ಕೊರೋನ ನಾಲ್ಕನೇ ಅಲೆಗೆ ಭಯಭೀತರಾಗಿದ್ದ ಜನತೆಗೆ ರಿಲೀಫ್!
ಕೊರೋನ ನಾಲ್ಕನೇ ಅಲೆಯಿಂದ ಭಯಭೀತರಾಗಿದ್ದ
ಜನತೆಗೆ ಸದ್ಯ ರಿಲೀಫ್ ಸಿಕ್ಕಿದ್ದು,ಭಾರತದಲ್ಲಿ ಇನ್ನೂ ಸೊಂಕು ಪತ್ತೆಯಾಗಿಲ್ಲ ಎಂದು ವೈದ್ಯಕೀಯ ಸಂಶೋಧನ ಸಂಸ್ಥೆ ಹೇಳಿದೆ.
ದೇಶದಲ್ಲಿ ಇಳಿಮುಖವಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಕಳೆದ ಕೆಲವು ದಿನಗಳಿಂದ ಏರಿಕೆಯಾಗತೊಡಗಿದ್ದ ಕಾರಣ ಕೊರೋನಾ ನಾಲ್ಕನೆಯ ಅಲೆ ಆರಂಭವಾಗಿದೆಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಆತಂಕಕ್ಕೆ ಕಾರಣವಾಗಿತ್ತು.ಈ ಆತಂಕಕ್ಕೆ ಪೂರಕವೆಂಬಂತೆ ಸರ್ಕಾರಗಳು ಕೂಡ ಕೊರೊನಾ ಮಾರ್ಗಸೂಚಿಯನ್ನು ಹೊರಡಿಸಿದ್ದು, ಮಾಸ್ಕ್ ಧಾರಣೆ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬ ಅಂಶವನ್ನು ಒತ್ತಿ ಹೇಳಿದ್ದವು.
ಇದೀಗ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಹತ್ವದ ಮಾಹಿತಿಯನ್ನು ನೀಡಿದ್ದು, ಭಾರತದಲ್ಲಿ ಕೊರೊನಾದ ನಾಲ್ಕನೇ ಅಲೆ ಬಂದಿಲ್ಲ. ಬರುವ ಸಾಧ್ಯತೆಯೂ ಕಡಿಮೆ ಎಂದು ತಿಳಿಸಿದೆ. ಈಗ ಸೋಂಕು ಸ್ಥಳೀಯ ಮಟ್ಟದಲ್ಲಿ ಇದೆ ಎಂದು ಸ್ಪಷ್ಟಪಡಿಸಲಾಗಿದೆ.