ನಿಂತಿದ್ದ ಮಾಲೀಕ ಮೇಲೆ ಹೋಗಿದ್ದಾನೆ. ಈ ವೇಳೆ ಜೋಡಿಯ ದೃಶ್ಯ ನೋಡಿ, ದಿಢೀರ್ ಶಾಕ್‌ಗೊಳಗಾಗಿದ್ದಾನೆ. ಇದರ ಬೆನ್ನಲ್ಲೇ ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇದಾದ ಬಳಿಕ ಮನೆಯ ಹೊರಗೆ ಮತ್ತು ರೂಂ ಮುಂದೆ ಅಳವಡಿಕೆ ಮಾಡಿರುವ ಸಿಟಿಸಿವಿ ಕ್ಯಾಮೆರಾದಲ್ಲಿ ಇವರ ದೃಶ್ಯ ಅದರಲ್ಲಿ ಸೆರೆಯಾಗಿದೆ. ಇದೀಗ ಪೊಲೀಸ್ ಠಾಣೆಗೆ ತೆರಳಿರುವ ಮನೆ ಮಾಲೀಕ ಸಾಕ್ಷಿ ಸಮೇತವಾಗಿ ದೂರು ದಾಖಲು ಮಾಡಿದ್ದಾರೆ.

Leave A Reply

Your email address will not be published.