ಪೇಟಿಎಂ ಬಳಕೆದಾರರಿಗೆ ಜಬರ್ದಸ್ತ್ ಆಫರ್ !! | ಈ ಸಣ್ಣ ಕೆಲಸ ಮಾಡಿ, ಶೇ. 100 ರಷ್ಟು ಕ್ಯಾಶ್ ಬ್ಯಾಕ್ ನಿಮ್ಮದಾಗಿಸಿಕೊಳ್ಳಿ

ಈ ಡಿಜಿಟಲ್ ಯುಗದಲ್ಲಿ ಅನೇಕರು ಆನ್ಲೈನ್ ಪಾವತಿಯನ್ನು ನೆಚ್ಚಿಕೊಂಡಿದ್ದಾರೆ. ಸಣ್ಣಪುಟ್ಟ ಪಾವತಿಗಳಿಗೂ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಗಳನ್ನು ಬಳಸುತ್ತೇವೆ. ಈ ಅಪ್ಲಿಕೇಶನ್‌ಗಳ ಕುರಿತು ಮಾತನಾಡಲು ಹೋದರೆ, ಬಹುಶಃ ಪೇಟಿಎಂ ಹೆಸರನ್ನು ಜನರು ಮೊದಲು ಹೇಳುತ್ತಾರೆ. ಇದೀಗ ಪೇಟಿಎಂ ನಿಂದ ಗ್ರಾಹಕರಿಗೆ ಭರ್ಜರಿ ಆಫರ್ ಒಂದಿದೆ. ಪೇಟಿಎಂ ನಲ್ಲಿ ಈ ಸಣ್ಣ ಕೆಲಸವನ್ನು ಮಾಡುವ ಮೂಲಕ ನೀವು 100% ಕ್ಯಾಶ್‌ಬ್ಯಾಕ್ ಅನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

ಪೇಟಿಎಂ ನಲ್ಲಿ ನೀವು 100% ಕ್ಯಾಶ್‌ಬ್ಯಾಕ್ ಪಡೆಯಲು ಮೊದಲನೆಯದಾಗಿ, ನೀವು ನಿಮ್ಮ ಫೋನ್‌ನಲ್ಲಿ ಪೇಟಿಎಂ ಅಪ್ಲಿಕೇಶನ್ ಅನ್ನು ತೆರೆಯಬೇಕು. ನಂತರ ಮೊಬೈಲ್ ರೀಚಾರ್ಜ್ ವಿಭಾಗಕ್ಕೆ ಹೋಗಬೇಕು. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ನೆಟ್‌ವರ್ಕ್ ಪ್ರೋವೈಡರ್ ಹೆಸರು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಏಕೆಂದರೆ ಅದು ತಪ್ಪಾಗಿದ್ದರೆ ರೀಚಾರ್ಜ್ ಅನ್ನು ನೀವು ರದ್ದುಗೊಳಿಸಬಹುದು.

ನೆಟ್‌ವರ್ಕ್ ಪೂರೈಕೆದಾರರನ್ನು ಆಯ್ಕೆ ಮಾಡಿದ ನಂತರ, ಮುಂದಿನ ಪುಟಕ್ಕೆ ಹೋಗಿ ಮತ್ತು ಪಾವತಿ ಪುಟಕ್ಕೆ ಹೋಗುವ ಮೊದಲು, ‘ಪ್ರೋಮೋಕೋಡ್ ಅನ್ವಯಿಸು’ ಆಯ್ಕೆಯನ್ನು ಆರಿಸಿ. ಇಲ್ಲಿ ನೀವು ‘ಫಾಸ್ಟ್ ಫಾರ್ವರ್ಡ್’ ಆಯ್ಕೆಯನ್ನು ಆಯ್ದುಕೊಳ್ಳಬಾರದು ಎಂಬುದನ್ನು ನೆನಪಿನಲ್ಲಿಡಿ. ‘ಅಪ್ಲೈ ಪ್ರೊಮೊಕೋಡ್’ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ‘CRORECLUB’ ಪ್ರೊಮೊಕೋಡ್ ಟೈಪ್ ಮಾಡಿ.

ಒಂದು ವೇಳೆ ನೀವು ಅದಕ್ಕೆ ಅರ್ಹತೆ ಪಡೆದರೆ, ಮೊಬೈಲ್ ರೀಚಾರ್ಜ್‌ನಲ್ಲಿ 100% ಕ್ಯಾಶ್‌ಬ್ಯಾಕ್ ಪಡೆಯುವ ಅದೃಷ್ಟವಂತರಲ್ಲಿ ನಿಮ್ಮ ಹೆಸರೂ ಕೂಡ ರಾರಾಜಿಸುವುದು ಖಂಡಿತ. ಗರಿಷ್ಠ ಕ್ಯಾಶ್‌ಬ್ಯಾಕ್ ಒಂದು ಸಾವಿರ ರೂಪಾಯಿಗಳವರೆಗೆ ಪಡೆಯಬಹುದು ಎಂಬುದು ಇಲ್ಲಿ ಉಲ್ಲೇಖನೀಯ. ಆದಷ್ಟು ಬೇಗ ಈ ಆಫರ್ ನ ಪ್ರಯೋಜನ ಪಡೆದುಕೊಳ್ಳುವುದು ಒಳ್ಳೆಯದು.

Leave A Reply

Your email address will not be published.