‘ಕಚ್ಚಾ ಬದಾಮ್’ ಹಾಡಿಗೆ ಬೀದಿಯಲ್ಲಿ ಪೂರ್ವಸಿದ್ಧತೆ ಇಲ್ಲದೇ ಕುಣಿದ ಶಾಲಾ ವಿದ್ಯಾರ್ಥಿಗಳು.! ಹುಡುಗಿಯರಿಗಿಂತಲೂ ಚೆನ್ನಾಗಿ ಮಾಡಿದ್ದೀರಿ ಎಂಬ ಹೊಗಳಿಕೆಯ ಪಟ್ಟ ಗಿಟ್ಟಿಸಿಕೊಂಡ ಹುಡುಗರು!

0 23

ಬಂಗಾಲಿ ಹಾಡು ಕಚ್ಚಾ ಬದಾಮ್ ತುಂಬ ದೊಡ್ಡ ಟ್ರೆಂಡ್ ಸೃಷ್ಟಿಸಿದ ಹಾಡು. ಈ ಹಾಡಿನ ಕುರಿತು ಮಾಡಿದ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡಾ ಈ ಹಾಡಿಗೆ ಮನಸೋತು ಸ್ಟೆಪ್ ಹಾಕಿದ್ದಾರೆ. ಒಂದು ಲೆಕ್ಕದಲ್ಲಿ ಈ ಹಾಡು ಸಾಮಾಜಿಕ ಜಾಲತಾಣವನ್ನು ಆಳುತ್ತಿದೆ ಎಂದರೆ ತಪ್ಪಾಗಲಾರದು.

ಇತ್ತೀಚೆಗೆ ಈ ಪೂರ್ವಸಿದ್ಧತೆ ಇಲ್ಲದೆ ಕಚ್ಚಾ ಬದಾಮ್ ಹಾಡಿಗೆ ಬೀದಿಯಲ್ಲಿ ನರ್ತಿಸುವ ಸವಾಲಿನ ಟ್ರೆಂಡ್ ಒಂದು ಆರಂಭವಾಗಿದೆ. ಈ ಸವಾಲನ್ನು ವಿದ್ಯಾರ್ಥಿಗಳ ಗುಂಪೊಂದು ಸ್ವೀಕರಿಸಿ ಮಾಡಿದ ಡ್ಯಾನ್ಸ್ ಸಖತ್ ಮುದ ಕೊಟ್ಟಿದೆ.

ಶಾಲೆಗೆ ಹೋಗುವ ದಾರಿಯಲ್ಲಿ ವಿದ್ಯಾರ್ಥಿಗಳು ಯಾವುದೇ ಸಿದ್ಧತೆ ಇಲ್ಲದೆ ಈ ಹಾಡಿಗೆ ಮಾಡಿದ ನೃತ್ಯವು ಈಗ ಭಾರೀ ಆಕರ್ಷಣೆ ಸೃಷ್ಟಿಸಿದೆ. ಮುಂದೆ ಸಾಗುತ್ತಿದ್ದ ಒಬ್ಬ ಹುಡುಗ ನರ್ತಿಸಲು ಆರಂಭಿಸುತ್ತಿದ್ದಂತೆಯೇ ಆತನ ಸಂಗಡಿಗರೂ ಜತೆಯಾಗಿ ಹೆಜ್ಜೆಹಾಕಿದ್ದಾರೆ.

ಮೋಜಿನ ಈ ನೃತ್ಯವನ್ನು ಜನರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಹುಡುಗಿಯರಿಗಿಂತಲೂ ಹೆಚ್ಚು ಚೆನ್ನಾಗಿ ಮಾಡಿದ್ದೀರಿ ಎಂಬ ಪ್ರಶಂಸೆಯ ಮಾತುಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿದ್ದಾರೆ. ಪರೀಕ್ಷೆಯಲ್ಲಿ ಪಾಸಾದ ಖುಷಿಗೆ ಈ ಡ್ಯಾನ್ಸ್ ಮಾಡಿದ್ದಾ ಎಂದು ಕೆಲವರು ಕಾಲೆಳೆದಿದ್ದಾರೆ. ಒಟ್ಟಾರೆಯಾಗಿ ಮಕ್ಕಳ ಈ ಕುಣಿತ ನಿಮ್ಮ ಮನಸ್ಸಿನಲ್ಲಿ ನಗು ಮೂಡಿಸುವುದರಲ್ಲಿ ಎರಡು ಮಾತಿಲ್ಲ.

Leave A Reply